ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಶಾಂತಮೂರ್ತಿ ಶಿವಾಚಾರ್ಯ ಸಂಸ್ಥಾನ ಹಿರೇಮಠ ಆವರಣದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಶಹನಾಯಿ ಮತ್ತು ಡೋಲು ವಾದ ಕಲಾವೃಂದ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಪ್ರಮುಖರಾದ ಶಂಕ್ರಪ್ಪ ಬಾವಿ ಮಾತನಾಡಿ ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತವೆ ಹಾಗೂ ಒತ್ತಡವನ್ನು ನಿವಾರಿಸಿ ನಮಗೆ ಆನಂದವನ್ನು ನೀಡುತ್ತವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಗೀತಕ್ಕೆ ಪ್ರತಿಯೊಬ್ಬರು ತಲೆದೂಗುತ್ತಾರೆ ಇಂದಿನ ಜಂಜಾಟದ ಬದುಕಿನಲ್ಲಿ ಸಂಗೀತವನ್ನು ಆಲಿಸುವದರಿಂದ ಮನಸ್ಸನ್ನು ಆಹ್ಲಾದಕರಗೊಳಿಸುತ್ತದೆ ಇಂತಹ ಕಾರ್ಯಕ್ರಮಗಳ ಮೂಲಕ ಎಲೆಮರೆಕಾಯಿಯಂತೆ ಇರುವ ಸಂಗೀತ ಕಲಾವಿದರನ್ನು ಪರಿಚಯಿಸಬಹುದಾಗಿದೆ ಸಮಾಜದ ಪ್ರತಿಯೊಬ್ಬರು ಪ್ರತಿಭಾವಂತ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಹಾಗೂ ನಮ್ಮ ಸಂಸ್ಕøತಿ ಪರಂಪರೆಯನ್ನು ಉಳಿಸಬೇಕು ಎಂದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡೋಲು ಕಲಾವಿದ ಗುರುಬಸಪ್ಪ ಹೂಗಾರ, ಊರಿನ ಪ್ರಮುಖರಾದ ಶರಣಪ್ಪ ಬಡಗ, ಬಸವರಾಜ ಲಕ್ಕಿಮಾರ, ಬಸವರಾಜ ಮಿಣಜಗಿ, ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಹೂಗಾರ ಇತರರು ಇದ್ದರು. ಅಮರೇಶ ಚಿಲ್ಲಾಳ ನಿರೂಪಿಸಿದರು ಕಲಾವಿದರರಾದ ಯಮನೂರಪ್ಪ ಲಿಂಗಸೂಗುರು, ಮಾರುತಿ ಶಾಂತಪುರ, ಭೀಮಪ್ಪ ಶಾಂತಪುರ, ಬಸಪ್ಪ ರುಕ್ಮಾಪುರ ಹಾಗೂ ಈರಣ್ಣ ರುಕ್ಮಾಪುರ ಇವರಿಂದ ವಿವಿಧ ಗಾಯನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ನೆರವೇರಿದವು.