ಶರಣಬಸವ ವಿಶ್ವವಿದ್ಯಾಲಯದಿಂದ ಕೃಷಿ-ಪ್ರವಾಸೋದ್ಯಮ ಪ್ರಬಂಧಕ್ಕೆ ಪ್ರಥಮ ಪಿಎಚ್‍ಡಿ ಪ್ರಶಸ್ತಿ

0
40

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೃಷಿ-ಪ್ರವಾಸೋದ್ಯಮ ವ್ಯವಹಾರ ನಿರ್ವಹಣೆ ಮತ್ತು ಅಭಿವೃದ್ಧಿಯ ಪ್ರಬಂಧಕ್ಕೆ ಶರಣಬಸವ ವಿಶ್ವವಿದ್ಯಾಲಯವು ಪೆÇ್ರ.ವಾಣಿಶ್ರೀ ಸಿ.ಟಿ ಅವರಿಗೆ ಪ್ರಥಮ ಪಿಎಚ್‍ಡಿ ಪ್ರಶಸ್ತಿಯನ್ನು ಘೋಷಿಸಿದೆ. 2017 ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ವ್ಯವಹಾರ ಅಧ್ಯಯನ ವಿಭಾಗದ ಮ್ಯಾನೇಜ್‍ಮೆಂಟ್‍ನಲ್ಲಿ ತನ್ನ ಮೊದಲ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿದೆ.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು ಶನಿವಾರ ಕಲಬುರಗಿ ನಗರದಲ್ಲಿ ನೀಡಿದ ಪ್ರಕಟಣೆಯಲ್ಲಿ, ಪೆÇ್ರ.ವಾಣಿಶ್ರೀ ಅವರಿಗೆ ಪಿಎಚ್‍ಡಿ ಪ್ರಶಸ್ತಿಯನ್ನು ಉಪಕುಲಪತಿ ಡಾ.ನಿರಂಜನ್ ವಿ.ನಿಷ್ಠಿ ಅವರು ಅನುಮೋದಿಸಿದ್ದಾರೆ ಮತ್ತು ಪೆÇ್ರ.ವಾಣಿಶ್ರೀ ಅವರು ಉನ್ನತ ಶ್ರೇಣಿಯಾದ ‘S’ ಪಡೆದು, 9 ಗ್ರೇಡ್ ಅಂಕಗಳೊಂದಿಗೆ ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮತ್ತು ಅವರು ಗಳಿಸಿದ ಒಟ್ಟು ಅಂಕಗಳ ಶೇಕಡಾವಾರು ಶೇಕಡಾ 80 ರಷ್ಟಾಗಿದೆ. ವ್ಯವಹಾರ ಅಧ್ಯಯನ ನಿಕಾಯದ ಡೀನ್ ಡಾ. ಎಸ್,ಎಸ್. ಹೊನ್ನಳ್ಳಿ,ಪ್ರೊ ವಾಣಿಶ್ರೀ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ.

Contact Your\'s Advertisement; 9902492681

ಪೆÇ್ರ.ವಾಣಿಶ್ರೀ ಅವರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪಡೆದ ಮೊದಲ ಅಭ್ಯರ್ಥಿ ಮಾತ್ರವಲ್ಲದೆ, ಈ ಗೌರವ ಪಡೆದ ಮೊದಲ ಮಹಿಳಾ ಅಭ್ಯರ್ಥಿಯೂ ಆಗಿರುವರು. ವಿ.ವಿ ಯ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಪೆÇ್ರ.ವಾಣಿಶ್ರೀ ಮಾತನಾಡಿ, ಆರಂಭದಲ್ಲಿ ಬೇರೆ ವಿಷಯದ ಮೇಲೆ ಡಾಕ್ಟರೇಟ್ ಮಾಡಲು ನಿರ್ಧರಿಸಿದ್ದೆ ಆದರೆ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಇದಕ್ಕೆ ಪ್ರೇರಣೆ ನೀಡಿದರು. ಆದ್ದರಿಂದ ನನ್ನ ಡಾಕ್ಟರೇಟ್ ಅಧ್ಯಯನಕ್ಕೆ ಕೃಷಿ-ಪ್ರವಾಸೋದ್ಯಮವನ್ನು ವಿಷಯವಾಗಿ ಆರಿಸಿಕೊಂಡೆ ಎಂದರು.

ಪೂಜ್ಯ ಡಾ.ಅಪ್ಪಾಜಿ ಅವರು ಕೃಷಿ ಪ್ರವಾಸೋದ್ಯಮವನ್ನು ತಮ್ಮ ಡಾಕ್ಟರೇಟ್ ಅಧ್ಯಯನಕ್ಕೆ ತೆಗೆದುಕೊಳ್ಳುವಂತೆ ಪ್ರೆರೇಪಿಸಿದರು, ಏಕೆಂದರೆ ಇದು ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ವಿಷಯವಾಗಿದೆ ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಇದು ದ್ವಿತೀಯ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು. ಕಳಪೆ ಆರ್ಥಿಕ ಪರಿಸ್ಥಿತಿ ಮತ್ತು ವಿಫಲವಾದ ಕೃಷಿ ಬೆಳೆಗಳಿಂದ ಈ ಪ್ರದೇಶವು ಇಡೀ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಯನ್ನು ದಾಖಲಿಸಿದೆ ಮತ್ತು ಕೃಷಿ ಆದಾಯದ ಮೇಲೆ ಅವರ ಏಕೈಕ ಅವಲಂಬನೆಯು ರೈತರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ರಾಜ್ಯ ಮತ್ತು ದೇಶದ ಇತರ ಪ್ರದೇಶಗಳಿಗಿಂತ ಭಿನ್ನವಾಗಿ, ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಯಾವುದೇ ದ್ವಿತೀಯ ಆದಾಯದ ಮೂಲವಿಲ್ಲ ಮತ್ತು ಕೃಷಿ ಪ್ರವಾಸೋದ್ಯಮವನ್ನು ವೃತ್ತಿಯಾಗಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ಲಾಭದಾಯಕ ದ್ವಿತೀಯ ಆದಾಯವನ್ನು ನೀಡುತ್ತದೆ ಎಂದು ಡಾ ಅಪ್ಪಾಜಿ ದೃಢವಾಗಿ ಅಭಿಪ್ರಾಯಪಟ್ಟರು. ಬೆಳೆಗಳ ವೈಫಲ್ಯ ಅಥವಾ ಅವುಗಳ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಲು ವಿಫಲವಾದ ಕಾರಣದಿಂದ ಅನುಭವಿಸಿದ ನಷ್ಟವನ್ನು ಉಳಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ ಎಂದರು.

ಪೂಜ್ಯ ಡಾ.ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ವಿವಿಯ ಉಪಕುಲಪತಿ ಡಾ.ನಿರಂಜನ ವಿ ನಿಷ್ಠ್ಟಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರು ಪೆÇ್ರ.ವಾಣಿಶ್ರೀ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here