ಕಲಬುರಗಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಭಗವಾನ ಮಹಾವೀರ ಜಯಂತಿಯನ್ನು ಬುಧವಾರ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸೇರಿದಂತೆ ಅತಿಥಿ ಗಣ್ಯರು ಭಗವಾನ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾವೀರ ಜೈನ ಮಂದಿರ ಅಧ್ಯಕ್ಷ ಚಂದ್ರಮೋಹನ ಶಾ, ಆದಿನಾಥ ಜೈನ ಮಂದಿರದ ಅಧ್ಯಕ್ಷ ನಾಗನ್ನಾಥ ಚಿಂಧೆ, ಉಪಾಧ್ಯಕ್ಷ ಸುಶೀಲ ಕುಮಾರ ಕೋಠಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಬಾಬುರಾವ ಕೋಬಾಳ, ಸುಬೋಧ ಶಾ, ಕಾರ್ಯದರ್ಶಿ ಡಾ. ಶ್ರೇಯಮ್ಸ್ ಕೋಠಾರಿ, ಡಾ. ಪಿ.ವಿ. ಕೋಠಾರಿ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.