ಆಳಂದ: ಪಟ್ಟಣದ ಮಹಾದೇವ ಮಂದಿರ (ಸುತ್ತಾನಪುರ ಬಡಾವಣೆ ) ಹತ್ತಿರದಲ್ಲಿ ನೂತನ ಖಂಡೋಬಾ ದೇವಾಲಯ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಲಾಯಿತು.
ಖಂಡೋಬಾ ಟ್ರಸ್ಟ್ ಸಮಿತಿಯ ವತಿಯಿಂದ 25ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆ ನಡೆಯಿತು.
ಶಾಸಕ ಸುಭಾಷ್ ಗುತ್ತೇದಾರ ಅವರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.ಬಳಿಕ ಮಾತನಾಡಿದ ಅವರು ದೇವಾಲಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಗುವುದು ಎಂದು ಭರವಸೆ ನೀಡಿದರು.
ನಂತರ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಇತ್ತು.ಸಂಜೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಖಂಡೋಬಾ ಜಾತ್ರೆಯ ಅಂಗವಾಗಿ ಮೆರವಣಿಗೆ ಮಾಡಲಾಯಿತು.ರಾತ್ರಿ ವಿವಿಧ ಭಜನಾ ಮಂಡಳಿಯಿಂದ ಭಜನೆ ಮಾಡಲಾಯಿತು.
ಪುರಸಭೆ ಸದಸ್ಯರಾದ ಶಿವಪುತ್ರ ನಡಗೆರಿ,ಧೊಂಡಿಬಾ ಮಾಜದ ಅಧ್ಯಕ್ಷರಾದ ಸಚೀನ ಬಂಡಗಾರ,ಮುಖಂಡರಾದ ರಾಜು ಬಂಡಗಾರ,ಪಂಡಿತ ಶೇರಿಕಾರ್,ತುಳಸಿರಾಮ ನರೋಟೆ,ದಿನೇಶ ಮರಾಠೆ,ವೆಂಕಟೇಶ್ ಮರಾಠೆ,ಯುವ ಪದಾಧಿಕಾರಿಗಳಾದ ವಿರೇಶ ಬಂಡಗಾರ,ವಿಶಾಲ ತರಂಗೆ ಸೇರಿದಂತೆ ಭಕ್ತರು ಮತ್ತಿತರರು ಪಾಲ್ಗೊಂಡಿದ್ದರು.