ಕಲಬುರಗಿ: ನಗರದ ಡಾ.ಪಂಡಿತ ರಂಗ ಮಂದಿರದಲ್ಲಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳ ಜಾಗೃತಿ ಸಮಾವೇಶ ಹಾಗೂ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕವಲಗಾ-ಇವಣಿ ಮಠದ ಅವದೂರ ನಾಗಲಿಂಗ ಶರಣರು ಚಾಲನೆ ನೀಡಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ನ್ಯಾಯವಾದಿ ಗುರುರಾಜ ತಿಳಗೂಳ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ದಿಲೀಪ ಪಾಟೀಲ, ಲತಾ ರವಿ ರಾಠೋಡ, ನರಸಿಂಹ ಮೆಂಡನ್, ಅಮೃತ ಸಿ.ಪಾಟೀಲ, ರವಿ ಒಂಟಿ ಸೇರಿದಂತೆ ಬಹುಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.