PM ಕಾರ್ಯಕ್ರಮಕ್ಕೆ: ನೀರಿನ ಬಾಟಲ್-ಅಪಾಯಕಾರಿ ವಸ್ತು | ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಇಲ್ಲ

0
47

ಕಲಬುರಗಿ: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇದೇ ಜನವರಿ 19 ರಂದು ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಣ್ಯವ್ಯಕ್ತಿಗಳ ಭದ್ರತಾ ದೃಷ್ಠಿಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳು ಹಾಗೂ ಸಾರ್ವಜನಿಕರು ಮತ್ತು ಬಿ.ಜೆ.ಪಿ. ಕಾರ್ಯಕರ್ತರು/ಮುಖಂಡರು ಜೊತೆಯಲ್ಲಿ ನೀರಿನ ಬಾಟಲ್, ಬೀಡಿ-ಸಿಗರೇಟ್, ಮ್ಯಾಚ್ ಬಾಕ್ಸ್, ಮಾಧಕ ವಸ್ತು, ಗುಟಕಾ ಪಾಕೇಟ್ ಮತ್ತಿತರ ಅಪಾಯಕಾರಿ ವಸ್ತುಗಳನ್ನು ತರುವಂತಿಲ್ಲ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಭದ್ರತಾ ಸಿಬ್ಬಂದಿ ಮತ್ತು ಪೆÇಲೀಸ್‍ರಿಗೆ ಸಹಕರಿಸಬೇಕು. ಸಾರ್ವಜನಿಕರು ಮತ್ತು ಇತರೆ ನಾಯಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಪಾರ್ಕಿಂಗ್ ಮಾಡಬೇಕು.

Contact Your\'s Advertisement; 9902492681

ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶ ಇಲ್ಲ: ಸಂಘ-ಸಂಸ್ಥೆಗಳು ಹಾಗೂ ಇತರೆ ಸಂಘಟನೆಗಳು ಯಾವುದಾದರೂ ಬೇಡಿಕೆಗಳನ್ನು ಇಟ್ಟುಕೊಂಡು ಮಾರ್ಗದಲ್ಲಿ ಪ್ರತಿಭಟನೆ, ಮೆರವಣಿಗೆ, ಘೋಷಣೆಗಳನ್ನು ಕೂಗುವುದರೊಂದಿಗೆ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಕೊಳ್ಳಲಾಗುತ್ತದೆ.

ರಾಜಕೀಯ ನಾಯಕರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯ ಮತ್ತು ಅತೀ ಗಣ್ಯ ವ್ಯಕ್ತಿಗಳಿಗೆ ಸನ್ಮಾನಕ್ಕಾಗಿ ಹಾರ-ತೂರಾಯಿಗಳಿಗೆ ಅವಕಾಶ ಇರುವುದಿಲ್ಲ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ನಿಯಮದಂತೆ ಕಪ್ಪು ಬಟ್ಟೆಗಳನ್ನು ಧರಿಸಿಕೊಂಡು ಬರುವುದಾಗಲಿ, ಕೈಯಲ್ಲಿ ಕಪ್ಪು ಬಟ್ಟೆ-ಶಾಲುಗಳನ್ನು ಹಿಡಿದುಕೊಂಡು ಬರಬಾರದೆಂದು ಅವರು ತಿಳಿಸಿದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳು ಹಾಗೂ ಸಾರ್ವಜನಿಕರು ಮತ್ತು ಬಿ.ಜೆ.ಪಿ. ಕಾರ್ಯಕರ್ತರು/ಮುಖಂಡರು ಮೇಲ್ಕಂಡ ಕ್ರಮಗಳನ್ನು ಪಾಲಿಸಿ ಪೆÇಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here