ಸ್ಮರಣೋತ್ಸವ, ಬಾಗಿನ ಅರ್ಪಣೆ

0
13

ಕಲಬುರಗಿ: ವಿವಿಧತೆಯಲ್ಲಿ ಏಕತೆ ಪಡೆದ ದೇಶ ನಮ್ಮದು. ಭಕ್ತಿ ಪ್ರಧಾನ ಸಂಸ್ಕøತಿ ನಮ್ಮದು. ಪಂಚಭೂತಗಳಲ್ಲಿ ಈ ಜಗತ್ತು ಜಗ ಸೃಷ್ಟಿಯಾಗುತ್ತದೆ ಎಂದು ದೇವಪುರದ ಶಿವಮೂರ್ತಿ ಶಿವಾಚಾರ್ಯರು ನುಡಿದರು.

ತಾಲ್ಲೂಕಿನ ಶ್ರೀನಿವಾಸಸರಡಗಿ ಗ್ರಾಮದಲ್ಲಿ ಭಾನುವಾರ ಜರುಗಿದ ಚಿಕ್ಕವೀರೇಶ್ವರ ಸ್ವಾಮಿಗಳವರ 76ನೇ ಸ್ಮರಣೋತ್ಸವ ಹಾಗೂ 101 ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಗಿನ ಭೂಮಿ ತಾಯಿಗೆ ಅರ್ಪಿಸುವ ನಮ್ಮ ಸಂಸ್ಕೃತಿ. ತಾಯಂದಿರಿಗೆ ಬಾಗಿನ ಅರ್ಪಿಸುವುದು ಗುರುಗಳ ಕರ್ತವ್ಯ ಎಂದರು.

Contact Your\'s Advertisement; 9902492681

ನೇತೃತ್ವ ವಹಿಸಿದ್ದ ಶ್ರೀನಿವಾಸ ಸರಡಗಿಯ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಪುಣ್ಯಾತ್ಮರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಇವತ್ತಿನ ದಿವಸ ಪುಣ್ಯವಂತರು. ಪುಣ್ಯ ಸ್ನಾನ ಪುಣ್ಯ ದರ್ಶನ ಗುರುವಿನ ದರ್ಶನ ಮಾಡುವ ದಿನ ಇಂದು. ಗುರುವಿನ ಪುಣ್ಯ ಸ್ಮರಣೆ ಹಾಗೂ ಭಕ್ತರ ಉದ್ಧಾರಕ್ಕಾಗಿ ಭೂಮಿಗೆ ಬಂದ ಭಗವಂತ ನೆನೆಸಿಕೊಂಡಿರುವ ಪೂಜ್ಯರ ಪುಣ್ಯಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಅವರಾದನ ಸಿದ್ಧಶಿವಾಚಾರ್ಯರು, ಬೀಳಗಿಯ ಶಿವಾನಂದ ದೇವರು ಸಾನ್ನಿಧ್ಯ ವಹಿಸಿದ್ದರು. ಪ್ರವೀಣ ಆಡೆ. ಗಣೇಶ ಚಿಕ್ಕನಾಗಾವ್. ವಿನೋದ್ ಪಾಟೀಲ್, ಶಿವಲಿಂಗಪ್ಪ ಮಾಳ, ಶರಣಗೌಡ ಪಾಟೀಲ್, ಬಸವರಾಜ್ ಖಂಡೆರಾವ್, ಅಣವಿರಯ್ಯ ಪ್ಯಾಟೆ ಮನಿ, ವೀರಭದ್ರಪ್ಪ ಪಾಟೀಲ್, ಶರಣಗೌಡ ಪಾಟೀಲ, ನಾಗಲಿಂಗಯ್ಯ ಮಠಪತಿ  ಭೀಮಾಶಂಕರ್ ಚಿಟ್ಟೆ, ಅಶೋಕ ಮಾಲಿ, ಬಿ.ಎಚ್. ನಿರಗುಡಿ ಉಪಸ್ಥಿತರಿದ್ದರು.

ರವಿಕುಮಾರ್ ಶಹಾಪುರಕರ್ ನಿರೂಪಿಸಿದರು. ಶಿವಶಂಕರ್ ಬಿರಾದರ್. ಶಿವಕುಮಾರ್ ಜಾಲಹಳ್ಳಿ ಬಸವರಾಜ ವರನಾಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹಣಮಂತರಾಯ ಅಟ್ಟೂರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here