ಕಲಬುರಗಿ: 2012 ರಲ್ಲಿ ರಿ ಮಾರ್ಡಸೈಜೇಷನ್ ನಾರಾಯಣಪುರ ಕಾಮಗಾರಿ ಮಂಜೂರು ಮಾಡಿದೆ ಕಾಮಾಗಾರಿ ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡು ಅನುದಾನ ನೀಡಿದೆ ಇವತ್ತು ಹೊಸ ಯಂತ್ರಗಳ ಮೂಲಕ ಆಟೋಮೆಷನ್ ಮಾಡಿ ಕೊನೆ ರೈತರಿಗೆ ನೀರು ಮುಟ್ಟಬೇಕು ಅನ್ನೋ ಯೋಜನೆ ಇದು ಎಮ್ ಬಿ ಪಾಟೀಲ್ ಆಗಲಿ ಕಾಂಗ್ರೆಸ್ ನಾಯಕರು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಕಿವಿ ಮಾತು ಹೇಳಿದ್ದಾರೆ.
ಸ್ಕಾಡ್ ಗೇಟ್ ಉದ್ಘಾಟನೆ ಪ್ರಧಾನಿ ಮೋದಿ ಆಗಮನ ಹಿನ್ನಲೆ ಕಲಬುರಗಿಯಲ್ಲಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 1954 ರಲ್ಲಿ ಶಾಸ್ತ್ರಿ ಅವರು ಅವರು ಅಡಿಗಲ್ಲು ಹಾಕಿದ್ರು ಅಂದಿನಿಂದ ಇಂದಿನವರೆಗೂ ಕಾಮಾಗಾರಿ ನಡೆಯುತ್ತಿದೆ ಎಮ್ ಬಿ ಪಾಟೀಲ್ ಮಾಜಿ ನಿರಾವರಿ ಮಂತ್ರಿ ಅವರು ಪೂರ್ಣ ವಿಷಯ ತಿಳಿದು ಮಾತಾಡಬೇಕು.
ಪ್ರಧಾನಿ ಬರ್ತಿದ್ದಾರೆ ಖುಷಿ ಪಡಬೇಕು ನಮ್ಮ ರಾಜ್ಯಕ್ಕೆ ಹೆಚ್ಚಿನ ಕೆಲಸ ಸಿಗಲಿ ಅಂತಾ ಕೇಳಿಕೊಳ್ಳಬೇಕು ಪ್ರಧಾನಿ ಬರುವಾಗ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ ನಾವು ಅನೇಕ ತಾಂಡಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದವೆ ನಾವು ಗಿಮಿಕ್ ಮಾಡ್ತಿಲ್ಲ, ಕಾಂಗ್ರೆಸ್ ನವರು ಗಿಮಿಕ್ ಮಾಡಿ ಹಳ್ಳ ಹಿಡಿದಿದ್ದಾರೆ ಎಂದು ಟಿಕಿಸಿದರು.
ಕಾಂಗ್ರೆಸ್ ಗೆ ಭವಿಷ್ಯ ಇಲ್ಲ ಹತಾಶರಾಗಿ ಮಾತಾಡೋಕೆ ಮುಂದಾಗಿದ್ದಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 40 ರ ಮೇಲೆ ಒಂದು ಸೀಟು ಬರೋದಿಲ್ಲ ಗುಜಾರಾತ್ ನಲ್ಲಿ ಹೇಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಇಲ್ಲಿ ಹಾಗೆ ಅಧಿಕಾರಕ್ಕೆ ಬರ್ತೆವೆ ಎಂದರು