ಸಿಮೇನ್ಸ್ ಗೇಮಸ್ಸಾ ಕಂಪನಿಯ ವಿರುದ್ಧ ಕನ್ನಡಿಗರ ಆಕ್ರೋಶ

0
45

ಆಳಂದ: ಸಿಮೇನ್ಸ್ ಗೇಮಸ್ಸಾ ಕಂಪನಿಯಿಂದ ರೈತರೊಂದಿಗೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಹಾಗೂ ಈ ಕಂಪನಿಯಲ್ಲಿ ಕನ್ನಡಿಗರಿಗೆ ನೇಮಕಾತಿಗೆ ಒತ್ತಾಯಿಸಿ ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ ನೇತೃತ್ವದಲ್ಲಿ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಕುರಿತು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿ ಆಗ್ರಹಿಸಿದರು.

Contact Your\'s Advertisement; 9902492681

ತಾಲೂಕಿನ ಝಳಕಿ ಸೈಟ್‌ನಲ್ಲಿ ಈ ಕಂಪನಿಯಿಂದ ಪವನ ಶಕ್ತಿ ವಿದ್ಯುತ್ ಉತ್ಪಾದನೆಗಾಗಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ರೈತರ ಜಮೀನು ಖರೀದಿಸದೆ ಹಾಗೂ ಜಮೀನು ಕಳೆದಕೊಂಡ ರೈತರ ಕುಟುಂಬದ ಸದಸ್ಯರಿಗೆ ಕೆಲಸಕ್ಕೆ ತೆಗೆದುಕೊಂಡಿಲ್ಲ. ಕಂಪನಿಗೆ ಜಮೀನು ಕೊಟ್ಟ ರೈತರು ಕೆಲಸ ಕೇಳಿದರೆ, ನಿಮಗೆ ಲಿಖಿತರೂಪದಲ್ಲಿ ಕೆಲಸ ಕೊಡುವ ಭರವಸೆ ನೀಡಿಲ್ಲ ಎಂದು ಉಡಾಪೆಯ ಮಾತುಗಳು ಹೇಳುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಇದೇ ಕಂಪನಿಯವರು ನೇರವಾಗಿ ರೈತರ ಬಳಿಗೆ ಬಂದು ಜಮೀನು ಖರೀದಿಸಿರುವುದುಲ್ಲ. ಏಜ್ಂಟರ ಮೂಲಕ ಖರೀದಿ ಮಾಡಿದ್ದು, ಅಲ್ಲದೆ, ಜಮೀನು ಖರೀದಿಸಿದ ಬೆಲೆಯಲ್ಲಿ ತಾರತಮ್ಯ ಕೈಗೊಳ್ಳಲಾಗಿದೆ. ಆದರೆ ತಾಲೂಕಿನ ರೈತರ ಜಮೀನು ಬೆಲೆ ಒಂದೆ ಆಗಿದ್ದರಿಂದ ಎಲ್ಲರಿಗೂ ಒಂದೆ ರೀತಿಯ ದರವನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಂಪನಿಯಲ್ಲಿ ತಾಲೂಕಿನವರನ್ನು ಸೇವೆಗೆ ಪರಿಗಣಿಸಿದೆ ಹೊರ ರಾಜ್ಯಗಳಿಂದ ಬಂದವರನ್ನು ನೇಮಿಸಿಕೊಂಡಿದ್ದಾರೆ. ಇವರ ಭಾಷೆಗಳು ತಾಲೂಕಿನವರಿಗೆ ಅರ್ಥವೆ ಆಗುತ್ತಿಲ್ಲ. ಈ ತಾಲೂಕಿನಲ್ಲಿ ಕನ್ನಡ ಭಾಷೆ ಬಲ್ಲವರಾಗಿದ್ದರಿಂದ ಸ್ಥಳೀಯರನ್ನೇ ನೇಮಿಸಿಕೊಳ್ಳಬೇಕು. ವಿದ್ಯಾವಂತ ನಿರುದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಮತ್ತಷ್ಟು ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಬರೆದ ಮನವಿಯಲ್ಲಿ ಎಚ್ಚರಿಸಿದರು.

ಸಂಘಟನೆಯ ಅಧ್ಯಕ್ಷ ಮಹಾಂತೇಶ ಸಣ್ಣಮನಿ, ಭೂಸನೂರ ಗ್ರಾಮದ ಘಟಕದ ಅಧ್ಯಕ್ಷ ಕಲ್ಯಾಣಿ ಭೂಸನೂರ, ರೈತ ಮುಖಂಡ ಸೋಮಣ್ಣಾ ಕೋಳಿ, ಎಪಿಎಂಸಿ ಮಾಜಿ ನಿರ್ದೇಶಕ ಕಲ್ಯಾಣಿ ಜಮಾದಾರ, ಗುರುಶಾಂತಪ್ಪ ಜಮಾದಾರ, ಬರಹಗಾರ ಎಂ.ಕೆ. ಜಮಾದಾರ ಮತ್ತಿತರರು ಭಾಗವಹಿಸಿದ್ದರು.

ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಬೇಡಿಕೆಗೆ ಸ್ಪಂದಿಸುವಂತೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here