ಸಮಾಜದಲ್ಲಿ ಹೆಣ್ಣನ್ನು ಗೌರವದಿಂದ ಕಾಣುವ ಸಂಸ್ಕಾರ ಮೂಡಬೇಕಿದೆ

0
32

ರಾವೂರ: ಹೆಣ್ಣು ಸಂಸಾರದ ಕಣ್ಣು ಅಂತೆಯೇ ಹೆಣ್ಣನ್ನು ಸಮಾಜದಲ್ಲಿ ಗೌರವದಿಂದ ಕಾಣುವ ಸಂಸ್ಕಾರ ಜನಮಾನಸದಲ್ಲಿ ಮೂಡಬೇಕಿದೆ ಎಂದು ಸಿದ್ಧಲಿಂಗ ದೇವರು ಹೇಳಿದರು.

ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೆಣ್ಣನ್ನು ಭೋಗದ ವಸ್ತುವಾಗಿ ಕುಟುಂಬವೆಂಬ ನಾಲ್ಕು ಗೋಡೆಗೆ ಸೀಮಿತಗೊಳಿಸಿದ ಕಾಲವೊಂದಿತ್ತು. ಆದರೆ ಇಂದು ಕಾಲ ಬದಲಾದಂತೆ ಹೆಣ್ಣಿನ ಪಾತ್ರವೂ ಬದಲಾಗಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಬದುಕುತ್ತಿದ್ದರೂ ಹೆಣ್ಣಿನ ಮೇಲಿನ ದೌರ್ಜನ್ಯ ತಪ್ಪಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಆಕೆಯ ತಾರತಮ್ಯ ನಿಂತಿಲ್ಲ. ಸಮಾಜ ಬದಲಾದರೂ ನಮ್ಮ ಮನಸ್ಥಿತಿ ಬದಲಾಗುತ್ತಿಲ್ಲ. ಹೆಣ್ಣಿನ ಕುರಿತ ಪುರುಷನ ದೋರಣೆ ಬದಲಾಗಬೇಕಿದೆ. ಅದಕ್ಕೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನೆಪದಲ್ಲಿ ಹೆಣ್ಣಿಯ ಸುರಕ್ಷತೆ, ಸಬಲೀಕರಣದ ಕುರಿತು ಅರಿವನ್ನು ಮೂಡಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಸಹಕಾರ್ಯದರ್ಶಿ ಈಶ್ವರಪ್ಪ ಬಾಳಿ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆವೊಂದು ತೆರೆದಂತೆ. ಹೆಣ್ಣು ತಾನು ಕಲಿತಿ ಸಮಾಜಕ್ಕೆ ಬೆಳಕು ನೀಡುವವಳು ಆದ್ದರಿಂದ ಪ್ರತಿಯೊಭ್ಬರೂ ಹೆಣ್ಣನ್ನು ಗೌರವಿಸಬೇಕು. ಆದರೆ ದುರಂತವೆಂದರೆ ದೇಶದಲ್ಲಿ ನಿತ್ಯವೂ ಒಂದಿಲ್ಲ ಒಂದು ಕಡೆ ಹೆಣ್ಣಿನ ಮೇಲೆ ಅತ್ಯಾಚಾರ, ತಾರತಮ್ಯ,ದೈಹಿಕ ಮತ್ತು ಮಾನಸಿಕ ಕಿರುಕುಳಗಳನ್ನು ಕೊಡಲಾಗುತ್ತಿದೆ. ಪ್ರಭಾವಿಗಳ ಮಕ್ಕಳು ತಪ್ಪಿಸಿಕೊಂಡರೆ ಅಮಾಯಕರು ಶಿಕ್ಷೆಗೆ ಒಳಗಾಗುತ್ತಿದ್ದಾರೆ. ಅದು ನಿಲ್ಲಬೇಕು ಎಂದು ಹೇಳಿದರು.

ಶಿಕ್ಷಕಿ ಸುಗುಣಾ ಕೋಳ್ಕೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರತಿಭೆ ತೋರಿದ ವಿಧ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.  ಮುಖ್ಯಗುರು ವಿಧ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಸಿದ್ದಲಿಂಗ ಬಾಳಿ, ಶಿವಕುಮಾರ ಸರಡಗಿ, ಭುವನೇಶ್ವರಿ.ಎಂ. ರಾಧಾ ರಾಠೋಡ, ಮಂಜುಳಾ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ಬಾಳಿ ನಿರೂಪಿಸಿದರು. ಭಾರತಿ ಪರೀಟ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here