ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 34 ನೇ ವರ್ಷದ ವಧರ್ಂತಿ ಉತ್ಸವ ಅರ್ಚಕರಾದ ಗುಂಡಾಚಾರ್ಯ ಜೋಶಿ ನರಿಬೊಳ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಬೆಳಿಗ್ಗೆ ಪಂಚಾಮೃತ ಅಭಿಷೇಕ. ಕಲಬುರಗಿಯ ನಗರದ ವಿವಿಧ ಪಾರಾಯಣ ಸಂಘಗಳ ಸದಸ್ಯರಿಂದ ಸಾಮೂಹಿಕ ಪಾರಾಯಣ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರ ನೇತೃತ್ವದಲ್ಲಿ ಪಲ್ಲಕ್ಕಿ ಸೇವೆ. ಪಂ ದ್ವ್ಯಯಪಾಯನಾಚಾರ್ಯ ಅವರಿಂದ ಸುಂದರಕಾಂಡ ಪ್ರವಚನ ನಡೆಯಿತು.
ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅರ್ಚಕರು ಮಾತನಾಡುತ್ತ ಪ್ರಶಾಂತ ನಗರ ಅಂದರೆ ನೆನಪಾಗೋದೇ ಅಲ್ಲಿರು ಜಾಗೃತನಾದ ಪ್ರಶಾಂತ ಹನುಮಾನ ಮಂದಿರ ಬಂದ ಭಕ್ತರ ಇಷ್ಟಾರ್ಥಗಳನ್ನು ನಡೆಸಿಕೊಡುತ್ತಿದ್ದಾನೆ, ಅನೇಕ ಭಕ್ತರ ಅನೇಕ ವಿಧವಾದ ಕಷ್ಟಗಳನ್ನು ಹನುಮಂತ ಪರಿಹರಿಸುತ್ತಿದ್ದಾನೆ.
ಅಂತೆಯೇ ದಿನಾಲೂ ಸಹಸ್ರಾರು ಭಕ್ತರು ಹನುಮಂತನ ದರ್ಶನಕ್ಕೆ ಬರುತ್ತಾರೆ. 34 ನೇ ವರ್ಷಗಳಿಂದ ಪ್ರತಿದಿನವೂ ಬೆಳಿಗ್ಗೆ ಹಾಗೂ ಸಂಜೆಯ ಪೂಜೆ ಇಲ್ಲಿವರೆಗೂ ನಿಂತಿಲ್ಲ. ಪ್ರಾಣದೇವರು ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾನೆ.
ಈ ಸಂದರ್ಭದಲ್ಲಿ ಪ್ರಾಣೇಶಾಚಾರ್ಯ, ಬಾದರಾಯನಆಚಾರ್ಯ, ಶ್ರೀನಿವಾಸ ನೇಲೋಗಿ. ಗುರುರಾಜ ಬಂಕುರ್, ಭಿಮಾಚಾರ್ಯ ಜೋಶಿ. ಸೇರಿದಂತೆ ಅನೇಕರು ಭಾಗವಹಿಸಿದ್ದರು.