37ನೇ ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಕಾರಣ

0
30
  • ಶಿವಾನಂದ ತಗಡೂರು

ಬಸವನಾಡು, ಗುಮ್ಮಟದ ಬೀಡಾದ ವಿಜಯಪುರದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ 37ನೇ ಪತ್ರಕರ್ತರ ಸಮ್ಮೇಳನದ ಯಶಸ್ಸಿಗೆ ಕಾರಣವಾದ ಎಲ್ಲಾ ಪತ್ರಕರ್ತರಿಗೂ ಅನಂತಾನಂತ ನಮನಗಳು —

ಬಸವನಾಡು, ಗುಮ್ಮಟದ ಬೀಡು ವಿಜಯಪುರದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ (ಕೆಯುಡಬ್ಲ್ಯೂಜೆ) ಸಂಘಟಿಸಿದ್ದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವು ಹತ್ತು ಹಲವು ‘ಹೊಸ ತುಡಿತ’ಗಳಿಗೆ ನಾಂದಿಯಾಡಿದೆ..!

Contact Your\'s Advertisement; 9902492681

‘ಸುದ್ದಿ ಮನೆಯ ಒಂದಷ್ಟು ಧಾವಂತಗ’ಳನ್ನು ತೆರದಿಡುವಲ್ಲಿ,
‘ಆತಂಕಗಳನ್ನು ದಾಖಲಿಸುವಲ್ಲಿ’, ‘ತನ್ನೊಳಗಿನ ನೂನ್ಯತೆ’ಗಳಿಗೆ ಕನ್ನಡಿ ಹಿಡಿಯುವಲ್ಲಿ,‌ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಖಂಡಿತವಾಗಿಯೂ 37ನೇ ‘ರಾಜ್ಯ ಪತ್ರಕರ್ತರ ಸಮ್ಮೇಳನ’ ಒಂದು ದಾಪುಗಾಲು ಇಟ್ಟಿದೆ..! ಅಲ್ಲದೇ ಅದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ನೀವೆಲ್ಲರೂ ಕಾರಣ..!

ಸಮ್ಮೇಳನ ನೆಪದಲ್ಲಿ ಸುದ್ದಿ ಮನೆಯ ನಾನಾ ವಿಭಾಗದಲ್ಲಿ ಕೆಲಸ ಮಾಡುವವರು ‘ಗಡಿ ಜಿಲ್ಲೆ ಐತಿಹಾಸಿಕ ಗುಮ್ಮಟ’ ನಗರಿ‌ಯಲ್ಲಿ ಮುಖಾಮುಖಿಯಾಗಿದ್ದು ಕೂಡ ಇತಿಹಾಸವನ್ನು ಕಾಲಘಟ್ಟದಲ್ಲಿ ಮಹತ್ವದ ಬೆಳವಣಿಗೆಯಾಗಿದೆ..!

‘ವೃತ್ತಿ ನಿರತ ನೈಜ ಪತ್ರಕರ್ತ’ರ ಸಮುದಾಯದಲ್ಲೊಂದು ‘ಆಶಾ ಭಾವನೆ’ಗಳನ್ನು ಚಿಗುರೊಡೆಯಲು, ‘ವೃತ್ತಿ ಬದ್ಧತೆಯ ಆತ್ಮವಿಶ್ವಾಸ’ವನ್ನು ಹೆಚ್ಚಿಸಲು ಒಂದಿಷ್ಟು ಸಾಧ್ಯವಾಗಿದ್ದರೆ, ಅಷ್ಟರ ಮಟ್ಟಿಗೆ ಸಮ್ಮೇಳನ ಸಾರ್ಥಕ ಮತ್ತು ಒಂದು ಯಶಸ್ವಿಯಾಯಿತು ಎಂಬ ಹೆಜ್ಜೆಯು ನಮ್ಮೆಲ್ಲರದು..!

ಹಲವು ವೈರುದ್ಯಗಳ ವಿರುದ್ಧವಾಗಿ ಈಜಬೇಕಾಗಿರುವ ಈ ಸಂದರ್ಭದಲ್ಲಿ ವೃತ್ತಿ ಬಾಂಧವರಿಗೆ ಸಂಘಟನೆಯೇ ಒಂದು ‘ಜೀವ ಸಂಜೀವಿನಿ’ ಎನ್ನುವುದು ಹಲವಾರು ಬಾರಿ ನಿರೂಪಿತವಾಗಿದೆ..!
ಅದನ್ನು ನೀವೆಲ್ಲರೂ ಮತ್ತೆ ಮತ್ತೇ ನಿಜ ಮಾಡುತ್ತಲೇ ಬಂದಿದ್ದೀರಿ. ಅದಕ್ಕಾಗಿ ನಿಮಗೆ ವಂದನೆಗಳು..!

ನಿಜ ಹೇಳಬೇಕು ಎಂದರೆ, ‘ಕೆಯುಡಬ್ಲ್ಯೂಜೆ’ಯ ಮೇಲೆ ನೀವಿಟ್ಟಿರುವ‌ ವಿಶ್ವಾಸಾರ್ಹತೆಯೇ ಸಮ್ಮೇಳನಕ್ಕೊಂದು ಮೆರಗು..!

ದೂರದಲ್ಲಿ ನಿಂತು ಹಾರೈಸಿದ್ದೀರಿ. ಕಷ್ಟದಲ್ಲಿಯೂ ಸಂತೈಸಿದ್ದೀರಿ. ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲಿ ಎಂದು ನಿರೀಕ್ಷಿಸಿ ಹರಸಿದವರಿಗೆಲ್ಲಾ ಚಿರ ಋಣಿ ಆಗಿದೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು..!

ನಾಡಿನ ಉದ್ದಗಲಕ್ಕೂ ಅತ್ಯುತ್ಸಾಹದಿಂದ ನಮ್ಮದೇ ಸಮ್ಮೇಳನ ಎಂದು ಭಾಗಿಯಾಗಿದ್ದ ಪತ್ರಕರ್ತ ಬಾಂಧವರೆಲ್ಲರಿಗೂ ಎಷ್ಟು ಬಾರಿ ಧನ್ಯವಾದ ಹೇಳಿದರೂ ಕಡಿಮೆಯೇ..!

ಲೋಪ ದೋಷಗಳೇನೆ ಇದ್ದರೂ ಒಟ್ಟಾರೆಯಾಗಿ ವೃತ್ತಿಪರ ಬಾಂಧವರ ಭಾವನೆಗಳು, ಬೇಡಿಕೆಗಳು
ಸಮ್ಮೇಳನ ಮೂಲಕ ಅಭಿವ್ಯಕ್ತಗೊಂಡಿವೆ..!

ನಮ್ಮ ಹಕ್ಕೊತ್ತಾಯಗಳು ಆಳುವ ಪ್ರಭುತ್ವವನ್ನು ಪರಿಣಾಮಕಾರಿಯಾಗಿ ತಲುಪಿವೆ. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮೇಳನದಲ್ಲಿ ನೀಡಿದ ಸ್ಪಂದನೆಯೇ ಸಾಕ್ಷಿಯಾಗಿದೆಯೂ..!

ಇನ್ನೂ ಸಮ್ಮೇಳನದಲ್ಲಿ ಆಯೋಜಿಸಿದ್ದ
ನಾಲ್ಕೂ ಗೋಷ್ಠಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ, ಅರ್ಥಪೂರ್ಣವಾಗಿ, ಗುಣಮಟ್ಟದಲ್ಲಿ ನಡೆದಿರುವುದನ್ನು ಸುದ್ದಿ ಮನೆಯೇ ಸಾಕ್ಷೀಕರಿಸಿದೆ..‍!
ಇದು ಸಮ್ಮೇಳನಕ್ಕೆ ಮತ್ತೊಂದು ಹೊಸತನದ ಮೆರಗು ಕೂಡ ಹೌದು..!

ಇನ್ನೂ ಒಂದಷ್ಟು ಸಮ್ಮೇಳನದಲ್ಲಿ ಆಗಬೇಕಿತ್ತು ಎನ್ನುವುದು ನಿರೀಕ್ಷೆ ಸಹಜವಾದದ್ದೇ. ಆದರೆ ಇತಿಮಿತಿಗಳ ನಡುವೆಯೂ ಸಾಧ್ಯವಾದ ಮಟ್ಟಿಗೆ ಸಮ್ಮೇಳನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಧೃಡ ಹೆಜ್ಜೆ ಇಟ್ಟು ಸಂಘಟಿಸಿದ ‘ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷ ಸಂಗಮೇಶ ಚೂರಿ ನೇತೃತ್ವದ ಎಲ್ಲಾ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ನಮ್ಮ ಅನಂತಾನಂತ ನಮನಗಳು ಸಲ್ಲುತ್ತವೆ..!

ಒಳ್ಳೆಯ ನೆನಪುಗಳು ನಿಮ್ಮ ಪಾಲಿಗಿರಲಿ. ಏನೇ ಲೋಪದೋಷಗಳಿದ್ದರೂ ಅವೆಲ್ಲ ನಮ್ಮ ಪಾಲಿಗಿರಲಿ..!

‘ರಾಜ್ಯ ಪತ್ರಕರ್ತರ ಸಮ್ಮೇಳನ’ಕ್ಕೆ ಸಾಕ್ಷಿಯಾದ ಪ್ರತಿಯೊಬ್ಬರಿಗೂ ಅನಂತಾನಂತ ಅಭಿನಂದನೆಗಳು..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here