ಶಹಾಬಾದ: ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಸೋಮವಾರ “ಬೂತ್ ವಿಜಯ ಅಭಿಯಾನ” ಕ್ಕೆ ಶಹಾಬಾದ ಮಂಡಲದ ಪ್ರಭಾರಿಗಳಾದ ರಾಘವೇಂದ್ರ ಕುಲಕರ್ಣಿ, ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪ್ರತಿ 25 ಕಾರ್ಯಕರ್ತರ ಮನೆಯ ಮೇಲೆ ಧ್ವಜವನ್ನು ಹಾರಿಸಲಾಗುತ್ತಿದೆ. ಅಭಿಯಾನ ಮುಖ್ಯ ಉದ್ದೇಶ ಶೇ.100ರಷ್ಟು ಮತದಾನ ಆಗುವ ರೀತಿಯಲ್ಲಿ ಮತದಾರರನ್ನು ಮನವೊಲಿಸುವುದು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಎಲ್ಲಾ ಬೂತ್‍ಗಳಲ್ಲಿ ಹಾಗೂ ಹಳ್ಳಿಗಳಲ್ಲಿ ವೀಕ್ಷಿಸುವಂತೆ ಜನರನ್ನು ಪ್ರೇರೇಪಿಸುವುದಾಗಿದೆ. ಪ್ರತೀ ಬೂತ್‍ನಲ್ಲಿ ವಾಟ್ಸ್‍ಪ್ ಗ್ರೂಪ್‍ಗಳನ್ನು ಮಾಡಿ ಪಕ್ಷದ ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸಲಾಗುವುದು ಎಂದು ಹೇಳಿದರು.
ಶಹಾಬಾದ ಮಂಡಲದ ಪ್ರಭಾರಿಗಳಾದ ರಾಘವೇಂದ್ರ ಕುಲಕರ್ಣಿ, ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಬೂತ್ ಸಂಖ್ಯೆ 259, 260, 261 ಮತ್ತು 263 ರಲ್ಲಿ ರಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಕಾರ್ಯಕರ್ತರು ಹುರುಪಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಮುಂಬರುವ ಚುನಾವಣೆಯಲ್ಲಿ ಪಕ್ಷದ ಬಲವರ್ಧನೆ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು.
ಅಭಿಯಾನದ ಪ್ರಭಾರಿಗಳಾದ ಕನಕಪ್ಪ ದಂಡಗುಲಕರ, ಅಧ್ಯಕ್ಷರಾದ ಅಣವೀರಪ್ಪ ಇಂಗಿನಶೆಟ್ಟಿ, ಸಂಚಾಲಕರಾದ ಸದಾನಂದ ಕುಂಬಾರ, ಸಹಸಂಚಾಲಕರಾದ ಡಾ.ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ, ಸದಸ್ಯರಾದ ರವಿ ರಾಠೊಡ, ದತ್ತಾತ್ರೇಯ ಫಂಡ, ಉಪಾಧ್ಯಕ್ಷರಾದ ಮಹಾದೇವ ಗೊಬ್ಬೂರಕರ, ದುರ್ಗಪ್ಪ ಪವಾರ, ಶ್ರೀಧರ ಜೋಶಿ, ಪದಾಧಿಕಾರಿಗಳು, ಪ್ರಮುಖರು, ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಮೋರ್ಚಾಗಳ ಪದಾಧಿಕಾರಿಗಳು,ಮಹಾಶಕ್ತಿ ಕೇಂದ್ರದ ಮತ್ತು ಶಕ್ತಿ ಕೇಂದ್ರದ ಪ್ರಮುಖರು, ಪ್ರಕೋಷ್ಟಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತಿತರಿದ್ದರು.