ಒಂದು ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ಒಮ್ಮೆ ನೆನೆ ಮನವೆ

0
39
  • ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ

ರೈತ ಕೃಷಿಯನ್ನು ಬಳಸಿಕೊಂಡು ಬೆಳಸಿಕೊಂಡು ಬೆಳೆಗಳನ್ನು ಬೆಳೆಯುತ್ತಾನೆ. ರೈತನ ಮೂಲ ವೃತ್ತಿಯಾದ ಕೃಷಿ ಬೇಸಾಯವನ್ನು ಮಾಡಿ ನಾಡಿನ ಸಮಸ್ತ ಕನ್ನಡಿಗರು ಆಹಾರವನ್ನು ನೀಡುತ್ತಾರೆ. ರೈತರು ಅವರ ಇಡೀ ಜೀವನ ಹೊಲ, ಗದ್ದೆ,ಬೇಸಾಯದಲ್ಲೆ ಅವರ ಜೀವನವನ್ನು ಸಾಗಿಸುತ್ತಾರೆ. ಭಾರತದ ರೈತರು ಪ್ರಪಂಚದಾದ್ಯಂತದ ಕಠಿಣ ಶ್ರಮಿಕ ರೈತ. ರೈತ ದೇಶದ ಬೆನ್ನಲುಬು,ಕೃಷಿಯೇ ದೇಶದ ಆರ್ಥಿಕತೆಯ ಮೂಲ  ರೈತ ದೇಶದ ಬೆನ್ನಲುಬು ಎನ್ನುತ್ತೇವೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಶೇ.55 ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ. ಆದರೆ ಹಲಾವರು ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ,ಆರ್ಥಿಕ ನಷ್ಟವನ್ನು ಸಹಿಸಿಕೊಳ್ಳಲಾಗಿದೆ ಸಾಲದ ಹೊರೆಯಿಂದ ಹೊರ ಬರಲಾಗದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಸ್ತುತ ರೈತರ ಜೀವನ: ರೈತ ಕೃಷಿಯನ್ನು ಬಳಸಿಕೊಂಡು ಬೆಳಸಿಕೊಂಡು ಬೆಳೆಗಳನ್ನು ಬೆಳೆಯುತ್ತಾನೆ. ರೈತನ ಮೂಲ ವೃತ್ತಿಯಾದ ಕೃಷಿ ಬೇಸಾಯವನ್ನು ಮಾಡಿ ನಾಡಿನ ಸಮಸ್ತ ಜನರಿಗೂ ಆಹಾರವನ್ನು ನೀಡುತ್ತಾರೆ. ರೈತರು ಅವರ ಇಡೀ ಜೀವನ ಹೊಲ, ಗದ್ದೆ,ಬೇಸಾಯದಲ್ಲೆ ಅವರ ಜೀವನವನ್ನು ಸಾಗಿಸುತ್ತಾರೆ.

Contact Your\'s Advertisement; 9902492681

ನಮ್ಮ ಭಾರತದ ರೈತರು ಪ್ರಪಂಚದಾದ್ಯಂತದ ಕಠಿಣ ಶ್ರಮಿಕ ರೈತ. ಹಗಲಿರುಳು ದುಡಿದು ಬೆಳೆಗಾಗಿ ಕೃಷಿಯಲ್ಲಿ ಸದಾ ನಿರಂತರಾಗಿರುತ್ತಾರೆ. ಅವರು ಸೂರ್ಯನ ಶಾಖದ ಅಡಿಯಲ್ಲಿ ಮತ್ತು ಮಳೆಯಲ್ಲೂ ಕೆಲಸ ಮಾಡುತ್ತಾರೆ.

ಭೂಮಿಯನ್ನು ಉಳುಮೆ ಮಾಡಿ ಬೀಜ ಬಿತ್ತಿ ಬೆಳೆಗಳನ್ನು ಬೆಳೆಯುತ್ತಾರೆ.ಶ್ರಮದಿಂದ ಕೆಲಸವನ್ನು ಮಾಡುತ್ತಾರೆ. ಅವರ ಬೆಳೆಗಳಿಗೆ ಉತ್ತಮವಾದ ಬೆಲೆಯು ಸಿಗುವುದನ್ನು ಕಾಯುತ್ತಾರೆ, ಅವರ ಜೀವನಕ್ಕೆ ಆಧಾರವೆ ಕೃಷಿಯಾಗಿರುತ್ತದೆ.

ರೈತರ ಆರ್ಥಿಕ ಸ್ಥಿತಿ: ರೈತರು ಬಡವರಾಗಿದ್ದಾರೆ. ನಮ್ಮ ದೇಶದ ಬೆನ್ನಲುಬು ನಮ್ಮ ರೈತ, ಇಡೀ ದೇಶಕ್ಕೆ ಅನ್ನ ಹಾಕುತ್ತಾನೆ ಆದರೆ ವಿಧಿ ಕೆಲವೊಂದು ಸಾರಿ ರೈತ ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುತ್ತದೆ. ಬಡತನದ ಸ್ಥಿತಿ ಅವರನ್ನು ಹಾಗೆ ಮಾಡುತ್ತದೆ.

ರೈತರು ಆರ್ಥಿಕವಾಗಿ ಹಿಂದೂಳಿದುದರಿಂದ ಅವರ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಮಕ್ಕಳ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಇದು ನಮ್ಮ ರೈತರ ಪ್ರಸ್ತುತ ಜೀವನ. ರೈತರು ಹಗಲಿರುಳು ದುಡಿದರು ಅವರು ಕೆಲವೊಂದು ಸಾರಿ ಎರಡು ಹೊತ್ತು ಊಟ ಮಾಡಿ ಒಂದು ಹೊತ್ತು ಹಾಗೆ ಮಲಗುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.

ರೈತರ ಪ್ರಾಮುಖ್ಯತೆ ಮತ್ತು ಪಾತ್ರ: ಪ್ರತಿಯೊಬ್ಬರಿಗೂ ದೊರೆಯುವ ಬೆಳೆಕಾಳು,ದವಸ ಧಾನ್ಯ, ತರಕಾರಿಗಳನ್ನು ರೈತನು ಎಲ್ಲಾರಿಗೂ ಸುಲಭವಾಗಿ ಸಿಗುವಂತೆ ಮಾಡುತ್ತಾರೆ.ಎಲ್ಲರಗೂ ಪೂರೈಸುತ್ತಾರೆ. ರೈತನು ದುಡಿಯುವುದರ ಜೊತೆಗೆ ಅವರ ಪತ್ನಿ ಕೂಡ ಹೊಲದಲ್ಲಿ ದುಡಿಯುತ್ತಾಳೆ ಅವಳು ಮನೆಯ ಎಲ್ಲ ಕೆಲಸವನ್ನು ಮಾಡಿಕೊಂಡು ಪತಿಗೆ ಸಹಾಯ ಮಾಡುತ್ತಾರೆ. ಇಲ್ಲಿ ರೈತ ಮತ್ತು ಅವನ ಹೆಂಡತಿಯ ಪಾತ್ರ ಬಹಳ ಮುಖ್ಯವಾಗಿದೆ. ಜೀವ ಸಂಕುಲವನ್ನು ರೈತ ಕಾಪಾಡುತ್ತಿದ್ದನೆ. ರೈತರು ಆರ್ಥಿಕವಾಗಿ ಕಷ್ಟದಲ್ಲಿ ಇದ್ದರು ಅವರು ದುಡಿಯುವುದು ಬೀಡುವುದಿಲ್ಲ

ರೈತರ ಆತ್ಮಹತ್ಯೆಗಳು: ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆಗಳು ಬಹಳ ಹೆಚ್ಚಾಗುತ್ತಿದೆ. ಸಾಲದ ಹೊರೆ ಹೆಚ್ಚಾದಂತೆ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೃಷಿ ಆಮದಿನ ಮೇಲಿನ ನಿರ್ಬಂದ ರದ್ದಾಗಿದ್ದು ದೇಶಿಯ ರೈತರು ಸಬ್ಸಿಡಿ ಬೆಂಬಲಿತ ಅಂತರಾಷ್ಟೀಯ ಕೃಷಿಯ ಉತ್ಪನ್ನಗೊಳೊಂದಿಗೆ ಸ್ವದಿಸಲಾಗದಿರುವುದು ಬೆಲೆಯು ಕುಸಿತವಾಗಿದೆ.

ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಪ್ರಕೃತಿಯ ವಿಕೋಪಗಳು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಒಂದು ಕಡೆ ಬೆಳೆದಿರುವ ಬೆಳೆಗಳಿಗೆ ಸರಿಯಾದ ಮಳೆಯು ಸಿಗದೇ ಇರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಇನ್ನೊಂದು ಕಡೆ ಬೀರುಗಾಳಿ, ಚಂಡಮಾರುತ, ಪ್ರವಾಹಗಳಿಂದ ರೈತನ ಬೆಳೆಗಳು ನೀರಿನ ಪಾಲಾಗುತ್ತಿದೆ. ಇದರಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದಾರೆ. ಕೃಷಿಗೆ ಬೇಕಾದ ರಸಗೊಬ್ಬರ, ಕೀಟನಾಶಕ, ಕೃಷಿ ಸಂರಕ್ಷಣೆ, ವಿದ್ಯುತ್‌, ನೀರು, ಇವುಗಳು ದುಬಾರಿ ಪರಕರಗಳಾಗಿದೆ.

ರೈತರ ಆತ್ಮಹತ್ಯೆ ತೆಡೆಗಟ್ಟುವ ಕ್ರಮಗಳು: – ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಳೆಗಳು ಸಿಗುವಂತೆ ಮಾಡುವುದು. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು, ಬಡ್ಡಿದರವನ್ನು ಕಡಿಮೆ ಮಾಡಬೇಕು.ಇನ್ನಿತರ ಸಮಸ್ಯೆಗಳನ್ನು ತಡೆಗಟ್ಟಿ ರೈತರ ಬಾಳು ಹಾಸನಗಿಸಬೇಕ್ಕೇನುವುದೇ ನಮ್ಮೆಲ್ಲರ ಆಶಯ.

ಗ್ರಾಮೀಣ ಭಾಗದಲ್ಲಿ ಬದಲಾವಣೆಗಳು ಅಗುತ್ತಿದೆ, ಅದರೂ ಇನ್ನೂ ಬದಲಾವಣೆಗಳು ಅಗಬೇಕು. ಅನ್ನದಾತರಾದ ರೈತರು ಆರ್ಥಿಕರಾಗಿ ಸಧೃಢರಾಗಬೇಕು ಹಾಗೂ ನೈಸರ್ಗಿಕ, ಸಾವಯುವ ಕೃಷಿಗೆ ಒತ್ತು ನೀಡಬೇಕು.ನಮ್ಮ ಸರಕಾರವು ರೈತರಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸಿ, ವ್ಯವಸಾಯವನ್ನು ಅಭಿವೃದ್ದಿಗೊಳಿಸಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here