ಪಾಲಿಕೆ ಮೇಯರ್: ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಅಧಿಕಾರ | ಶಿವಾನಂದ ಆರ್ ಕಿಳ್ಳಿ ಆಕ್ರೋಶ

0
54

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಅಧಿಕಾರ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಯುವ ಕಾಂಗ್ರೆಸ್ ಸಂಯೋಜಕ ಶಿವಾನಂದ ಆರ್ ಕಿಳ್ಳಿ ಸರಡಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಚುನಾವಣಾ ಮತದಾರರ ಪಟ್ಟಿಯಲ್ಲಿ ಐವರು ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಅಧಿಕಾರ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಮೇಯರ್ ಚುನಾವಣೆಯಲ್ಲಿ 55 ಸದಸ್ಯರ ಜೊತೆಗೆ ಪಾಲಿಕೆ ವ್ಯಾಪ್ತಿಯ ನಿವಾಸಿಗಳಾಗಿರುವ ಪರಿಷತ್, ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಮತದಾನ ಹಕ್ಕು ಇರಲಿದೆ, ಇದರ ಜೊತೆಗೆ ವಿಧಾನ ಪರಿಷತ್  ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ರಘುನಾಥ್ ರಾವ್ ಮಲ್ಕಾಪೂರೆ, ಲೇಹರ್ ಸಿಂಗ್ ಅವರು ಕಲಬುರಗಿ ನಿವಾಸಿಗಳಲ್ಲ ಎಂಬುದು ಇಡೀ ರಾಜ್ಯಕ್ಕೆ ಗೊತ್ತು ಇದರ ಹೊರತಾಗಿಯೂ ಹೈಕೋರ್ಟ್ ವಿಭಾಗೀಯ ಪೀಠವು ಮತದಾನದ ಹಕ್ಕು ನೀಡಿರುವುದು ಸರಿಯಲ್ಲ ಎಂದು ಶಿವಾನಂದ ಆರ್ ಕಿಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಿಜೆಪಿಗರು ಸುಳ್ಳು ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರಯತ್ನ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಹಿಗಿದ್ದರು ನ್ಯಾಯ ಪಾಲನೆ ಮಾಡಬೇಕಿದ್ದ ನ್ಯಾಯಾಲಯವೆ ಈ ತರಹ ಎಡವಿದರೆ ಜನ ಸಾಮಾನ್ಯರಿಗೆ ನ್ಯಾಯ ಸಿಗುವುದು ಹೇಗೆ? ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ, ಬಿಜೆಪಿ ಸರಕಾರ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಕಳ್ಳ ದಾರಿಯಲ್ಲಿ ಹೋಗುವುದು ಮುಂದುವರಿಸಿದ್ದು ನಾಚಿಕೆಗೇಡಿನ ಪ್ರವೃತ್ತಿ ಎಂದು ಕಿಡಿ ಕಾರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here