ಜೇವರ್ಗಿ: ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಎಲ್ಲಾ ಸದಸ್ಯರೊಂದಿಗಿನ ಚರ್ಚೆಯ ನಂತರ ತಾಲೂಕು ಘಟಕದ ಶರಣ ನೀಲಕಂಠ ಅವಂಟಿ ಅವರನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜೇವÀರ್ಗಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಸರ್ವಾನೂಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ಉಳಿದ ಪದಾದಿಕಾರಿಗಳನ್ನು ನೂತನ ಅಧ್ಯಕ್ಷರು ಸರ್ವರ ಸಹಮತದೊಂದಿಗೆ ನೇಮಕಮಾಡಿ ಜಿಲ್ಲಾ ಘಟಕಕ್ಕೆ ತಿಳಿಸುವಂತೆ ನಿರ್ಣಯಿಸಲಾಯಿತು. ಇಂದಿನ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿಗಳಾದ ಆರ್. ಜಿ. ಶೆಟಗಾರ, ಕೋಶಾಧ್ಯಕ್ಷರಾದ ಸಂಗಮೇಶ ಗುಬ್ಬೇವಾಡ, ರವೀಂದ್ರ ಶಹಬಾದಿ, ಜೊತೆಗೆ ಜಿಲ್ಲಾ ಘಟಕದ ವತಿಯಿಂದ ಅಯ್ಯಣಗೌಡ ಪಾಟೀಲ್, ಹಣಮಂತ್ರಾವ ಪಾಟೀಲ್, ರವಿ ಸಜ್ಜನ, ಶಿವರಾಯ ಬಳಗಾನೂರ, ವಿಶ್ವನಾಥ ಡೋಣೂರ, ಮುರಗೇಂದ್ರ ಚಿಂಚೋಳಿಮಠ, ಬಸವರಾಜ ಧೂಳಾಗುಂಡಿ ಹಾಜರಿದ್ದರು.
ಸ್ಥಳಿಯ ಲಿಂಗಾಯತ ಸಮಾಜದ ಮುಖಂಡರಾದ ಶಿವನಗೌಡ ಪಾಟಿಲ ಹಂಗರಗಿ ಷಣ್ಮುಖಪ್ಪ ಹೀರಗೌಡ, ಶರಣಬಸಪ್ಪ ಕಲ್ಲಾ, ಗುರಲಿಂಗಪ್ಪಗೌಡ ಮಾಲಿಪಾಟಿಲ ಆಂದೋಲಾ, ಬಾಪುಗೌಡ ಪಾಟಿಲ ಬಿರಾಳ, ಸಂಗನಗೌಡ ಪಾಟಿಲ ಗುಳ್ಯಾಳ, ವಿಜಯಕುಮಾರ ಕಲ್ಲಾ, ಆಖಂಡೆಪ್ಪ ಕಲ್ಲಾ, ಶೆಖರಪ್ಪಗೌಡ ಪಾಟಿಲ, ಮಲ್ಲಿಕಾರಜುನ ಬಿರೆದಾರ ಹಾಗು ಇತರ ಮುಖಂಡರು ಹಾಜರಿದ್ದರು.