ಜೇವರ್ಗಿ: ತಾಲ್ಲೂಕಿನ ಅವರಾದ್ ಶಾಹಾಪುರ್ ಮಾರ್ಗದ ಹೆದ್ದಾರಿ ತಡೆದು ಶಾಖಪುರ್(ಎಸ್) ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಒದಗಿಸಬೇಕೆಂದು ಎಸ್.ಎಫ್.ಐ ಸಂಘಟನೆ ಕಾರ್ಯಕರ್ತರು ರಸ್ತೆ ದಡೆದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಿದ್ದಲಿಂಗ್ ಪಾಳಾ ಮಾತನಾಡಿ ಶಕಪುರ (ಎಸ್.ಎ) ಗ್ರಾಮದ ಸುಮಾರು 30-40 ವಿದ್ಯಾರ್ಥಿಗಳು ಪ್ರತಿದಿನ ಶಾಲಾ ಮತ್ತು ಕಾಲೇಜಿಗೆ ತೆರಳು 5 ರಿಂದ 6 ಕಿ.ಮಿ ನಡೆದುಕೊಂಡು ಹೋಗಿತಿದ್ದಾರೆ ಎಂದು ಅವರು ತಿಳಿಸುದರು.
ಹಲವು ಬಾರಿ ತಹಶೀಲ್ದಾರ ಅವರಿಗೆ ಮನವಿ ಮಾಡಿದರು ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕುಡಲೇ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಒದಗಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮೈಲರಿ ದೊಡ್ಡಮನಿ, ಮಲ್ಲೇಶಿ ಹೊನಗುಂಟ, ವಿಶ್ವನಾಥ್ ರಾಗಿ, ಸಿದ್ದಣ್ಣಾ ಶಕಪುರ್, ಅಮೊಗ್ ಶಕಪುರ್, ಮಲ್ಕಣ್ಣಾ ಪೂಜಾರಿ ಸೇರಿದಂತೆ ಇತರರು ಇದ್ದರು.