ಹರೆದ ವಯಸ್ಸಿನಲ್ಲಿ ಎಚ್ಚರ ವಹಿಸಬೇಕು ಗಾಬರಿ ಬೇಡ

0
21

ಕಲಬುರಗಿ: ಹದಿಹರೆಯರ ವಯಸ್ಸಿನಲ್ಲಿ ಯುವಕರಲ್ಲಿ ಶಾರೀರಿಕವಾಗಿ ಬದಲಾವಣೆಗಳಾಗುವುದು ಸಹಜ. ಆ ಬಗ್ಗೆ ಆತಂಕ ಬೇಡ. ಎಚ್ಚರದಿಂದ ಇದ್ದರೇ ಸಾಕು ಎಂದು ಶಹಾಬಾದ ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಹೇಳಿದರು.ಅವರು ಶಹಾಬಾದ ತಾಲೂಕಿನ ಮರಗೋಳ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್ ಕಲಬುರ್ಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲ್ಬುರ್ಗಿ, ಸಮುದಾಯ ಆರೋಗ್ಯ ಕೇಂದ್ರ ಶಹಬಾದ ಸಂಯುಕ್ತ ಆಶ್ರಯದಲ್ಲಿ ಸ್ನೇಹ ಕ್ಲಿನಿಕ್ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಹದಿಹರೆದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹದಿಹರೆದವರಿಗೆ ಸರಿಯಾದ ತಿಳುವಳಿಕೆ ನೀಡಿ ಜವಾಬ್ದಾರಿ ಹೆಚ್ಚಿಸುವ ಸನ್ನಿವೇಶಕ್ಕೆ ಹೊಂದಿ ಉದ್ದೇಶದಿಂದ ಭಾರತ ಸರ್ಕಾರವು ಯೋಜನೆಯನ್ನು ಹಮ್ಮಿಕೊಂಡಿದೆ ಬೇಗ ಮದುವೆಯಾಗುವುದು ಲೈಂಗಿಕ ವಿಷಯಗಳ ಬಗ್ಗೆ ತಪ್ಪು ತಿಳುವಳಿಕೆ ಸಮ ವಯಸ್ಕರ ಒತ್ತಡ ಮುಂತಾದವುಗಳ ಅಧ್ಯಾಯದವರನ್ನು ಕಾಡಿಸುವ ಸಮಸ್ಯೆಗಳಾಗಿದ್ದು ನೀವು ಸಮಾಜಕ ಆರ್ಥಿಕ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಡಾ.ಸಂಧ್ಯಾ ಡಾಂಗೆ ಮಾತನಾಡಿ, ಹತ್ತರಿಂದ 19 ವರ್ಷ ವಯಸ್ಸಿನ ಯುವತಿಯರಲ್ಲಿ ಪೌಷ್ಟಿಕ ಆಹಾರ ಕೊರತೆ ಶಾರೀರಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ದೊಡ್ಡ ದೊಡ್ಡ ಪಟ್ಟಣ ಪ್ರದೇಶದಲ್ಲಿ ಯುವಕರಲ್ಲಿ ಮಧ್ಯಪಾನ, ಡ್ರಗ್ಸ್, ತಂಬಾಕು ಗುಟ್ಕಾ ಸೇವನೆ ಹೆಚ್ಚು ಕಾಣುತ್ತಿದೆ. ಈ ಎಲ್ಲಾ ಕಾರಣಗಳಿಂದ ಹದಿಹರೆದವರಿಗೆ ಸರಿಯಾದ ತಿಳುವಳಿಕೆ ನೀಡಿ ಅವರ ಜವಾಬ್ದಾರಿ ಹೆಚ್ಚಿಸುವ ಸ್ಥಳೀಯ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಆರ್‍ಕೆಎಸ್‍ಕೆ ವಿಭಾಗದ ಜಿಲ್ಲಾ ಸಂಯೋಜಕ ಶಿವಕುಮಾರ್ ಕಾಂಬಳೆ ಮಾತನಾಡಿದರು.ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಆರ್‍ಕೆಎಸ್‍ಕೆ ಆಪ್ತ ಸಮಾಲೋಚಕ ಅಮರೇಶ ಇಟಗಿಕರ್,ಸುಮಂಗಲ,ಬಸಯ್ಯ ಹಿರೇಮಠ,ಯೂಸುಫ್ ನಾಕೇದಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here