ನಿಶ್ಚಿತ ಗುರಿಯೊಂದಿಗೆ ನಿರಂತರವಾಗಿ ಪ್ರಯತ್ನಿಸಿದರೆ ಉನ್ನತ ಸಾಧನೆ ಸಾಧ್ಯ

0
107

ಕಲಬುರಗಿ: ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆಯಿಲ್ಲ. ನಾವು ಹಿಂದುಳಿದವರು, ನಮ್ಮಿಂದ ಸಾಧನೆ ಅಸಾಧ್ಯವೆಂಬ ಮಾನಸಿಕ ಹಿಂಜರಿಕೆ, ಕೀಳರಿಮೆ ಭಾವನೆ ಅವರನ್ನು ಹಿಂದುಳಿವಿಕೆ ಮನೋಭಾವನೆ ಬೇಡ. ಧನಾತ್ಕಕ ಚಿಂತನೆ, ಶೃದ್ಧೆ, ಸಮಯ ಬದ್ಧತೆ, ನಿಶ್ವಿತ ಗುರಿಯೊಂದಿಗೆ ನಿರಂತರವಾದ ನಿರಂತರವಾದ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ಉನ್ನತವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಕಾಶಿನಾಥ ಬಿರಾದಾರ ಅಭಿಮತಪಟ್ಟರು.

ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಸಂಸ್ಥೆಯ ವಾರ್ಷಿಕೋತ್ಸವ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ, ಉತ್ತಮ ಶಿಕ್ಷಕರಿಗೆ ಸತ್ಕಾರ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಯೋಗೇಶ ಭಂಡಾರಿ, ವಿವೇಕಾನಂದರವರು ಧರ್ಮಕ್ಕೆ ಹೊಸ ಭಾಷ್ಯ ಬರೆದರು. ಅವರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಭಾರತದ ಭವ್ಯ ಸಂಸ್ಕøತಿ, ಪರಂಪರೆ, ಇತಿಹಾಸವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು. ಸಮಾಜದಲ್ಲಿರುವ ಬಡವ, ಅಶಕ್ತರ ಏಳ್ಗೆಗಾಗಿ ಶ್ರಮಿಸಿದರು. ಯುವ ಸಮೂಹವು ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ವಿವೇಕಾನಂದರಲ್ಲಿರುವ ಶೃದ್ಧೆ, ತಾಳ್ಮೆ, ಪ್ರಯತ್ನ, ದೇಶಪ್ರೇಮ ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಕ್ಷಿ ಎಸ್.ಜಾಧವ, ಪೂಜಾ ಆರ್.ಮಠಪತಿ, ಸುಮೀತ್ ಕುಲಕರ್ಣಿ, ಭವಾನಿ ಕುಲಕರ್ಣಿ, ಗುರುಬಸವರಾಜ ಎಸ್.ನಾಗರಕಲ್ಲ, ವೈಭವ ಕುಲಕರ್ಣಿ, ಭಾರ್ಗವ ಕುಲಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಮುಖ್ಯ ಶಿಕ್ಷಕ ರಾಘವೇಂದ್ರ ಕೋಳಕೂರ್, ಶಿಲ್ಪ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ, ನಿವೃತ್ತ ಸೇನಾಧಿಕಾರಿ ಎಸ್.ಬಿ.ಚವ್ಹಾಣ, ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ, ಪ್ರಮುಖರಾದ ರೇವಣಸಿದ್ದಪ್ಪ ಮುತ್ತಾ, ಸಂತೋಷ್ ಆರ್.ಮುತ್ತಾ, ಲಕ್ಷ್ಮೀ ಎಸ್.ಮುತ್ತಾ, ಲಲಿತಾಬಾಯಿ ಮುತ್ತಾ, ಭೀಮಾಶಂಕರ್, ಪ್ರೀಯಾಂಕಾ ವಾಲಿ, ಕಾಶಿಬಾಯಿ ಜಾಧವ, ಪ್ರಮೋದ ಕುಲಕರ್ಣಿ, ವಿಶ್ವನಾಥ ನಂದರ್ಗಿ ಹಾಗೂ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕ-ಪೋಷಕರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here