ಸುರಪುರ: ಇಲ್ಲಿಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ನಿವೇಶನ ಮಂಜೂರಿ ಮಾಡಿ ಆದೇಶಿಸಿದೆ. ಇದು ಜಿಲ್ಲಾ ಮತ್ತು ತಾಲೂಕು ಘಟಕದ ಪತ್ರಕರ್ತರ ಸಾಂಘಿಕ ಹೋರಾಟದ ಪ್ರತಿಫಲವಾಗಿದೆ ಎಂದು ಪತ್ರಕರ್ತರ ಸಂಘ ತಾಲೂಕು ಘಟಕದ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಭವನ ನಿರ್ಮಾಣಕ್ಕೆ ಕಳೆದ ಮೂರು ದಶಕಗಳಿಂದ ನಿರಂತರ ಪ್ರಯತ್ನ ನಡೆದಿತ್ತು. ಸಂಘದ ಹಿಂದಿನ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಶಾಸಕ ರಾಜೂಗೌಡ ಅವರಿಗೆ ಸಂಘದ ವತಿಯಿಂದ ಪುನಃ ಮನವಿ ಸಲ್ಲಿಸಲಾ ಗಿತ್ತು. ಮನವಿಗೆ ಸ್ಪಂದಿಸಿದ ಶಾಸಕರು ಸರಕಾರದಿಂದ ನಿವೇಶನ ಮಂಜೂರಿ ಮಾಡಿಸಿ ಪತ್ರ ಕರ್ತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
ನಿವೇಶನ ಮಂಜೂರಾದ ಹಿನ್ನೆಲೆಯಲ್ಲಿ ಶಾಸಕರನ್ನು ಭೇಟಿ ಮಾಡಿ ನಿವೇಶನ ಮಂಜೂರಾತಿ ಆದೇಶ ಪ್ರತಿ ನೀಡಿ ಭವನ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಿ ಶೀಘ್ರವೇ ಭೂಮಿ ಪೂಜೆ ಸಮಾರಂಭ ಹಮ್ಮಿಕೊಳ್ಳುವಂತೆ ಮನವಿ ಮಾಡಲಾಯಿತು.
ನಿವೇಶನ ಮಂಜೂರಾತಿಗೆ ಶ್ರಮಿಸಿದ ಶಾಸಕ ರಾಜೂಗೌಡರಿಗೆ ಸಹಕರಿಸಿದ ಜಿಲ್ಲಾಧಿಕಾರಿ, ತಹಸೀಲ್ದಾರ ಮತ್ತು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ ಅವರಿಗೆ ಅಭಿನಂದನೆ ಸಲ್ಲಿಸುವು ದಾಗಿ ಸಂಘದ ತಾಲೂಕು ಅಧ್ಯಕ್ಷ ಸಿದ್ದಯ್ಯ ಪಾಟೀಲ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಗಿರೀಶ್ ಶಾಬಾದಿ, ಪತ್ರಕರ್ತ ಮಲ್ಲು ಗುಳಗಿ, ಸಂಘದ ಪ್ರಧಾನ ಕಾರ್ಯದರ್ಶಿ ಕ್ಷೀರಲಿಂಗಯ್ಯ ಹಿರೇಮಠ ಇದ್ದರು.