ಕಲಬುರಗಿ: ಮಳಖೇಡ ಸಮೀಪದ ತೊಟ್ನಳ್ಳಿ ಗ್ರಾಮದ ಹತ್ತಿರ ಏಳು ಗ್ರಾಮಗಳ ಸೀಮೆಯಲ್ಲಿರುವ ಶ್ರೀ ದುರ್ಗಾದೇವಿಯ 58 ನೇ ಜಾತ್ರಾ ಮಹೋತ್ಸವವು ಜ. 6 ರಂದು ಮಹಾಂತೇಶ್ವರ ಮಠದ ಪೀಠಾಧಿಪತಿಗಳಾದ ಡಾ. ತ್ರಿಮೂರ್ತಿ ಶಿವಾಚಾರ್ಯರ ದಿವ್ಯ ನೇತೃತ್ವದಲ್ಲಿ ಜರುಗಲಿದೆ.
ಜ. 6 ರಂದು ಬೆಳಗ್ಗೆ 6-30 ಕ್ಕೆ ಶ್ರೀ ಮಲ್ಲಿಕಾರ್ಜುನ ಗದ್ದುಗೆ ಸಹಿತ ದುರ್ಗಾದೇವಿ ವಿಗ್ರಹಕ್ಕೆ ರುದ್ರಾಭಿಷೇಕ, ಕುಂಕುಮಾರ್ಚನೆ, ನಾಮಾವಳಿ, ಮಹಾಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 8 ಕ್ಕೆ ಕನ್ಯಾ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 10-30 ಕ್ಕೆ ಮಹಾ ಪ್ರಸಾದ ಜರುಗಲಿದೆ. ಮಧ್ಯಾಹ್ನ 2-30 ಕ್ಕೆ ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಸೇಡಂನ ಶಿವಶಂಕರ ಶಿವಾಚಾರ್ಯರು, ಸದಾಶಿವ ಮಹಾಸ್ವಾಮಿಗಳು, ಪಂಚಾಕ್ಷರ ಮಹಾಸ್ವಾಮಿಗಳು, ಟೆಂಗಳಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ವೀರುಪಾಕ್ಷ ದೇವರು, ರಾಯಕೋಡ ಚಿಕ್ಕ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಯಡಗಾ ಸಿದ್ದಪ್ಪ ಮುತ್ಯಾ ಭಾಗವಹಿಸಲಿದ್ದಾರೆ.
ತೋಟಯ್ಯ ಶಾಸ್ತ್ರಿಗಳು ಕರದಾಳ ವೈದಿಕತ್ವ ನಡೆಸಲಿದ್ದಾರೆ. ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಹಾಗೂ ರಾತ್ರಿ 10 ಕ್ಕೆ ಶ್ರೀ ಯಲ್ಲಮ್ಮದೇವಿ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ದುರ್ಗಾದೇವಿ ಜಾತ್ರಾ ಸಮಿತಿ ತಿಳಿಸಿದೆ.