ಬಿಜೆಪಿ ಆಡಳಿತದಲ್ಲಿ ಕಾಳಗಿ ಅಭಿವೃದ್ಧಿ ಶೂನ್ಯ

0
27

ಕಾಳಗಿ: ನೆಟೆ ರೋಗ ಬಂದು ಕಂಗಾಲಾದ ರೈತರಿಗೆ ಸ್ಪಂದಿಸಬೇಕಾದ ಶಾಸಕರು ರೈತರ ಕಡೆ ತಿರುಗಿಯೂ ನೋಡದೆ ಎ ಸಿ ಕಾರಲ್ಲಿ ತೀರುಗುತ್ತಿದ್ದಾರೆ ಎಂದು ಕಾಳಗಿ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೋಟಗಿ ಆರೋಪಿಸಿದರು.

ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಳಗಿ ತಾಲ್ಲೂಕು ಆಗಿ ವರ್ಷಗಳೆ ಕಳೆದರು ಒಂದು ಕಛೇರಿ ಸ್ಥಾಪಿಸಲು ಸಾಧ್ಯವಾಗಿಲ್ಲ ಹಾಗೂ ಕಾಳಗಿ ಗ್ರಾಮ ಪಂಚಾಯತಿ ಇಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಲು ಅಂದಿನ ನಮ್ಮ ಕಾಂಗ್ರೆಸ್ ಸರ್ಕಾರ ಕಾರಣವಾಗಿದ್ದು ,ಅದನ್ನ ಬಿಜೆಪಿ ಸರಕಾರದ ಸಾಧನೆ ಎಂದು ಹೇಳಲು ನೈತಿಕತೆ ಅವರಿಗಿಲ್ಲ ,ನೂತನ ತಾಲೂಕ ಕಚೇರಿಗಳು ಸ್ಥಾಪಿಸಿ ಪಟ್ಟಣ ಅಭಿವೃದ್ಧಿ ಪಡಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ.

Contact Your\'s Advertisement; 9902492681

ತಾಲೂಕಿನ ನೂತನ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತಿದ್ದು ಅದು ಸಂಪೂರ್ಣ ಕಳಪೆಯಾಗಿದೆ , .ಪಟ್ಟಣ ಪಂಚಾಯತ ವತಿಯಿಂದ ಕಾಮಗಾರಿಗಳು ನಡೆಯುತ್ತಿದ್ದು ಇದರಲ್ಲಿ ಶಾಸಕರ ಅನುದಾನ ಇಲ್ಲವೇ ಇಲ್ಲಾ ಇವರ ಅನುದಾನವಿದ್ದಲಿ ತೋರಿಸಲಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಾಸಕರ ಕೈಗೊಂಬೆಯಂತೆ ವರ್ತಿಸುತಿದಾರೆ.

ಪಟ್ಟಣ ಪಂಚಾಯತನಿಂದ ನಿರಾಶ್ರೀತರಿಗೆ ಆಶ್ರಯ ಮನೆಗಳು ಬಂದಿದ್ದು ಕಾನೂನು ಪ್ರಕಾರ ಗ್ರಾಮ ಸಭೆ ಮಾಡಿ ಮನೆ ಹಂಚಿಕೆ ಮಾಡಬೇಕು ಆದರೆ ಇವರು ಮನಬಂದಂತೆ ಮನೆ ಹಂಚಿಕೆ ಮಾಡುತಿದ್ದಾರೆ, 5 ಮತ್ತು 6 ವಾರ್ಡಿನಲ್ಲಿ ಶೌಚಾಲಯ ನಿರ್ಮಾಣಮಾಡಲು ಜಿಲ್ಲಾಧಿಕಾರಿ ಆದೇಶ ಮಾಡಿದರು ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಕೊಡದ ಇವರು ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ಇವರ ದೊಡ್ಡ ಸಾಧನೆಯಾಗಿದೆ.ಎಂದು ಕಾಳಗಿ ನಗರ ಘಟಕದ ಅಧ್ಯಕ್ಷ ವೇದಪ್ರಕಾಶ ಮೋಟಗಿ ಆರೋಪಿಸಿದರು.

ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ವಕ್ತಾರಾದ ರಾಘವೇಂದ್ರ ಗುತ್ತೆದಾರ, ಜಗನಾಥ ಚಂದನಕೇರಿ,ರವಿದಾಸ್ ಪತಂಗೆ,ಸಂತೋಷ ಪತಂಗೆ,ವಿಠಲ್ ಸೆಗಾಂವಕರ್, ಶಿವಕುಮಾರ ಕಮಲಾಪೂರ,ಶಿವಕುಮಾರ ಚಿಂತಕೋಟಿ, ಅಸ್ಲಂಬೇಗ ಬಿಜಾಪುರ,ಅವಿನಾಶ್ ಗುತ್ತೆದಾರ,ಇತರರು ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here