86 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರತಿನಿಧಿಗಳಾಗಿ ನೋಂದಾಯಿಸಲು ಮನವಿ

0
30

ಕಲಬುರಗಿ: ಕನ್ನಡಿಗರ ಸಾರ್ವಭೌಮತೆಯ ದ್ಯೋತಕವಾಗಿ ಜನವರಿ 6, 7 ಮತ್ತು 8 ರಂದು ಹಾವೇರಿಯಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿರುವ ಆಸಕ್ತರು ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದ್ದು, ಕನ್ನಡ ಭವನದಲ್ಲಿ ಬುಧವಾರದಂದು ಸರಕಾರದ ವಿವಿಧ ಇಲಾಖೆಗಳ ನೌಕರರ ಬಾಂಧವರು ಪಾಲ್ಗೊಳ್ಳಲು ಅನೇಕರು 500 ರೂ ಗಳನ್ನು ನೀಡಿ ಪ್ರತಿನಿಧಿಗಳಾದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ವಿಶೇಷ ಗಮನ ಸೆಳೆದಿರುವ ಸಾಹಿತ್ಯ ಸಮ್ಮೇಳನಕ್ಕೆ ದೇಶದ ಮೂಲೆ ಮೂಲೆಗಳಿಮದ ಕನ್ನಡಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಸಾಹಿತ್ಯ ಸಮ್ಮೇಳನವು ನಾಡು-ನುಡಿ, ಸಂಸ್ಕøತಿ, ಆಚಾರ-ವಿಚಾರವನ್ನು ಬಿಂಬಿಸುವುದರಿಂದ ಭವಿಷತ್ತಿನ ರಾಷ್ಟ್ರ ನಿರ್ಮಾಣದ ರೂವಾರಿಗಳಾದ ವರ್ತಮಾನದ ಹೊಸ ಪೀಳಿಗೆ ಹೆಚ್ಚು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಇಂದು ಕನ್ನಡ ಭಾಷೆಗೆ ಸಂಕಷ್ಟ ಎದುರಾಗಿದೆ. ಇದನ್ನು ಸವಕಲು ನಾಣ್ಯವನ್ನಾಗಿ ಮಾಡದೇ ಸದಾ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಹಾಗಾಗಿ ಆ ಕಾರ್ಯವನ್ನು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮಾಡೋಣ ಎಂದರು.

ಜಿಲ್ಲಾ ಕಸಾಪ ಗೌರವ ಕಾಂiÀರ್iದರ್ಶಿಗಳಾದ ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಬಿ.ಎಂ.ಪಾಟೀಲ ಕಲ್ಲೂರ, ಪದ್ಮಾವತಿ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here