ಕಲಬುರಗಿ: ವಿಧಾನ ಪರಿಷತ್ ಸದಸ್ಯ ಬಿಜೆಪಿ ನಾಯಕರಾದ ಎನ್ ರವಿಕುಮಾರ್ ಅವರು ಡಾ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಗೆ ಮಹಾನ್ ಕಳ್ಳರು ಅಂತ ಪದ ಬಳಕೆ ಮಾಡಿರುವುದು ನಾಚಿಕೆಗೇಡಿನ ಪ್ರವೃತ್ತಿ ಎಂದು ಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಕುಮಾರ್ ಅವರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ದುಡ್ಡಿನ ಅವಶ್ಯಕತೆ ಇಲ್ಲ ಅವರು ನಿಮ್ಮ ತರಹ ಸೂಟಕೇಸ್ ರಾಜಕಾರಣಿಗಳಲ್ಲ ರಾಷ್ಟ್ರೀಯ ನಾಯಕರೊಬ್ಬರ ಬಗ್ಗೆ ಮಾತನಾಡುವ ಮುನ್ನ ಸ್ವಲ್ಪ ಅರಿತುಕೊಂಡು ಮಾತನಾಡುವುದು ಒಳಿತು. ರಾಷ್ಟ್ರೀಯ ನಾಯಕ AICC ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಏನೇನು ಅಭಿವೃದ್ಧಿ ಮಾಡಿದ್ದಾರೆ.
ಅನ್ನುವುದು ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಗೊತ್ತು ಮಲ್ಲಿಕಾರ್ಜುನ ಖರ್ಗೆ ಅವರು ಅನೇಕ ಯೋಜನೆಗಳನ್ನು ತಂದು ಹಳ್ಳಿಯಂತಿದ್ದ ದಿಲ್ಲಿಯಂತೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದು ಯೋಜನೆ ತರಲಿಲ್ಲ ಯೋಜನೆ ತರುವುದು ದೂರದ ಮಾತು ಖರ್ಗೆ ಅವರು ತಂದ ಯೋಜನೆ ಉಳಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ ಆದರೆ ಖರ್ಗೆ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಂ ಎಲ್ ಸಿ ರವಿಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.