ಬಸವ ತತ್ವ ಬದುಕು ಸಾರ್ಥಗೊಳಿಸುತ್ತದೆ | ಬಸವ ತತ್ವ ಸಮಾವೇಶ

0
13

ಸುರಪುರ: ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದ ಬಳಿಯಲ್ಲಿ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ 21ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಬಸವ ತತ್ವ ಸಮಾವೇಶ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲನೆ ಮಾಡಿದ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿ ಮಾತನಾಡಿ, ಬಸವ ತತ್ವ ಎನ್ನುವುದು ಎಲ್ಲರ ಬದುಕನ್ನು ಹಸನು ಮಾಡುವ ಮಾರ್ಗವಾಗಿದೆ,ಅದನ್ನು ಅರಿತು ನಡೆದರೆ ಬದುಕು ಸಾರ್ಥಕವಾಗುತ್ತದೆ.ಆದ್ದರಿಂದ ಎಲ್ಲರ ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಚನ್ನಮಲ್ಲಿಕಾರ್ಜುನ ಗುಂಡಾನೂರ ಅವರು ತಮ್ಮ ತಂದೆ ತಾಯಿಯ ಸ್ಮರಣೆಯ ಅಂಗವಾಗಿ ಇಂತಹ ಸಮಾವೇಶ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ವಿ.ಪಾಟೀಲ್ ಮಾತನಾಡಿ,ಇಂದು ಆಳುವ ಸರಕಾರಗಳು ಮತ್ತು ರಾಜಕಾರಣಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ.ರೈತರ ಯಾವುದೇ ಬೇಡಿಕೆಯನ್ನು ಸರಕಾರಗಳು ಈಡೇರಿಸುತ್ತಿಲ್ಲ ಇದರಿಂದಾಗಿ ರೈತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ,ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಸರಕಾರಗಳ ಪಾತ್ರವೆ ದೊಡ್ಡದಿದೆ.ಆದರೆ ರೈತರ ಸಾವನ್ನು ಸರಕಾರಗಳು ಮದ್ಯೆ ಸೇವಿಸಿ ಸತ್ತರು ಎನ್ನುವು ಉಡಾಫೆ ಮಾತುಗಳನ್ನು ಹೇಳುತ್ತಿವೆ,ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದಲ್ಲಿ,ರಸಗೊಬ್ಬರ ಬೀಜ ಕ್ರಮಿನಾಶಕಗಳ ದರ ಕಡಿಮೆಗೊಳಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ರೈತರ ಬೇಡಿಕೆಗಳಿಗಾಗಿ ನಾನು ಯಾವುದೇ ಪಕ್ಷದಲ್ಲಿದ್ದರು ಅದ್ಯಾವುದನ್ನು ಲೆಕ್ಕಿಸದೆ ರೈತರ ಧ್ವನಿಯಾಗುವೆ.ನಾನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷನಾದ ಮೇಲೆ ಶಾಸಕ ರಾಜುಗೌಡ ಸೇರಿ ಇಂದು ಮುಳಗುವ ಹಂತದಲ್ಲಿದ್ದ ನಮ್ಮ ಡಿಸಿಸಿ ಬ್ಯಾಂಕ್ 20 ಕೋಟಿ ಲಾಭದಲ್ಲಿದೆ.ಇದುವರೆಗೆ ಕೇವಲ 20 ಪ್ರಶತ ರೈತರಿಗೆ ಸಾಲ ನೀಡುತ್ತಿದ್ದ ಕೃಷಿ ಪತ್ತಿನ ಸಹಕಾರ ಸಂಘಗಳು ಈಗ ಎಲ್ಲಾ ರೈತರಿಗೆ ಸಾಲ ನೀಡುವಂತಾಗಿದೆ.ಅದು ಪ್ರತಿ ಎಕರೆಗೆ 25 ಸಾವಿರದಂತೆ ಗರಿಷ್ಠ 3 ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ.ಸ್ತ್ರೀ ಶಕ್ತಿ ಸಂಘಗಳಿಗು ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದರು.

ನಂತರ ಸಾಹಿತಿ ಶಿವಣ್ಣ ಇಜೇರಿ,ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ,ನಯೋಪ್ರಾ ಮಾಜಿ ಅಧ್ಯಕ್ಷ ಸೂಗುರೇಶ ವಾರದ,ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.ನಂತರ ಶರಣಬಸಪ್ಪ ಯಾಳವಾರ,ಮೆಕ್ಯಾನಿಕ್ ಇಬ್ರಾಹಿಂ,ಕೊಂಗಂಡಿ ಪೋಸ್ಟ್ ಮಾಸ್ಟರ್ ಬಸವರಾಜ ಸಜ್ಜನ್,ಶರಣಪ್ಪ ನಾಲವಾರ,ಸಂಗಪ್ಪ ಬಂಡಿ ಗುಳೆದಗುಡ್ಡ,ಸಾಹಿತಿ ದೇವು ಯಕ್ಷಿಂತಿ ಇವರುಗಳಿಗೆ ಶರಣ ಸನ್ಮಾನ ನೆರವೇರಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಎಲ್ಲಾ ಗಣ್ಯರು ಬಸವ ದಿನಚರಿ ಬಿಡುಗಡೆಗೊಳಿಸಿದರು.

ಗಾಯಕ ಶ್ರೀಹರಿರಾವ್ ಆದ್ವಾನಿ ಹಾಗೂ ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನಗಾಯನ ನಡೆಸಿದರು. ಪತ್ರಕರ್ತ ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಗೌರವ ಕಾರ್ಯದರ್ಶಿ ಹೆಚ್.ರಾಠೋಡ ನಿರೂಪಿಸಿ ವಂದಿಸಿದರು.ಡಾ:ಎನ್.ಡಿ ಪುರತಗೇರಿ, ಚಂದ್ರಶೇಖರ, ಸಿ.ಬಿ ಬಾಗೋಡಿ,ಮಲ್ಲಣ್ಣ ಗುಳಗಿ, ಡಾ. ಎಮ್.ಎಸ್ ಕನಕರಡ್ಡಿ, ಹಣಮಂತ ಕೊಂಗಂಡಿ,ಜಗದೀಶ ಬೇಲಿ ಗುರುಮಠಕಲ್,ಮಲ್ಲಿಕಾರ್ಜುನ ಸೋಲಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here