ನಾರಾಯಣಪುರ ಬಸವಸಾಗರ ಜಲಾಶಯ: ಸುರಪುರ ಸಂಸ್ಥಾನದ ಮೂಲ ಕಲ್ಪನೆ

0
617

ಸುರಪುರ: ಕ್ರಿ.ಶ 1982ರಲ್ಲಿ ನಿರ್ಮಾಣಗೊಂಡ ಇದಿಗ ಲಕ್ಷಾಂತರ ಎಕರೆ ರೈತರ ಭೂಮಿಗೆ ನೀರೂಣಿಸುತ್ತಿರುವ ಮತ್ತು ಇಂದು ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರು ಉದ್ಘಾಟಿಸಲಿರುವ ಸ್ವಯಂಚಾಲಿತ ನೀರಾವರಿ ಯೋಜನೆಗೆ ಸಿದ್ದವಾಗಿರುವ ಬಸವಸಾಗರ ಜಲಾಶಯದ ಒಂದು ಐತಾಹಿಸಿಕ ಹಿನ್ನಲೆಯನ್ನು ಮೇಲುಕು ಹಾಕಿದರೆ ಅದರ ಹಿಂದೆ ಗೋಚರವಾಗುವುದು ಸುರಪುರ ಸಂಸ್ಥಾನದ ಕೊಡುಗೆಯಾಗಿದೆ.

ಜಲಾಶಯದ ಐತಿಹಾಸಿಕ ಹಿನ್ನಲೆ ನೋಡುವುದಾದರೆ :- ಕ್ರಿ.ಶ : 1715ರ ಅವಧಿ ಅಂದರೆ ಸುಮಾರು 250ಕ್ಕೂ ಹೆಚ್ಚು ವರ್ಷಗಳ ಹಿಂದೆ ಈಗಿನ ಸುರಪುರ ಸಂಸ್ಥಾದ ಅವಶ್ಯಕತೆಗೆ ತಕ್ಕಂತೆ ಯೋಜನೆಯ ಬಗ್ಗೆ ಮೋದಲು ತಿರ್ಮಾನಿಸಿದ್ದು ಸುರಪುರ ಸಂಸ್ಥಾನದ ಅರಸರಾದ ಶ್ರೀ ಬಲವಂತ ಬಹರಿ ಬಹದ್ದೂರ್ ರಾಜಾ ಪೀತಾಂಬರಿ ಪಿಡ್ಡನಾಯಕ ಮತ್ತು ಆಗಿನ ಪ್ರದಾನ ಮಂತ್ರಿಗಳಾಗಿದ್ದ, ವೀರಪ್ಪ ನಿಷ್ಠಿ ಯವರು. ಸುರಪುರ ಸಂಸ್ಥಾನದ ಆಳ್ವಿಕೆಯ ಕಾಲದಲ್ಲಿ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವೀರಪ್ಪ ನಿಷ್ಠಿಯವರು ರಾಜರ ಆಜ್ಞೆಯ ಮೇರೆಗೆ ಸುರಪುರ ಕೊಟೆಯ ಕಂದಕಗಳಿಗೆ ನೀರು ತುಂಬಿಸುವ ಮತ್ತು ಮದ್ಯದಲ್ಲಿ ಬರುವ 105 ಗ್ರಾಮಗಳ ಭೂಮಿಗೆ ನೀರಾವರಿ ಸೌಲಭ್ಯ ಯೋಜನೆಯನ್ನು ಒ¸ದಗಿಸುವ ಯೋಜನೆಯನ್ನು ರೂಪಿಸಿದ್ದರು.

Contact Your\'s Advertisement; 9902492681

ಈಗ ಅದು ಬಸವಸಾಗರ ಜಲಾಶಯದ ಎಂಬ ಹೆಸರಿನಿಂದ ನಿರ್ಮಿತವಾಗಿದೆ. ಮತ್ತು ಮದ್ಯದಲ್ಲಿ ಬರುವ ದೋಣಿ ನದಿಯ ನೀರಿಗೆ ಅಕ್ವಾಡೆಟ್ ನಿರ್ಮಿಸಿ ನೀರು ಹರಿದು ಬರುವಂತೆ ಮಾಡುವ ಯೋಜನೆ ಇದಾಗಿತ್ತು ಮತ್ತು ಎರಡನೇ ಹಂತದಲ್ಲಿ ಶಿರವಾಳ ಮತ್ತು ಹುರಸುಗುಂಡಿಗೆ ನಡುವೆ ಭೀಮಾ ನದಿಗೆ ಆಣೆಕಟ್ಟು ನಿರ್ಮಿಸಿ ಈ ಯೋಜನೆಗೆ ಪೂರಕವೆಂಬಂತೆ ಸನ್ನತಿಯ ಬ್ರಿಜ್ ಕಮ್. ಬ್ಯಾರೇಜ್ ನಿರ್ಮಿಸುವ ಮೂಲಕ ಸುರಪುರದ ಕೊಟೆಯ ಕಂದಕಗಳಿಗೆ ನೀರು ತುಂಬಿಸುವ ಸುಮಾರು 6 ಲಕ್ಷ ವೆಚ್ಚದ ಯೋಜನೆಯ ನೀಲಿ ನಕಾಶೆಯನ್ನು ವೀರಪ್ಪನಿಷ್ಠಿ ಅವರು ತಯಾರಿಸಿ ಅಂದಿನ ಸುರಪುರ ಸಂಸ್ಥಾನದ ಅರಸರಾದ ಶ್ರೀ ಬಲವಂತ ಬಹರಿ ಬಹದ್ದೂರ್ ರಾಜಾ ಪೀತಾಂಬರಿ ಪಿಡ್ಡನಾಯಕ ಅವರಿಗೆ ನೀಡಿದ್ದರು.

ಈದೀಗ ಸರ್ಕಾರ ಸುರಪುರ ಸಂಸ್ಥಾನದ ಆಶಯವನ್ನು ಚಿರಸ್ಥಾಯಿಗೊಳಿಸಿದೆ. ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಗರನಾಡಿಗೆ ಆಗಮಿಸಿ ಸ್ವಯಂ ಚಾಲಿತ ಸ್ಕಾಡಾ ಗೇಟ್ ಅಮೃತ ಜಲಧಾರೆ ಲೋಕಾರ್ಪಣೆ ಮಾಡುತ್ತಿದ್ದು, ಅವರಿಗೆ ಸುರಪುರದ ಶಾಸಕರಾದ ರಾಜುಗೌಡ ನರಸಿಂಹನಾಯಕ, ಮತ್ತು ಬಲವಂತ ಬಹರಿ ಬಹದ್ದೂರ್ ರಾಜಾ ಕೃಷ್ಣಪ್ಪ ನಾಯಕ ಮತ್ತು ಪ್ರದಾನಮಂತ್ರಿ ಮನೆತನದ ದೊಡ್ಡಪ್ಪ ಎಸ್. ನಿಷ್ಠಿ ಜಹಾಗೀರದಾರ ಅವರು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರ್ಗಿಯ ಸಹಾಯಕ ಪ್ರದ್ಯಾಪಕರಾದ ಹಣಮಂತ ತಳವಾರ ಅವರು ಚಿತ್ರಿಸಿರುವ ಚಿತ್ರಪಟ(ಪೆಂಟಿಂಗ್) ಮೋದಿಯವರಿಗೆ ಸಮರ್ಪಿಸಲು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಉತ್ಸುಕವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here