ಕೃಷಿ ವಿಜ್ಞಾನ ಕೇಂದ್ರ: ಕಲಬುರಗಿಯಲ್ಲಿ 20ನೇ ವ್ಶೆಜ್ಞಾನಿಕ ಸಲಹಾ ಸಮಿತಿ

0
82

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ 20ನೇ ವೈಜ್ಞಾನಿಕ ಸಲಹಾ ಸಮಿತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎಂ.ಕೆ. ನಾಯ್ಕ್ ರವರು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯು ಉತ್ತಮವಾಗಿ ಕಾರ್ಯಾನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ರೈತ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಕ್ತ ಸನ್ನಿವೇಶದಲ್ಲಿ ರೈತರು ಎದುರುಸುತ್ತಿರುವ ಜಲ್ವಂತ ಸಮಸ್ಯಗಳನ್ನು ಪರಿಹರಿಸಲು ಕಂಕಣಬದ್ದವಾಗಲಿ ಎಂದರು.

Contact Your\'s Advertisement; 9902492681

ಮುಂದುವರೆದು ರೈತರು ಉತ್ಪಾದನೆಗೆ ಮಹತ್ವ ಕೊಟ್ಟಷ್ಟು ಬೆಳೆ ಉತ್ಪನ್ನಗಳನ್ನು ಮೌಲ್ಯವರ್ಧಿಸಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದೆಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ವಿಜ್ಞಾನಿ ಮತ್ತು ನೋಡಲ್ ಅಧಿಕಾರಿ, ಅಟಾರಿ, ಬೆಂಗಳೂರಿನ ಡಾ. ಎಂ.ಜೆ. ಚಂದ್ರೇಗೌಡರವರು ಕೆವಿಕಯ ಎಲ್ಲಾ ಕಾರ್ಯಗಳು ರೈತರಿಗೆ ತಲುಪಿಸಲು ಸಂಬಂಧಿತ ವಿಜ್ಞಾನಿಗಳು ಇತರ ಇಲಾಖೆಗಳೊಂದಿಗೆ ಕೈಜೋಡಿಸಿ ಇನ್ನು ಹೆಚ್ಚಿನ ಮಟ್ಟದ ಪ್ರಗತಿಗೆ ಕಾರ್ಯನ್ಮೂಖವಾಗಬೇಕೆಂದರು.  ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿರವರು ಎಲ್ಲರನ್ನು ಸ್ವಾಗತಿಸಿ ಕಛೇರಿಯ ವಾರ್ಷಿಕ ವರದಿಯನ್ನು ಮಂಡಿಸಿದರೇ, ಇತರೆ ವಿಜ್ಞಾನಿಗಳು ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮಗಳು ಮತ್ತು ಮುಂದೆ ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ವರದಿ ಮಂಡಿಸಿದರು.

ಕಾರ್ಯಕ್ರಮದಲ್ಲಿ ಡಾ. ಎನ್.ಎ. ಪಾಟೀಲ್, ವಿಸ್ತರಣಾ ನಿರ್ದೇಶಕರು, ಕ.ಪ.ವೈ.ಮೀನುಗಾರಿಕೆ, ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ, , ಡಾ. ಬಿ.ಎಂ. ದೊಡಮನಿ, ಸಹ ಸಂಶೋದನಾ ನಿರ್ದೇಶಕರು, ವಲಯ ಕೃಷಿ ಸಂಶೋದನಾ ಕೇಂದ್ರ, , ಡಾ. ಸಿದ್ರಾಮಪ್ಪಾ ಪಾಟೀಲ್, ದಂಗಾಪೂರ, ಅಧ್ಯಕ್ಷರು, ಕೃಷಿಕ ಸಮಾಜ, ಕಲಬುರಗಿ, ಡಾ. ಮಲ್ಲಿಕಾರ್ಜುನ ಎನ್‍ಆರ್‍ಸಿ, ಸೋಲಾಪೂರ, ಶ್ರೀಮತಿ ಮಧುಮತಿ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕರು, ಕಲಬುರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಬಾರ್ಡ, ಮೈರಾಡ್ ಸಂಸ್ಥೆ, ರೈತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದರು.

ಕೊನೆಯಲ್ಲಿ ವಂದನಾರ್ಪಣೆ ಮತ್ತು ರಾಷ್ಟೀಯ ಗೀತೆ ಮುಖಾಂತರ ಕಾರ್ಯಕ್ರವನ್ನು ಮುಕ್ತಾಯಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here