ಹಿಂದುಳಿದ ವರ್ಗಗಳ ವಸತಿ ನಿಲಯ ಸ್ಥಳಾಂತರ: ಖಾಸಗಿ ಲಾಡ್ಜ ಲಾಭಿ ಕೈ ಬಿಡಲು ವಿದ್ಯಾರ್ಥಿಗಳಿಂದ ಪ್ರತಿಭಟನೆ

0
98

ಕಲಬುರಗಿ: ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮಹಿಳಾ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರ ವಿರೋಧದ ನಡುವೆಯೂ ಖಾಸಗಿ ಕಟ್ಟಡಕ್ಕೆ (ಹಳೆಯ ಲಾಡ್ಜ್)ಗೆ ವಸತಿ ನಿಲಯ ಸ್ಥಳಾಂತರಿಸುವ ಅಧಿಕಾರಿಯ ಕ್ರಮ ಖಂಡಿಸಿ ಇಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನೇತೃದ್ವಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೇಂದ್ರ ರಾಜವಾಳ ಮಾತನಾಡಿ ಸರಕಾರಿ ವಸತಿ ನಿಲಯವನ್ನು ವಿದ್ಯಾರ್ಥಿನಿಯರ ವಿರೋಧ ನಡುವೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಖಾಸಗಿ ಲಾಡ್ಜ್ ಸ್ಥಳಾಂತರಿಸುತಿರುವುದು ಖಂಡನಿಯ.

Contact Your\'s Advertisement; 9902492681

ಹಿಂದುಳಿದ ವಿದ್ಯಾರ್ಥಿಯನಿಯರನ್ನು ಖಾಸಗಿ ಲಾಡ್ಜಗೆ ಹಾಸ್ಟಲ್ ಮಾಡುತಿರುವುದು ಸೂಕ್ತ ಕ್ರಮವಲ್ಲ ವಿದ್ಯಾರ್ಥಿನಿಯರ ಪ್ರೈವೈಸಿಗೆ ಧಕ್ಕೆ ತರುವಂತಹದು ಅಧಿಕಾರಿಗಳು ಕೂಡಲೆ ಈ ಕ್ರಮವನ್ನು ಹಿಂದಕ್ಕೆ ಪಡೆಯಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದರು.

ಶರಣು ಕೋಲಿ, ಡಾ. ಸರ್ದಾರ್ ರಾಯಪ್ಪ,ಗುರುಮೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಾಸ್ಟಲ್ ವಿದ್ಯಾರ್ಥಿನಿಯರು ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here