ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಗೆ ಮತ‌ ನೀಡಬೇಡಿ: ಮಾಜಿ‌ ಸಿಎಂ ಸಿದ್ದರಾಮಯ್ಯ

0
98

ಕಲಬುರಗಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರು ಹಾಗೂ ಬಡವರು ಆತಂಕದಿಂದ ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ನಗರದ ಕಿಣ್ಣಿ ಮಾರುಕಟ್ಟೆಯಲ್ಲಿ  ಏರ್ಪಡಿಲಾಗಿದ್ದ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಗೋರಕ್ಷಣೆ ಹೆಸರಲ್ಲಿ ಅಮಾಯಕ ದಲಿತರ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾದವು. ದಲಿತರನ್ನು ಬೆತ್ತಲೆ ಮಾಡಿ ಹಿಂಸಿಸಲಾಯಿತು. ಯಾರು ನೆಮ್ಮದಿಯಿಂದ ಇದ್ದಾರೆ? ರೈತರು, ದಲಿತರು, ಅಲ್ಪಸಂಖ್ಯಾತರು ಆತಂಕದಿಂದ ಕಷ್ಟದಿಂದ ಬದುಕುವಂತಾಗಿದ್ದನ್ನ ಅಚ್ಛೆ ದಿನ್ ಎಂದು ಕರೆಯಬೇಕಾ.? ಎಂದು ಪ್ರಶ್ನಿಸಿದರು. ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ಲಕ್ಷ್ಯತನದಿಂದ ವರ್ತಿಸಿತ್ತು ಎಂದು ಆರೋಪಿಸಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ 22 ಲಕ್ಷ 27 ಸಾವಿರ ರೈತರ ರೂ. 8000 ಕೋಟಿ ಸಾಲ ಮನ್ನಾ ಮಾಡಿದ್ದೆ. ಈಗಿನ‌ ಮೈತ್ರಿ ಸರಕಾರ 48,000 ಕೋಟಿ ಮನ್ನಾ ಮಾಡಿದ್ದಾರೆ. ಕೇಂದ್ರದಲ್ಲಿ ಮನಮೋಹನ ಸಿಂಗ್ ಅಧಿಕಾರದಲ್ಲಿ 72,000 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಮೋದಿ ಏನು ಮಾಡಿದ್ರು? ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡಿದ್ದ ಯಡಿಯೂರಪ್ಪ ಏನು ಮಾಡಿದ್ರು? ಎಂದು ಟೀಕಿಸಿದರು.

Contact Your\'s Advertisement; 9902492681

ಟಿಕೇಟು ಹಂಚಿಕೆಯಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಿಂದುಳಿಸವರಿಗೆ ಅನ್ಯಾಯ ಮಾಡಿದ ಬಿಜೆಪಿಗೆ ಹಾಗೂ ಜಾಧವ್ ಗೆ ಒಂದೇ ಒಂದು ಓಟು ಹಾಕಬೇಡಿ ಎಲ್ಲ ಮತದಾರರಿಗೂ ಈ‌ ವಿಚಾರ ತಿಳಿಸಿ ಅವರಿಂದಲೂ ಓಟು ಹಾಕದಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು. ಬಿಜೆಪಿ ಸಾಮಾಜಿಕ ನ್ಯಾಯ ಸಮಾನತೆ ಸಂವಿಧಾನದ ವಿರೋಧಿಯಾಗಿದ್ದು ಆ ಪಕ್ಷಕ್ಕೆ ಬಂದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದರು. ಮೀಸಲಾತಿ ವಿರುದ್ದ ಧೋರಣೆ ಹೊಂದಿದ‌ ಬಿಜೆಪಿ ಪಕ್ಷದ ರಾಮಾಜೋಯಿಷ್ ಮೀಸಲಾತಿ‌ ರದ್ದು ಮಾಡಿ ಎಂದು ಸುಪ್ರಿಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.‌ದಲಿತರಿಗೆ ಹಿಂದುಳಿದವರಿಗೆ ನಿಜವಾಗಿಯೂ ಸ್ವಾಭಿಮಾನವಿದ್ದರೆ ದಲಿತರು ಹಾಗೂ ಹಿಂದುಳಿದವರು ಒಂದೇ ಒಂದು ಓಟು ಹಾಕಬೇಡಿ ಎಂದು ಮನವಿ ಮಾಡಿದರು.

ಕೋಲಿ ಸಮಾಜ ಹಾಗೂ ಕುರುಬ ಗೊಂಡ ಸಮಾಜವನ್ನ ಎಸ್ ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಎರಡು ಸಲ ಪತ್ರಬರೆದಿದ್ದೆ ಆದರೆ ಹಿಂದಿನ ಪ್ರಧಾನಿ ವಾಜಪೇಯಿ‌ ನಿರಾಕರಿಸಿದ್ದರು. ಕೋಲಿ ಸಮಾಜಕ್ಕೆ ಅನ್ಯಾಯವಾಗಿದ್ದರೂ ಕೂಡಾ ಚಿಂಚನಸೂರು ಯಾಕೆ ಸುಮ್ಮನಿದ್ದಾನೆ. ಯಾರು ಅನ್ಯಾಯ ಮಾಡಿದ್ದಾರೋ ಅದೇ ಪಕ್ಷಕ್ಕೆ ಚಿಂಚನಸೂರು ಹಾಗೂ ಗುತ್ತೇದಾರ ಹೋಗಿದ್ದಾರೆ ಅವರು ಅವರವರ ಜಾತಿಯ ವಿರೋಧಿಗಳಾಗಿದ್ದು ಅವರ ಮಾತನ್ನು ನಂಬಬೇಡಿ ಎಂದು ಕಿವಿ ಮಾತು ಹೇಳಿದರು. ಮುಲಸ್ಮಾನರು ತಮ್ಮ ಪಕ್ಷಕ್ಕೆ ಬರಬೇಕೆಂದರೆ 10 ವರ್ಷ ಬಿಜೆಪಿ ಕಚೇರಿಯಲ್ಲಿ ಕಸ ಬಳಿಯಲಿ ಎಂದು ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ ಎಂದರೆ ಒಬ್ಬ ಹಿರಿಯ ಮುಖಂಡನ‌ ಮನಸ್ಥಿತಿ ತಿಳಿಸುತ್ತದೆ ಎಂದರು.

ದೇಶ-ಸೈನಿಕರ ವಿಚಾರದಲ್ಲಿ ಭಾವನಾತ್ಮಕವಾಗಿ ಮಾತನಾಡುವ ಮೋದಿ ಏನು ತಾವೇ ಬಂದೂಕು ಹಿಡಿದು ಪಾಕಿಸ್ತಾನದ ಮೇಲೆ ಯುದ್ದಕ್ಕೆ ಹೋಗಿದ್ರಾ? ಕಾಂಗ್ರೇಸ್ ಅಧಿಕಾರಿದಲ್ಲಿದ್ದಾಗ 12 ಸಲ ಏರ್ ಸ್ಟ್ರೈಕ್ ಮಾಡಿದೆ ನಾವೆಲ್ಲೂ ಹೇಳಿಕೊಂಡಿಲ್ಲ. ಆದರೂ ತಾವೊಬ್ಬರೇ ದೇಶಭಕ್ತ ಎಂದು ಹೇಳುತ್ತಾರೆ. ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ತಿರುಪತಿ ನಾಮ ಹಾಕಿದ್ದಾರೆ ಎಂದು ಮೂದಲಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಮಾಡಬೇಕು ಎಂದು ಹೇಳಿದ್ದ ಕಟ್ಟರ್ ಆರ್ ಎಸ್ ಎಸ್ ಹುಡುಗ ತೇಜಸ್ವಿ ಸೂರ್ಯ ಈಗ ಬೆಂಗಳೂರು ದಕ್ಷಿಣದ ಅಭ್ಯರ್ಥಿಯಾಗಿದ್ದಾನೆ. ಇಂತಹ ವಿಚಾರಗಳನ್ನು ಹೇಳುವ  ಅವನು ಸೂರ್ಯ ಅಲ್ಲ ಕತ್ತಲೆ ಎಂದು ಕಟಕಿಯಾಡಿದರು.

ಖರ್ಗೆ ಇಡೀ ದೇಶಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿದ್ದಾರೆ. ಮೋದಿಯನ್ನು ಎದುರಿಸಿದ್ದಾರೆ. ಇಂತಹ ನಾಯಕನನ್ನು ಗೆಲ್ಲಿಸಿ ಜಾಧವ್ ನನ್ನು ಮನೆಗೆ ಕಳಿಸಿ ಎಂದು ಕರೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿಯಾದ ಸನ್ಮಾನ್ಯ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ನಾನು ಯಾವ ತಪ್ಪು ಮಾಡಿದ್ದೇನೆ ಎಂದು ಸೋಲಿಸಲು ಪ್ರಯತ್ನಸಲಾಗುತ್ತಿದೆ‌. ನಾನು ಅಭಿವೃದ್ದಿ ಕಾರ್ಯ ಮಾಡಿಲ್ಲವೇ? ಎಂದು ಪ್ರಶ್ನಿಸಿದರು. ವೇದಿಕೆಯ ಮೇಲೆ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here