ಕಲಬುರಗಿ: ಪ್ರತಿಯೊಬ್ಬರ ಜೀವನದಲ್ಲಿನ ಸಣ್ಣ ಸಣ್ಣ ಕಷ್ಟ, ತೊಂದರೆಗಳೇ ದೊಡ್ಡ ಸಂತೋಷಕ್ಕೆ ಅಡಿಪಾಯವಾಗುತ್ತವೆ. ಹೀಗಾಗಿ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದು ಡಾ. ಡಿ.ಎಚ್.ರಾವ್ ಸಲಹೆ ನೀಡಿದರು.
ನಗರದ ಶರಣಬಸವ ವಿವಿಯ ಶತಮಾನೋತ್ಸವ ಸಭಾಂಗಣದಲ್ಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಮಹತ್ವ ಕುರಿತು ಮಾತನಾಡಿದ ಅವರು, ಕರುಣಿ, ಪ್ರೋತ್ಸಾಹ, ಸಹಾಯ, ಧನ್ಯವಾದ ಸಲ್ಲಿಸುವಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಸಮಾಜಕ್ಕೆ ನಾವು ಏನು ಕೊಡುಗೆ ನೀಡುತ್ತಿವೋ, ಸಮಾಜ ಅದನ್ನೇ ನಮಗೆ ಹಿಂದಿರುಗಿಸುತ್ತದೆ ಅದಕ್ಕಾಗಿ ಈ ಸಮಾಜದಲ್ಲಿ ಯೋಗ್ಯ ರೀತಿಯಿಂದ ಬಾಳಬೇಕು ಎಂದು ನುಡಿದರು.
ಪ್ರತಿಯೊಬ್ಬರ ಜೀವನದ ಯಶಸ್ಸಿನ ಕಥೆಯ ಕತೃ ತಾವೇ ಆಗಿರುತ್ತಾರೆ. ಭವಿಷ್ಯ ಎಂಬುದು ಒಂದು ಸೇತುವೆ ಇದ್ದ ಹಾಗೆ. ವಿದ್ಯಾರ್ಥಿ ಜೀವನ ಎಂಬುದು ಸೇತುವೆಯ ಮೊದಲ ಹೆಜ್ಜೆಯಾಗಿರುತ್ತದೆ. ಪ್ರತಿ ಹೆಜ್ಜೆಯೂ ಸಮಯ ಪ್ರಜ್ಷೆ, ಗಂಭಿರತೆಯಿಂದ ಕೂಡಿದರೇ, ಸೇತುವೆಯ ಕೊನೆಯ ಹೆಜ್ಜೆಯೂ ಅಷ್ಟೇ ಯಶಸ್ಸಿನಿಂದಲೇ ಕೂಡಿರುತ್ತದೆ. ಆ ಯಶಸ್ಸು ಎಂಬುದೇ ನಿಮ್ಮ ಉಜ್ವಲ ಭವಿಷ್ಯ ಎಂದು ತಿಳಿಯಪಡಿಸಿದರು.
ನಾವು ಈ ಜಗತ್ತಿನಲ್ಲಿ ಕೊಡುವರು ಮತ್ತು ತೆಗೆದುಕೊಳ್ಳುವರು ಎಂಬ ಎರಡು ವರ್ಗದ ಜನರನ್ನು ಕಾಣುತ್ತೇವೆ. ತೆಗೆದುಕೊಳ್ಳುವ ವ್ಯಕ್ತಿಗೆ ಬೆಲೆಯಿಲ್ಲ. ನಮ್ಮ ಇತಿಹಾದ ಮಹಾನ್ ವ್ಯಕ್ತಿಗಳೆಲ್ಲ ಈ ಜಗತ್ತಿಗೆ ಉತ್ತಮ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಹೀಗಾಗಿಯೇ ಅವರು ಚೀರಸ್ಥಾಯಿಯಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೊಡುವಂತಹ ಮಹಾನ್ ವ್ಯಕ್ತಿತ್ವ ಸೃಷ್ಠಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರೊ. ಪ್ರಿಯದರ್ಶಿನಿ ನಿರೂಪಿಸಿದರು. ಪ್ರೊ. ಸ್ವಾತಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಮ್ಯಾ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಸುಮನ್ ಪಾಟೀಲ ಅತಿಥಿ ಪರಿಚಯ ಮಾಡಿದರು. ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರ, ಡೀನ್ ಲಕ್ಷ್ಮಿ ಮಾಕಾ ಉಪಸ್ಥಿತರಿದ್ದರು.