ಕಲಬುರಗಿ: ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ನಿವಾರಿಸಲು ಪ್ರತಿದಿನ 480 ಟ್ಯಾಂಕರ್ (ಟ್ರಿಪ್) ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ೧೦೬ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು ಸೇರಿದಂತೆ ಜಿಲ್ಲೆಯೆಲ್ಲೆಡೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಪೂರೈಸುವ ನಿಟ್ಟಿನಲ್ಲಿ 49 ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಜೇವರ್ಗಿ ಮತ್ತು ಅಳಂದ ತಾಲೂಕಿನಲ್ಲಿ ಅತಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಈ ತಾಲೂಕುಗಳ ಬಗ್ಗೆ ಹೆಚ್ಚು ನಿಗಾವಹಿಸಲಾಗಿದೆ. ಕುಡಿಯುವ ನೀರಿನ ಸಂಬಂಧಿತ ಕೆಲಸಗಳು ಶೀಘ್ರ ಆಗಬೇಕೆಂಬ ನಿಟ್ಟಿನಲ್ಲಿ ಆಯಾ ತಾಲೂಕಿನ ತಹಸೀಲಾರರಿಗೆ ನೇರವಾಗಿ ಹಣ ಬಿಡುಗಡೆ ಮಾಡಿದ್ದು, ಅವರೇ ಸ್ಥಳೀಯವಾಗಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆಯಬಹುದು ಎಂದು ಅವರು ಹೇಳಿದರು.
ಎಲ್ಲಾ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಕಂದಾಯ ಇಲಾಖೆಯ ಸಿಬ್ಬಂದಿ ದಿನನಿತ್ಯ ಜಿಪಿಎಸ್ ಮೇಲೆ ನಿಗಾವಹಿಸುತ್ತಿರುತ್ತದೆ. ಯಾವ ಟ್ಯಾಂಕರ್ ನೀರು ಪೂರೈಸಲು ಎಲ್ಲಿಲ್ಲಿ ಸಂಚರಿಸಲಿದೆ ಎಂಬುದು ಗೊತ್ತಾಗಲಿದೆ ಎಂದು ಅವರು ವಿವರಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ಸಲುವಾಗಿ ಪ್ರತಿ ಮೂರು ದಿನಕ್ಕೊಮ್ಮೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾವು ಸಭೆ ನಡೆಸಿ ಪರಿಶೀಲನೆ ಮಾಡುತ್ತಿದ್ದೇವೆ ಎಂದ ಅವರು, ಚುನಾವಣಾ ನೀತಿ-ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಸಭೆಗೆ ಬರುವಂತಿಲ್ಲ. ಇಲಾಖೆಯ ಅಧಿಕಾರಿಗಳೇ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಖುದ್ದು ಹೋಗಿ ಸಮಸ್ಯೆ ಅರಿಯಲಿದ್ದಾರೆ ಎಂದು ಅವರು ತಿಳಿಸಿದರು.
ಟ್ಯಾಂಕರ್ ಮೂಲಕ ಮಾಡುತ್ತಿರುವ ನೀರಿನ ತಾತ್ಕಾಲಿಕವಷ್ಟೆ. ಜಿಲ್ಲೆಯಲ್ಲಿ ಕಳೆದ 2 ತಿಂಗಳ ಹಿಂದೆ ಬತ್ತಿ ಹೋಗಿರುವ 600ರಿಂದ 800 ಬೋರ್‌ವೆಲ್‌ಗಳ ಪಟ್ಟಿ ಮಾಡಿದ್ದು, ಇನ್ನಷ್ಟು ಅಳಕ್ಕೆ ಕೊರೆಸಿ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಣ್ಣೆತೋರಾ ಜಲಾಶಯದಿಂದ ಕಲಬುರಗಿ ನಗರಕ್ಕೆ 20 ಎಂಎಲ್‌ಡಿ ನೀರು ಪೂರೈಸಲಾಗುವುದು. ಅಲ್ಲಲ್ಲಿ ಪೈಪ್‌ಗಳ ಲಿಕೇಜ್ ಆಗಿದ್ದು, 12.5 ಕೋಟಿ ರೂ. ವೆಚ್ಚದಲ್ಲಿ ಹೊಸ ಪೈಪ್‌ಗಳನ್ನು ಜೋಡಿಸುವ ಕಾರ್ಯ ನಡೆದಿದೆ ಎಂದು ಸ್ಪಷ್ಟನೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್ ಅವರು ಇದ್ದರು.
Ward number 30 ರಲ್ಲಿ ನೀರಿನ ಹಾಹಕಾರ ಇರುತ್ತದೆ
ಇದರಲ್ಲಿ ಜಯನಗರ ಬನಶಂಕರಿ ಕಾಲೊನಿ ಅಣ್ಯಮ್ಮ ನಗರ ಮತ್ತು ತಿಲಕ ನಗರ ಬಡಾವಣೆ ಜನರು ಬಹಳ ಸಂಕಷ್ಟ ಇದೆ
ಅದಕ್ಕೆ ನೀರಿನ ವ್ಯವಸ್ಥೆ ಮಾಡಲು ಮನವಿ