ಶ್ವಾಸಕೋಶ ತೆಗೆಯುವುದು ದೊಡ್ಡ ಸವಾಲು ಯಾಕೆ ಅಂದರೆ ಇಂತಹ ಶಸ್ತ್ರಚಿಕಿತ್ಸೆ ಕಲಬುರಗಿ ಜಿಲ್ಲೆಯಲ್ಲಿಮೊದಲ ಪ್ರಯತ್ನ ಬಗುತೇಕ ಇಂತಹ ಚಿಕಿತ್ಸೆ ದೊಡ್ಡ ಮಹಾನಗರಗಳಲ್ಲಿ ಆಗುತ್ತವೆ ಕಲಬುರಗಿ ಜಿಲ್ಲೆಯಲ್ಲಿ ಮನ್ನೂರ ಆಸ್ಪತ್ರೆಯ ವೈದ್ಯರಿಂದ ಮೊದಲ ಪ್ರಯತ್ನ ಯಶಸ್ವಿಆಗಿದೆ.- ಡಾ.ಫಾರುಕ್ ಅಹ್ಮದ ಮನ್ನೂರ, ನಿರ್ದೆಶಕರು. ಮನ್ನೂರ ಆಸ್ಪತ್ರೆ ಕಲಬುರಗಿ.
ಕಲಬುರಗಿ: ಕ್ಷಯರೋಗ ಪೀಡಿತ ವ್ಯಕ್ತಿಯೊಬ್ಬರ ಎಡಭಾಗದ ನಿಷ್ಕ್ರಿಯ ಶ್ವಾಸಕೋಶವನ್ನು ನ್ಯುಮೊನೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ತೆಗೆದು ಹಾಕುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಯ ವೈದ್ಯರು ವ್ಯಕ್ತಿಗೆ ಮರುಜನ್ಮ ನೀಡಿದ್ದಾರೆ.
ಮಣೂರ್ ಮಲ್ಟಿ ಸ್ಪೆμÁಲಿಟಿ ಹಾಸ್ಪಿಟಲ್ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಅಹ್ಮದ್ ಮಣೂರ್ ಹಾಗೂ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಅರುಣಕುಮಾರ್ ಬಾರಾದ್ ಮಾತನಾಡಿದರು.
ತೀವ್ರ ಸ್ವರೂಪದ ಜ್ವರ, ಉಸಿರಾಟ ಸಮಸ್ಯೆ ಹಾಗೂ ಉಗುಳಿನೊಂದಿಗೆ ರಕ್ತಸ್ರಾವ ಸಮಸ್ಯೆಯೊಂದಿಗೆ ಡಿಸೆಂಬರ್ 15ರಂದು ಆಸ್ಪತ್ರೆಗೆ ಆಗಮಿಸಿದ ಅಲ್ಲಾಭಕ್ಷ್ ಎನ್ನುವ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಎಡಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯ ಸ್ಥಿತಿಗೆ ತಲುಪಿರುವುದು ಪತ್ತೆಯಾಯಿತು. ಹಾಗಾಗಿ, ಅಗತ್ಯ ಮುಂಜಾಗ್ರತೆಯೊಂದಿಗೆ ಎಡಭಾಗದ ಶ್ವಾಸಕೋಶ (ನ್ಯುಮೊನೆಕ್ಟಮಿ) ತೆಗೆದು ಹಾಕುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಒಬ್ಬ ವ್ಯಕ್ತಿಯ ಸಮರ್ಪಕ ಉಸಿರಾಟದಲ್ಲಿ ಶ್ವಾಸಕೋಶ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಿರುವಾಗ ಒಂದು ಶ್ವಾಸಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಸವಾಲಿನ ಕೆಲಸವಾಗಿತ್ತು. ಅಗತ್ಯ ಮುಂಜಾಗ್ರತೆಯೊಂದಿಗೆ ತಜ್ಞ ವೈದ್ಯರಾದ ಡಾ.ಹರ್ಷಗೋಪಾಲ್ ದೇಶಪಾಂಡೆ, ಡಾ.ಅನಿಲ್ ಎಸ್.ಕಣ್ಣೂರ್ ಹಾಗೂ ಡಾ.ವೈಭವ್ ಅವರನ್ನು ಒಳಗೊಂಡ ತಜ್ಞವೈದ್ಯರ ತಂಡ ನಿರಂತರ ಎಂಟು ತಾಸುಗಳ ಶಸ್ತ್ರಚಿಕಿತ್ಸೆ ಕೈಗೊಂಡಿದೆ ಎಂದು ಡಾ.ಫಾರೂಕ್ ಹೇಳಿದರು.
ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇನ್ನುಮುಂದೆ ಕೇವಲ ಬಲಭಾಗದ ಶ್ವಾಸಕೋಶದ ಸಹಾಯದೊಂದಿಗೆ ಆತ ಸಹಜವಾಗಿ ಎಲ್ಲರಂತೆ ಜೀವನ ನಡೆಸಬಹುದಾಗಿದೆ ಎಂದರು.
ನಾನು ಚಿಕಿತ್ಸೆಗೆ ಬೆರೆ ಬೆರೆ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಶಸ್ತ್ರ ಚಿಕಿತ್ಸೆ ಗೆ ಸೋಲಾಪುರ. ಹೈದ್ರಬಾದಗೆ ಹೊಗಲು ಕೆಲ ವೈದ್ಯರು ಸಲಹೆ ನೀಡಿದರು ನಾನು ಹೇದರಿದೆ ದೊಡ್ಡ ನಗರಕ್ಕೆ ಹೊದರೆ ಲಕ್ಷಾಂತರ ಹಣ ಕಟ್ಡಬೇಕಾಗುತ್ತದೆ ಎಂದು ಆದಕಾರಣ ಮನ್ನೂರ ಆಸ್ಪತ್ರೆಯ ವೈದ್ಯರಾದ ಡಾ. ಫಾರುಕ್ ಅವರಿಗೆ ಭೇಟಿಯಾದಗ ಅವರು ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನನಗೆ ಮರುಜನ್ಮ ನೀಡಿದ್ದಾರೆ.- ಅಲ್ಲಾಬಕಶ, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ.