ತೊಗರಿ ರೈತರಿಗೆ ಹೆಚ್ಚಿನ ಪರಿಹಾರ ಘೋಷಿಸಿ: ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

0
18

ಕಲಬುರಗಿ: ನೆಟೆ ರೋಗದಿಂದ ಹಾನಿಗೊಳಗಾಗಿ ತೀವ್ರ ಸಂಕಷ್ಟದಲ್ಲಿರುವ ತೊಗರಿ ರೈತರಿಗೆ ರಾಜ್ಯ ಸರ್ಕಾರ ಇದೀಗ ಹೆಕ್ಟರ್‍ಗೆ 10 ಸಾ. ರು ನಂತೆ 2 ಹೆಕ್ಟರ್‍ಗೆ ಸೀಮಿತವಾಗಿ ಮಾಡಿರುವ ಪರಿಹಾರ ಘೋಷಣೆಯನ್ನೇನೋ ಮಾಡಿದೆ. ಇದರಿಂದ ತೊಂದರೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗದು. ಎಕರೆಗೆ 25 ಸಾವಿರ ರು ನಂತೆ ಪರಿಹಾರ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಈ ಬಗ್ಗೆ ಬೆಳಗಾವಿ ಸದನದಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು. ಆದರೀಗ ಎಕರೆಗೆ 4 ಸಾ. ರು ನಂತೆ ಹೆಕ್ಟರ್‍ಗೆ 10 ಸಾ. ರು ಪರಿಹಾರ ಘೋಷಣೆ ಮಾಡಿರೋದು ರೈತರಿಗೆ ಅನುಕೂಲವಾಗದು, ಆದಷ್ಟು ಬೇಗ ಹೆಚ್ಚುವರಿ ಪರಿಹಾರ ಪ್ಯಾಕೇಜ್ ರಾಜ್ಯ ಸರ್ಕಾರ ಘೋಷಣೆ ಮಾಡಲಿ ಎಂದು ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಹೆಕ್ಟರ್ ತೊಗರಿ ನೆಟೆ ರೋಗಕ್ಕೆ ಹಾಳಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಳು ಬೀದಿಗೆ ಬಿದ್ದಿವೆ. ರಾಜ್ಯ ಸರ್ಕಾರದ ಪರಿಹಾರದಿಂದ ರೈತರ ರಸಗೊಬ್ಬರ, ಬೀಜದ ವೆಚ್ಚವೂ ಆಗೋದಿಲ್ಲ. ಸಾವಿರ ಕೋಟಿ ರು ಪರಿಹಾರ ಪ್ಯಾಕೇಜ್ ನೀಡುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ಪರಿಹಾರದ ಮೊತ್ತ ಹೆಚ್ಚಿಗೆ ಮಾಡುವ ಮೂಲಕ ರೈತರಿಗೆ ನೆರವಿಗೆ ಬರಬೇಕು. ಈಗಿನಕ್ಕಿಂತ ಹೆಚ್ಚುವರಿ ಪರಿಹಾರ ಘೋಷಣೆ ಮಾಡಲು ಸರ್ಕಾರ ಪುನಃ ಚಿಂತನೆ ಮಾಡಿ ನಿರ್ಣಯಕ್ಕೆ ಬರಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಸರ್ಕಾರದ ಪರಿಹಾರ ಗೋಷಣೆ ಕ್ರಮ ಸ್ವಾಗತಿಸುತ್ತೇನೆ. ಆದರೆ ಸರಾಸರಿಯಾಗಿ 1 ಎಕರೆಯಲ್ಲಿ ರೈತರು 4 ರಿಂದ 6 ಕ್ವಿಟಾಂಲ್ ತೊಗರಿ ಬೆಳೆಯುತ್ತಿದ್ದರು. ಸರಾಸಿರ 6, 500 ರು ಗೆ ಕ್ವಿಂಟಾಲ್ ತೊಗರಿ ಎಂದು ಲೆಕ್ಕ ಹಾಕಿದರು 38 ಸಾವಿರ ರುಪಾಯಿ ಲಾಭ ರೈತರದಾಗುತ್ತಿತ್ತು. ಹಾಳಾಗಿರುವ ತೊಗರಿಗೆ ರೈತರ ಲೆಕ್ಕದಂತೆ 38 ಸಾವಿರ ಬೇಡ, ಕೊನೆ ಪಕ್ಷ 25 ಸಾವಿರ ರುಪಾಯಿ ಎಕರೆಗಾದರೂ ನೀಡಲು ಸರ್ಕಾರ ಮುಂದಾಗಲಿ. ರೈತರ ಸಂಕಟ- ನೋವು ಅರಿತು ರೈಪರ ನಿಲುವಿಗೆ ಮುಂದೆ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here