ಲೇಖಕಿ ಪ್ರೊ.ಚೆಕ್ಕಿ ರಚಿತ `ಗೆಲುವಿನ ಆಸೆ’ ಕಾವ್ಯ ಬಿಡುಗಡೆ

0
21

ಸೇಡಂ: ಹಿರಿಯ ಲೇಖಕಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಮತ್ತು ಉಪನ್ಯಾಸಕಿ ಪ್ರೊ.ಶೋಭಾದೇವಿ ಚೆಕ್ಕಿ ಅವರು ಬರೆದ `ಗೆಲುವಿನ ಆಸೆ’ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು.

ಪಟ್ಟಣದ ಕಲ್ಪವೃಕ್ಷ ನಿವಾಸದ ಸಭಾಂಗಣದಲ್ಲಿ ಶಾಂಭವಿ ಮಹಿಳಾ ಸಂಘದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಿ, `ರಸ್ತೆಯ ಬದಿಯಲ್ಲಿ ಉಗುಳಿ ರಸ್ತೆ ಹಾಳಾಗುವುದಕ್ಕಿಂತ, ಉಗುಳಿ ನಿಮ್ಮೊಳಗಿನ ರೋಗವನ್ನು ಹರಡಬೇಡಿ’ ಎಂಬ ಕವಿತೆಯನ್ನು ಪ್ರಸ್ತಾಪಿಸಿ, ಹೊಸ ಆಲೋಚನೆಯ ಬರಹವನ್ನು ಶ್ಲಾಘಿಸಿದರು. ಮಹಿಳಾ ಪರವಾದ ಧ್ವನಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಪ್ರೊ.ಚೆಕ್ಕಿ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಉದ್ಯಮಿ ಮನೋಹರ ದೊಂತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷೆ ಚೆನ್ನಮ್ಮ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಸಂತಾ ಎಂ. ದೊಂತಾ ವೇದಿಕೆಯಲ್ಲಿದ್ದರು. ಲೇಖಕಿ ಪ್ರೊ.ಶೋಭಾದೇವಿ ಚೆಕ್ಕಿ ಅವರು ಪ್ರಾಸ್ತಾವಿಕ ಮಾತನಾಡಿದರು.

ವಾಸವಿ ದೊಂತಾ ಪ್ರಾರ್ಥನಾ ಗೀತೆ ಹಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷತೆ ಈರಮ್ಮ ಯಡ್ಡಳ್ಳಿ, ಕವಿತಾ ಖಜೂರಿ, ಶೀಲಾ ನಿರ್ಣೀ, ವಿಜಯಲಕ್ಷ್ಮೀ ಕೆರಳ್ಳಿ, ಪಲ್ಲವಿ ಶಹಾ, ಮಾಧವಿ ಐನಾಪುರ, ಜಗದೇವಿ ಅಣಕಲ್, ಸವಿತಾ ಚವ್ಹಾಣ, ಸಂಗಮ್ಮ ಕೆರಳ್ಳಿ, ರತ್ನಕಲಾ ರೆಡ್ಡಿ, ಅನಿತಾ , ಶಾರದಾಬಾಯಿ ಬೊಮ್ನಳ್ಳಿ, ಚಂದಮ್ಮ ಮೇಳಕುಂದಿ ಇದ್ದರು. ಕಾರ್ಯಕ್ರಮವನ್ನು ಮೋನಿಕಾ ಕೆರಳ್ಳಿ ನಿರೂಪಿಸಿದರು. ರಾಜೇಶ್ವರಿ ಬಿಲಗುಂದಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here