ಓಬಿಸಿ ಸಭೆಗಳಿಗೆ ಉತ್ತಮ ರೆಸ್ಪಾನ್ಸ್; ಮಧು ಬಂಗಾರಪ್ಪ

0
17

ಕಲಬುರಗಿ: ಗೆಲ್ಲುವ ಮಾನದಂಡ ಮುಂದಿಟ್ಟು ಅಂಥವರಿಗೆ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ನಗರದ ಡಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಅಭಿವೃದ್ಧಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ 10 ಅಂಶಗಳ ಕಾರ್ಯಕ್ರಮದ ಜತೆ ಇನ್ನೂಳಿದ ಅಭಿವೃದ್ಧಿ ಕಾರ್ಯ ಸೇರಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ನಾನು ಈಗಾಗಲೇ 24 ಜಿಲ್ಲೆಗಳ ಪ್ರವಾಸ ಮಾಡಿದ್ದು, ಎಲ್ಲ ಕಡೆ ಉತ್ತಮ ಸ್ಪಂದನೆ ಹಾಗೂ ಸಹಕಾರ ದೊರೆತಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಫೆ. 28ರ ಒಳಗಾಗಿ ಎಲ್ಲ ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶ ನಡೆಸಲಾಗುವುದು. ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಮಾರ್ಚ್ ತಿಂಗಳಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಮಧ್ಯ ಕರ್ನಾಟಕದ ಹಾವೇರಿ ಅಥವಾ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗುವುದು. ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ ಪ್ರವಾಸದ ನಂತರ ವಿಜಯಪುರ, ಬಾಗಲಕೋಟೆ, ಬದಾಮಿ, ಕೊಪ್ಪಳ ಹಾಗೂ ಹೊಸಪೇಟೆಗೆ ತೆರಳುವುದಾಗಿ ತಿಳಿಸಿದ ಅವರು, ಹಿಂದುಳಿದ ವರ್ಗದ ಶೇ.55ರಷ್ಟು ಮತಗಳು ಯಾವೊತ್ತೂ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಈ ಬಾರಿ ಹೆಚ್ಚು ಗಮನಕೊಡಲಾಗುವುದು ಎಂದು ಹೇಳಿದರು.

ಕಟೀಲ್ ಒಬ್ಬ ನಾಲಾಯಕ್ ನಾಯಕ: ರಾಜ್ಯದಲ್ಲಿ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡಿ ಮತ ಪಡೆಯುವಂತೆ ಕಾರ್ಯಕರ್ತರಿಗೆ ಹೇಳುವ ಬಿಜೆಪಿ (ಬ್ರಿಟಿμï ಜನತಾ ಪಕ್ಷ) ರಾಜ್ಯಾಧ್ಯಕ್ಷ ನಳೀನ್‍ಕುಮಾರ ಕಟೀಲ್ ಒಬ್ಬ ನಾಲಾಯಕ್ ರಾಜಕಾರಣಿ . ಶೇ. 40 ಕಮಿಷನ್ ಹೊಡೆಯುವ ಬಿಜೆಪಿಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಶಾಸಕ ಎಂ.ವೈ. ಪಾಟೀಲ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಮುಖಂಡರಾದ ಭಿಮಣ್ಣಾ ಸಾಲಿ, ನೀಲಕಂಠರಾವ ಮೂಲಗೆ, ಜೆ.ಎಂ. ಕೊರಬು, ಶಿವಾನಂದ ಪಾಟೀಲ ಮರತೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here