ಗಂಜಿ ಕೇಂದ್ರಕ್ಕೆ ಮಾಜಿ ಸಚಿವರ ಭೇಟಿ: ಉತ್ತಮ ವ್ಯವಸ್ಥೆಗೆ ಸೂಚನೆ

0
97

ಸುರಪುರ: ಕೃಷ್ಣಾ ನದಿ ಪ್ರವಾಹದಿಂದ ನದಿ ಪಾತ್ರದ ಅನೇಕ ಗ್ರಾಮಗಳ ಕುಟುಂಬಗಳಿಗೆ ಆಶ್ರಯ ಕಲ್ಪಿಸಿ ನಗರದ ಎಪಿಎಂಸಿ ಗಂಜ್‌ನಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು,ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ,ಯಾವುದೆ ರೀತಿಯ ಕೊರತೆಯಾಗದೆಂತೆ ನೋಡಿಕೊಳ್ಳಿ.ಅಲ್ಲದೆ ಸಂತ್ರಸ್ತರ ಮಕ್ಕಳಿಗೆ ಕಲಿಕಾ ವ್ಯವಸ್ಥೆಯನ್ನು ಕಲ್ಪಿಸಿ,ಯಾವುದೆ ರೀತಿಯ ತೊಂದರೆ ಕಂಡು ಬಂದಲ್ಲಿ ಅದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಮಾಜಿ ಸಚಿವರ ಜೊತೆಯಲ್ಲಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ಸರಕಾರ ನೆರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತ ಕುಟುಂಬಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ.ಮುಖ್ಯಮಂತ್ರಿಗಳು ಕೂಡಲೆ ರೈತರಿಗೆ ಪರಿಹಾರ ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು.

ನೆರೆಯಿಂದ ಹಾನಿಗೀಡಾದ ಜಮೀನುಗಳಿಗೆ ತಕ್ಷಣ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು.ನಂತರ ಗಂಜಿ ಕೇಂದ್ರದಲ್ಲಿನ ನಿರಾಶ್ರಿತರೊಂದಿಗೆ ಎಲ್ಲರು ಭೋಜನ ಸವಿದು ನಿರಾಶ್ರಿತರಿಗೆ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ಅಂಕಲಗಿ,ಅಶೋಕ ಸುರಪುರಕರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here