ಬಿಜೆಪಿ ಸರ್ಕಾರಗಳಿಂದ ಯುವಕರಿಗೆ ಕೊಡುಗೆ ಏನು?

0
22

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸ ಮಾಡುತ್ತಿರುವುದು ಸ್ವಾಗತಾರ್ಹ, ನಿರುದ್ಯೋಗ ನಿವಾರಣೆಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದನ್ನು ಮರೆತಿದ್ದಾರೆ. ದುಡಿಯುವ ಕೈಗಳಿಗೆ ಮೊದಲು ಕೆಲಸ ನೀಡಲಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ದೇಶದಲ್ಲಿ ೬೫ ಕೋಟಿಗಿಂತಲೂ ಹೆಚ್ಚು ಯುವಕ-ಯುವತಿಯರ ಜನಸಂಖ್ಯೆವಿದ್ದು, ಉನ್ನತ ಶಿಕ್ಷಣ, ದೊಡ್ಡ ದೊಡ್ಡ ಪದವಿ ಪಡೆದರೂ ಸಹ ಖಾಯಂ ನೌಕರಿ ಇಲ್ಲ. ವಿದ್ಯಾರ್ಹತೆ ತಕ್ಕಂತೆ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಹೀಗಾಗಿ, ಯುವಕರ ಶಕ್ತಿ ಸದ್ಬಳಕೆ ಆಗಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರು, ವಿದ್ಯಾವಂತ ಯುವಕರು ಪಕೋಡಾ ಮಾರಿ ಕೆಲಸ ಮಾಡಬೇಕು ಎನ್ನುವ ನಡೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ.

Contact Your\'s Advertisement; 9902492681

ಹೀಗಾಗಿ, ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಕ್ಕೆ ಒಳಪಡಿಸುವುದರಿಂದ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಯುವಕರಿಗೆ ಉದ್ಯೋಗಾವಕಾಶಗಳು ಸಿಗುವುದಿಲ್ಲ. ಅಂಬಾನಿ, ಆದಾನಿ ಅವರನ್ನು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಯುವ ಶಕ್ತಿ ಸದ್ಬಳಕೆ ಆಗುವ ನಿಟ್ಟಿನಲ್ಲಿ ಕೇಂದ್ರೀಕರಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here