ಕಲಬುರಗಿ ನಗರವೀಗ ಮೆಡಿಕಲ್ ಹಬ್: ಶಾಸಕ ರೇವೂರ

0
82

ಕಲಬುರಗಿ: ನಗರವನ್ನು ಮೆಡಿಕಲ್ ಹಬ್ ಮಾಡಲು ಖಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಬರುವ ಕೆಬಿಎನ್ ಆಸ್ಪತ್ರೆ ಸಜ್ಜಾಗಿದ್ದುˌ ಬಹುದಿನದ ಕನಸು ನನಸಾಗಿದೆ ಎಂದು ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ಖಾಜಾಬಂದೇನವಾಜ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ತುರ್ತು ವಿಭಾಗ ಮತ್ತು ಐಸಿಯು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಗರದ ಜನರು ವೈದ್ಯಕೀಯ ನೆರವಿಗಾಗಿ ನೆರೆಯ ರಾಜ್ಯಗಳಾದ ಹೈದ್ರಾಬಾದˌ ಸೋಲಾಪುರ ನಗರಗಳಿಗೆ ಹೋಗುವುದು ತಪ್ಪಿಸಿದಂತಾಗಿದೆ. ಜಿಲ್ಲೆಯಲ್ಲಿಯೂ ಇಂತಹ ಹೈಟೆಕ್ ಆಸ್ಪತ್ರೆ ಪ್ರಾರಂಭವಾಗುವುದರಿಂದ ಗುಣಮಟ್ಟದ ಚಿಕಿತ್ಸೆ ಸಿಗಲಿದೆ ಎಂದರು.

Contact Your\'s Advertisement; 9902492681

ನಂತರ ಅಧ್ಯಕ್ಷೀಯ ನುಡಿಗಳನ್ನಾಡಿದ ಖಾಜಾ ಬಂದನವಾಜ್ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಖಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಸೈಯದ್ ಷಾ ಖುಸ್ರೋ ಹುಸೇನಿ ಸಾಹಬ್ˌ ಆಸ್ಪತ್ರೆಯ ಸೇವೆ ಬಡವರಿಗೆ ಸಿಗಲಿ. ಅಸಹಾಯಕವಾದ ರೋಗಿಗಳಿಗೆ ಉಚಿತವಾಗಿ ಆರೈಕೆ ಮತ್ತು ಮಾತ್ರೆಗಳು ನೀಡುವ ಕೆಲಸ ಸಂಸ್ಥೆ ಮಾಡಲಿದೆ ಎಂದರು.

ನಗರದ ಖಾಜಾ ಬಂದನವಾಜ್ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕೆಬಿಎನ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿದ ತುರ್ತು ಮತ್ತು ಐಸಿಯು ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಖಾಜಾ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಸೈಯದ್ ಮಹಮ್ಮದ್ ಅಲಿ ಅಲ್ ಹುಸೇನಿ, ನಿರ್ದೇಶಕ ಅಲಿ ರಝಾ ಮುಸ್ವಿ, ರಿಜಿಸ್ಟ್ರಾರ್ ಡಾ ರುಕ್ಸಾರ್ ಫಾತಿಮಾ, ಪ್ರಧಾನ ಕಾರ್ಯದರ್ಶಿ ಪ್ರೊ. ಎ.ಎಂ ಪಠಾಣ್, ವಿಜ್ಞಾನ ವಿಭಾಗದ ಡೀನ್ ಡಾ.ಸಿದ್ದೇಶ್ವರ, ಎಂಜಿನಿಯರ್ ವಿಭಾಗದ ಡೀನ್ ಡಾ.ಅಜಮ್ ಕಮಲ್ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here