ಸಂತಾನ ಕರುಣಿಸಿ ಶಿವನಾದ ಶರಣಬಸವರು

0
70

ಸಂತಾನ ಇಲ್ಲದವರಿಗೆ ಸಂತಾನ ಕರುಣಿಸಿ ಶರಣಬಸವರು ಶಿವನಾದರು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸುಮಂಗಲಾ ಎನ್.ರೆಡ್ಡಿ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಕಲಬುರಗಿಯ ಶಹಾಬಜಾರದಲ್ಲಿ ವಾಸಿಸುತ್ತಿರುವ ಬ್ರಾಹ್ಮಣ ಕುಟುಂಬದ ಲಕ್ಷ್ಮೀಗೆ ಮಕ್ಕಳಾಗಿರುವುದಿಲ್ಲ ಹತ್ತು ದೇವರಿಗೆ ಹರಕೆ ಹೊತ್ತರೂ ಮಕ್ಕಳಾಗದಿದ್ದಾಗ ಗೆಳತಿಯೊರ್ವಳು ಶರಣಬಸವರ ಆಶೀರ್ವಾದ ಪಡೆಯಲು ಹೇಳುತ್ತಾಳೆ. ಆದರೆ ಆಕೆಯ ಗಂಡ ಅದಕ್ಕೆ ಒಪ್ಪುವುದಿಲ್ಲ. ಆದರೂ ಗಂಡನಿಗೆ ಗೊತ್ತಾಗದೆ ಶರಣರಲ್ಲಿಗೆ ಬಂದು ’ ಸಂತಾನ ಕೊಟ್ಟು ನಿಮ್ಮ ಮಗಳನ್ನು ಕಾಪಾಡಪ್ಪ’ ಎಂದು ಅಂಗಲಾಚುತ್ತಾಳೆ. ಮುಂದೆ ಲಕ್ಷ್ಮೀ ಗರ್ಭೀಣಿಯಾಗುತ್ತಾಳೆ. ಸಾವಿರ ಹೋಳಿಗೆ ಮಾಡಿಸಿ ಶರಣರ ದಾಸೋಹಕ್ಕೆ ಕಳುಹಿಸುತ್ತಾಳೆ. ಈ ವಿಷಯ ಆಕೆಯ ಗಂಡನಿಗೆ ಗೊತ್ತಾಗಿ ಹೊಡೆದು ಹೊರ ಹಾಕುತ್ತಾನೆ. ಆಕೆ ಶರಣರಲ್ಲಿಗೆ ಬಂದು ಅಳುತ್ತಾಳೆ. ಆಕೆಯ ಗಂಡನಿಗೆ ಬುದ್ಧಿಕಲಿಸಬೇಕೆಂದು ಗಂಡನ ಮನೆಗೆ ಹೋಗಲು ಅವಳಿಗೆ ತಿಳಿಸುತ್ತಾರೆ. ಅವಳ ಗರ್ಭ ಇಳಿದು ಹೋಗುತ್ತದೆ. ಆಗ ಗಂಡನಿಗೆ ಅರಿವಾಗಿ ಶರಣರಲ್ಲಿ ಬಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಆಗ ಶರಣರು ಜಾತಿಯತೆಯಿಂದ ಹೊರಬಂದು ಮಾನವೀಯತೆಯಿಂದ ಬದುಕಲು ತಿಳಿಸುತ್ತಾರೆ.

ಒಂದು ಸಲ ವ್ಯಾಪಾರಿಗಳ ದಂಡೊಂದು ರೇಷ್ಮೆ ವಸ್ತ್ರದಗಳನ್ನು ತೆಗೆದುಕೊಂಡು ಸೊಲ್ಲಾಪುರಕ್ಕೆ ಹೊರಟು ಶರಣರ ದರ್ಶನಕ್ಕೆ ಬರುತ್ತಾರೆ. ಶರಣರು ಅವರಿಗೆ ಪ್ರಸಾದ ಮಾಡಲು ಹೇಳುತ್ತಾರೆ ಆದರೆ ಅವರು ಶರಣರಿಗೆ ಕಂಬಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿ ಪ್ರಸಾದ ಮಾಡದೇ ಹೋಗುತ್ತಾರೆ. ಸೋಲ್ಲಾಪುರಕ್ಕೆ ಹೋಗಿ ವಸ್ತ್ರಗಳ ಗಂಟು ಬಿಚ್ಚಿ ನೋಡಿದಾಗ ರೇಷ್ಮೆ ವಸ್ತ್ರಗಳು ಕಂಬಳಿಗಳಾಗುತ್ತವೆ. ಆಗ ಅವರಿಗೆ ಶರಣರಿಗೆ ತಪ್ಪು ಹೇಳಿದ್ದೇವೆ ಎಂಬ ಅರಿವಾಗುತ್ತದೆ. ಕಲಬುರಗಿಗೆ ಬಂದು ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಹೇಳುತ್ತಾರೆ. ಆಗ ಶರಣರು ಪ್ರಸಾದ ಬಿಟ್ಟು ಹೋಗಿದ್ದಕ್ಕಾಗಿ ಹಾಗೇ ಅಗಿದೆ ಹೊರತು ನನಗೆ ಸುಳ್ಳು ಹೇಳಿದಕ್ಕಲ್ಲ ಎಂದು ಬುದ್ಧಿ ಹೇಳುತ್ತಾರೆ.

ಒಂದು ಸಲ ಭಯಂಕರ ಮಳೆಯಾಗಿ ದಾಸೋಹಕ್ಕೆ ಕಟ್ಟಿಗೆಗಳು ಕಡಿದು ಬಿದ್ದವು. ಎಷ್ಟು ಕಟ್ಟಿಗೆ ಕುಳ್ಳುಗಳನ್ನು ತಂದರು ದಾಸೋಹಕ್ಕೆ ಉರುವಲು ಕಡಿಮೆ ಬಿಳತೊಡಗಿತು. ಗಂಗಮ್ಮ ಎನ್ನುವ ಬಡ ಹೆಣ್ಣು ಮಗಳು ಸಾವಿರ ಕುಳ್ಳುಗಳನ್ನು ಶರಣರಿಗೆ ತಂದು ಅರ್ಪಿಸಿದಳು. ಆಗ ಶರಣರು ಆಕೆಗೆ ಸಂತಾನದ ಭಾಗ್ಯ ಕರುಣಿಸಿದರು.
ಕಮಲಾಪುರದಲ್ಲಿ ವೀರಣ್ಣ ಎನ್ನುವ ಸಾಹುಕಾರ ಶರಣರ ಪರಮ ಭಕ್ತ ಅತನಿಗೆ ಇಬ್ಬರು ಹೆಂಡಂದಿರು. ಮಕ್ಕಳಾಗಿರಲಿಲ್ಲ.

ಶರಣರು ಎರಡು ಖಾರಿಕ ಕೊಟ್ಟು ಇಬ್ಬರಿಗೊಂದೊಂದು ಕೊಡಲು ಹೇಳುತ್ತಾಳೆ. ಸಣ್ಣ ಹೆಂಡತಿ ದೊಡ್ಡ ಹೆಂಡತಿಗೆ ಕೊಡದೆ ಎರಡು ತಾನೇ ತಿನ್ನುಳ್ಳುತ್ತಾರೆ. ಮುಂದೆ ಅವಳು ಗರ್ಭ ಧರಿಸುತ್ತಾಳೆ. ಆದರೆ ಬಾಣಂತನವಾಗುವುದಿಲ್ಲ. ನೋವು ತಾಳಲಾರದೆ ಮೂರ್ಛೆ ಹೋಗುತ್ತಾಳೆ. ಆಗ ವೀರಣ್ಣ ಸಾಹುಕಾರ ಶರಣರಲ್ಲಿಗೆ ಹೋಗಿ ಕೇಳಿದಾಗ ಶರಣರು ನಿನ್ನ ಸಣ್ಣ ಮಡದಿ ಅಕ್ಕನಿಗೆ ಕೊಡದೆ ತಾನೇ ಖಾರಿಕ ತಿಂದಿದ್ದಾಳೆ ಎಂದು ಹೇಳುತ್ತಾರೆ. ಮನೆಗೆ ಬಂದು ಕೇಳಿದಾಗ ಮಡದಿ ತಪ್ಪು ಒಪ್ಪಿಕೊಳ್ಳುತ್ತಾಳೆ. ಮುಂದೆ ಎರಡು ಗಂಡು ಮಕ್ಕಳು ಹುಟ್ಟುತ್ತವೆ. ಮೊದಲ ಹುಟ್ಟಿ ಮಗುವನ್ನು ದೊಡ್ಡವಳ ಉಡಿಯೊಳಗೆ ಹಾಕುತ್ತಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here