ಪ್ರವಾಹ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖರ್ಗೆ ಸೂಚನೆ

0
65

ಚಿತ್ತಾಪುರ: ಸದಾ ಸಂಪರ್ಕದಲ್ಲಿರಿ, ಯಾವುದೇ ಕಾರಣಕ್ಕೆ ಎದೆಗುಂದಬೇಡಿ ನಿಮ್ಮೊಂದಿಗೆ ನಾನಿದ್ದೇನೆ ಗ್ರಾಮಸ್ಥರಿಗೆ ಶಾಸಕರ ಅಭಯ ಅವಶ್ಯಕ ಕ್ರಮಗಳ ಜಾರಿಗೆ ಸೂಕ್ತ ಸೂಚನೆ ಭೀಮಾ ನದಿಯ ಹೊರಹರಿವಿನ ಮಾಹಿತಿ ಪಡೆದ್ದು, ಅಗತ್ಯಕ್ಕೆ ಅನುಗುಣವಾಗಿ ಈಜು ತಜ್ಞರ, ಮುಳುಗು ತಜ್ಞರ, ಬೋಟ್ ಹಾಗೂ ಎನ್ ಡಿ‌ಆರ್ ಎಫ್ ಸಿಬ್ಬಂದಿಗೆ ನಿಯೋಜನೆಗೆ ಕ್ರಮ ತೆಗೆದುಕೊಳ್ಳವಂತೆ ಅಧಿಕಾರಿಗಳಿಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ.

Contact Your\'s Advertisement; 9902492681

ಭೀಮಾ ನದಿಯಲ್ಲಿ ಹೊರಹರಿವು ಹೆಚ್ಚಿದ್ದರಿಂದ‌ ನದಿ ಪಾತ್ರದ ಹಳ್ಳಿಗಳಿಗೆ ನೆರೆ ಭೀತಿ ಉಂಟಾಗಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಮತಕ್ಷೇತ್ರದ ಕಡಬೂರು ಗ್ರಾಮ ಹಾಗೂ ಸನ್ನತಿ ಬ್ರಿಜ್ ಪ್ರದೇಶಕ್ಕೆ ಭೇಟಿ‌ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಈ ಸಂದರ್ಭದಲ್ಲಿ ಅವರು ಕಡಬೂರು ಗ್ರಾಮಸ್ಥರೊಂದಿಗೆ ಮಾತಾನಾಡಿ, ಎದೆಗುಂದದಂತೆ ಧೈರ್ಯ ತುಂಬಿ, ಯಾವುದೇ ಸಂದರ್ಭದಲ್ಲಿ ತಾವು ಸಹಾಯಕ್ಕೆ ಸಿದ್ದವಿರುವುದಾಗಿ ಅಭಯಹಸ್ತ ನೀಡಿದರು. ನಂತರ ಸನ್ನತಿ ಬ್ರಿಜ್ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ನದಿಯ ನೀರಿನ ಹೊರ ಹರಿವಿನ ತೀವ್ರತೆ ಹಾಗೂ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದರು.

ನದಿ ಪಾತ್ರದ ‌ಗ್ರಾಮಗಳಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮದ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದರು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ದೂರುಗಳಿಗೆ ತಕ್ಷಣವೇ ಸ್ಪಂದಿಸಿ ನೆರೆಹಾವಳಿಯಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಅಗತ್ಯ ಬಿದ್ದರೆ, ಈಜು ತಜ್ಞರನ್ನು, ಈಜು ತಜ್ಞರನ್ನು, ಬೋಟ್ ಗಳನ್ನು ಹಾಗೂ ಎನ್‌ಡಿಆರ್ ಎಫ್ ಸಿಬ್ಬಂದಿಗಳನ್ನು ನದಿಪಾತ್ರದ ಗ್ರಾಮಗಳ ಅಯ್ದ ಜಾಗದಲ್ಲಿ‌ ನಿಯೋಜಿಸಲು ಬೇಕಾಗುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ಈ‌ ಸಂದರ್ಭಗಳಲ್ಲಿ ಜಿಲ್ಲಾ ಪಂಚಾಯತ ವಿರೋಧಪಕ್ಷದ ನಾಯಕ ಶಿವಾನಂದ ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here