ಟಿವಿ ಮತ್ತು ಮೊಬೈಲ್‍ಗೆ ಕೊಡುವಷ್ಟು ಮಹತ್ವ ವ್ಯಯಕ್ತಿಕ ಶೌಚಾಲಯಕ್ಕೆ ಕೊಡಿ

0
18

ಕಲಬುರಗಿ:ಟಿವಿ ಮತ್ತು ಮೊಬೈಲ್‍ಗೆ ಕೊಡುವಷ್ಟು ಮಹತ್ವವನ್ನು ವ್ಯಯಕ್ತಿಕ ಶೌಚಾಲಯಕ್ಕೆ ಕೊಟ್ಟರೇ ರೋಗರುಜಿನಗಳಿಂದ ಮುಕ್ತ ಗ್ರಾಮವನ್ನು ಕಾಣಬಹುದೆಂದು ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಹೇಳಿದರು.

ಅವರು ಶಹಾಬಾದ ತಾಲೂಕಿನ ಮರತೂರ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಮಲ್ಲಾಬಾದ ಇವರ ಸಂಯುಕ್ತಾಶ್ರಯದಲ್ಲಿ 2022 – 23ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮನೆಗೆ ಟಿ.ವಿ, ಕೈಗೆ ಮೊಬೈಲ್ ಎಷ್ಟೂ ಅವಶ್ಯಕವೋ ಅμÉ್ಟೀ ಅವಶ್ಯಕವಾದದ್ದು ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವುದು. ಏಕೆಂದರೆ ನಮ್ಮ ಶೌಚಾಲಯ, ನಮ್ಮ ಸ್ವಾಭಿಮಾನ. ಅದರಲ್ಲಿ ವೈಯಕ್ತಿಕ ಶೌಚಾಲಯ ಹೆಣ್ಣು ಮಕ್ಕಳ ಸಂರಕ್ಷಣೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕಾಗಿ ಕುಟುಂಬದ ಹಿರಿಯರಿಗೆ ಮನವೊಲಿಸಲು ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

ನಂತರ ಮಾಹಿತಿ, ಶಿಕ್ಷಣ, ಸಂಪರ್ಕ, ಒಣಕಸ, ಹಸಿಕಸ ಬೇರ್ಪಡಿಸುವಿಕೆ, ಮದ್ಯಪಾನ, ಧೂಮಪಾನ, ಪರಿಸರ ಸ್ವಚ್ಛತೆ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಮಾನವೀಯ ಮೌಲ್ಯಗಳ ಕೊರತೆ, ಬಾಲ್ಯ ವಿವಾಹ, ವರದಕ್ಷಿಣೆ, ಮಕ್ಕಳ ಹಕ್ಕುಗಳ ರಕ್ಷಣೆ, ಪ್ಲಾಸ್ಟಿಕ್ ಬಳಕೆಯ ನಿμÉೀಧ ಮುಂತಾದ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯಕುಮಾರ್ ಹಂಚಿನಾಳ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ಶಾಲೆಯಲ್ಲಿ ಆಗಾಗ ಹಮ್ಮಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ ಕಾರ್ಯದರ್ಶಿ ಅಶೋಕ ಪಡಶೆಟ್ಟಿ ಮಾತನಾಡಿದರು. ಗ್ರಾಂ. ಪಂ. ಸಿಬ್ಬಂದಿ ವರ್ಗ, ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ಸ್ವಚ್ಛ ಭಾರತ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಟೀಕಾರಾವ್ ಮುಂಡರಗಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here