ದೇಶಕ್ಕೆ ತ್ಯಾಗ ಬಲಿದಾನ ಮಾಡಿದವರಿಗೆ ಮಾತ್ರ ಸಂವಿಧಾನದ ಬೆಲೆ ಗೊತ್ತು: ಮಲ್ಲಿಕಾರ್ಜುನ್ ಖರ್ಗೆ

0
115

ಕಲಬುರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರಿಗೆ ಹಾಗೂ ಹೋರಾಟದ ಅರಿವಿರುವವರಿಗೆ ಮಾತ್ರ ಸಂವಿಧಾನದ ಬೆಲೆ ಗೊತ್ತಾಗುತ್ತದೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖರ್ಗೆಹೆಳಿದ್ದರು.

ನಗರದ ಗ್ರಾಮೀಣ ಪೊಲೀಸ್ ಠಾಣೆ ಎದುರುಗಡೆ ನಡೆಯುತ್ತಿರು ತಮ್ಮ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದಶಕಗಳ ಹೋರಾಟದ ಕಠಿಣ ಹಾದಿಗಳನ್ನು ಜನರ ಮುಂದೆ ಬಿಚ್ಚಿಟ್ಟ ಅವರು ಹೋರಾಟ ಹಾಗೂ ಅಭಿವೃದ್ದಿಯನ್ನು ಪಕ್ಕಕ್ಕಿಟ್ಟು ಕೇವಲ ಟೀಕೆ ಮಾಡುವುದನ್ನೆ ಅಭ್ಯಾಸ ಮಾಡಿಕೊಂಡಿದ್ದಾರೆ.  ಸ್ವಾತಂತ್ರ್ಯ ನಂತರ ಹುಟ್ಟಿರುವ ಮೋದಿ, ಈ ದೇಶದ ಇತಿಹಾಸದ ಆಳ ಅರಿವಿಲ್ಲ. ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಜನರಿಗೆ ಹೇಳಬೇಕೆ ಹೊರತೋ ದಾರಿ ತಪ್ಪಿಸುವ ಮಾತುಗಳಲ್ಲ ಎಂದು ಟೀಕಿಸಿದರು.

Contact Your\'s Advertisement; 9902492681

ಜವಾಹರ್ ಲಾಲ್ ನೆಹರು, ಲಾಲ್ಬಹಾದ್ದೂರ ಶಾಸ್ತ್ರಿ, ವಲ್ಲಭಭಾಯಿ ಪಟೇಲ್ ಮುಂತಾದ ರಾಷ್ಟ್ರ‌ನಾಯಕರಿಗೆ ಸ್ವಾತಂತ್ರ್ಯದ ಹೋರಾಟ ಹಾಗೂ ಅದಕ್ಕಿಂತಲೂ ಹಿಂದಿನ ದೇಶದ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ‌ಇತ್ತು. ಅಂತ ರಾಷ್ಟ್ರ ನಾಯಕರು ಕಾಂಗ್ರೆಸ್ ಪಕ್ಷದವರು ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವಕ್ಕೆ ಹಾಗೂ ಆ‌ ನಂತರ ದೇಶದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ವಿವರ ನೀಡಿದ ಖರ್ಗೆ, ಮೊದಲು ಶೈಕ್ಷಣಿಕ ಪ್ರತಿಶತ 7 ಇತ್ತು ಈಗ ಅದು 79 ಆಗಿದೆ. ಶಿಶುಗಳ ಸಾವು ಗಣನೀಯವಾಗಿ  ಇಳಿಮುಖವಾಗಿದೆ. ನೀರಾವರಿ ಕೇವಲ 22 ಮಿಲಿಯನ್ ಹೆಕ್ಟೇರ್ ಇದ್ದಿದ್ದು ಈಗ 68 ಮಿಲಿಯನ್ ಹೆಕ್ಟರ್ ಗೆ ಮುಟ್ಟಿದೆ‌. ಹಾಕು ಉತ್ಪಾದನೆ 17 ಲಕ್ಷಮಿಲಿಯನ್ ಟನ್‌ನಿಂದ 138 ಮಿಲಿಯನ್ ಟನ್ ಗೆ ಮುಟ್ಟಿದೆ. 4 ಲಕ್ಷ ಕಿಮಿ ಇದ್ದ ರಸ್ತೆಗಳು 54 ಲಕ್ಷ ಕಿಮಿವರೆಗೆ ಮಾಡಿದ್ದೇವೆ. ನಾನು ಕೇಂದ್ರ ಸಚಿವನಾಗಿದ್ದಾಗ 12000 ಕೋಟಿ ಖರ್ಚು ಮಾಡಿ ದೇಶದ 8 ಕಡೆ ಇಎಸ್ ಐಸಿ ಆಸ್ಪತ್ರೆ ಕಟ್ಟಿಸಿದ್ದೇನೆ. 4,000 ಕೋಟಿ ಖರ್ಚು ಮಾಡಿ ಸೋಲಾಪುರದಿಂದ ಗುಲಬರ್ಗಾ, ರಾಯಚೂರು ಮೂಲಕ ಹಾದು ಹೋಗಿ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿ ಮಾಡುತ್ತಿದ್ದೇವೆ. ಮೋದಿಯ ತವರು ರಾಜ್ಯ ಗುಜರಾತ್ ನಲ್ಲಿ ರೂ 600 ಕೋಟಿ ಖರ್ಚು ಮಾಡಿ ಅಂಕಲೇಶ್ವರ ಹಾಗೂ ಅಹಮದ್ ಬಾದ್‌ನಲ್ಲಿ 300 ಬೆಡ್ ಗಳ ಆಸ್ಪತ್ರೆ ನಿರ್ಮಿಸಿದ್ದೇನೆ. ಇದೆಲ್ಲ ನಾನು ಮಾಡಿದ್ದು ಎಂದು ಹೆಮ್ಮೆಯಿಂದ ಹೇಳುತ್ತೇನೆ‌. ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು ಇದನ್ನು ಅರಿಯಲಿ ಎಂದು ಟಾಂಗ್ ನೀಡಿದರು.

ನನಗೆ ನೀವು ಕೊಟ್ಟಿರುವ ಶಕ್ತಿಗೆ ಮೀರಿ ಕೆಲಸ ಮಾಡಿದ್ದೇನೆ. ಇಷ್ಟೆಲ್ಲ ಮಾಡಿದರೂ ಕೂಡಾ ನನ್ನನ್ನು ಏನು ಮಾಡಿದ್ದಾರೆ ಎಂದು ಕೆಲವರು ಪ್ರಶ್ನಿಸಿದಾಗ ಮನಸಿಗೆ ನೋವಾಗುತ್ತದೆ ಎಂದು ಭಾವುಕರಾಗಿ ನುಡಿದರು. ಕೇವಲ 44 ಸಂಸದರನ್ನು ಇಟ್ಟುಕೊಂಡು ಬಿಜೆಪಿಯ 300 ಸಂಸದರನ್ನು ಸಮರ್ಥವಾಗಿ ಎದುರಿಸಿದ್ದೇನೆ ಇದನ್ನು ಮೋದಿಯವರೇ ಪ್ರಶಂಸಿಸಿ ಖರ್ಗೆ ಅವರನ್ನು ನೋಡಿ ಕಲಿಯಿರಿ ಎಂದು ಸದಸ್ಯರಿಗೆ ಹೇಳಿದ್ದುಂಟು ಎಂದು ಸ್ಮರಿಸಿಕೊಂಡರು.

ನಂತರ ಕಲಬುರಗಿ ಉತ್ತರ ಶಾಸಕರಾದ ಖನೀಜ್ ಫಾತಿಮಾ ಮಾತನಾಡಿ ಖರ್ಗೆ ಸಾಹೇಬರನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಮೇಯರ್ ಮಲ್ಲಮ್ಮ ವಳಿಕೇರಿ,ಎಚ್ ಕೆ ಈ ಸೊಸೈಟಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ನೀಲಕಂಠರಾವ್ ಮೂಲಗೆ, ಮಾರುತಿ ಮಾಲೆ, ಸುಭಾಷ್ ಬಿಜಾಪುರ, ಚಿದಂಬರ್ ರಾವ್ ಪಾಟೀಲ್, ಶಿವಕುಮಾರ ಘಂಟಿ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here