ಸುರಪುರ:ಕೆಲಸ ಖಾಯಂ ಮಾಡುವಂತೆ ನಗರಸಭೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

0
11

ಸುರಪುರ: ರಾಜ್ಯದಲ್ಲಿನ ಎಲ್ಲಾ ಪುರಸಭೆ,ನಗರಸಭೆ,ನಗರ ಪಾಲಿಕೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿನ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅನೇಕ ಜನ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಶಾಖನವರ್ ಮಾತನಾಡಿ,ರಾಜ್ಯದಲ್ಲಿನ ಹೊರಗುತ್ತಿಗೆ ನೌಕರರನ್ನು ಮುಖ್ಯಮಂತ್ರಿಗಳು ಖಾಯಂಗೊಳಿಸುವುದಾಗಿ ತಿಳಿಸಿ ಈಗ ಬಜೆಟ್‍ನಲ್ಲಿ ಹೆಸರಿಸದೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಜುಲೈನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದಲ್ಲಿನ ನಗರ ಸ್ಥಳಿಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆಯ ಕಸ ಸಾಗಿಸುವ ವಾಹನ ಚಾಲಕರು,ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್,ಹೆಲ್ಪರ್ಸ್,ಯುಜಿಡಿ ಕಾರ್ಮಿಕರು,ಡಾಟಾ ಎಂಟ್ರಿ ಆಪರೇಟರ್‍ಗಳು,ಬೀದಿ ದೀಪ ನಿರ್ವಾಹಕರು,ಗಾರ್ಡ್‍ನರ್‍ಗಳು,ಕಚೇರಿ ಸಹಾಯಕರು,ಸ್ಮಶಾನ ಕಾವಲಗಾರರು ಸೇರಿದಂತೆ ಎಲ್ಲರನ್ನು ಪೌರಕಾರ್ಮಿಕರಂತೆ ನೇರ ಪಾವತಿಗೆ ತರುವುದಾಗಿ ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದರು,ಆದರೆ ಅಂದಿನ ಘೋಷಣೆ ಈಗ ಬಜೆಟ್‍ನಲ್ಲಿ ಹುಸಿಗೊಳಿಸಿದ್ದಾರೆ.ಕೂಡಲೇ ಈ ಹಿಂದೆ ನೀಡಿದ ಆಶ್ವಾಸನೆಯಂತೆ ನೇರ ಪಾವತಿಗೆ ನಮ್ಮನ್ನು ಒಳಪಡಿಸಿ ನಂತರ ಖಾಯಂ ಮಾಡಬೇಕು ಇಲ್ಲವಾದಲ್ಲಿ ಇದೇ 22 ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಮೌನೇಶ ಕಟ್ಟಿಮನಿ,ಉಪಾಧ್ಯಕ್ಷ ಅಯ್ಯಣ್ಣ ಪೂಜಾರಿ,ಅನಿಲಕುಮಾರ ನಾಯಕ,ಗೋಪಾಲ ಸತ್ಯಂಪೇಟೆ,ಶರಣಬಸವ ಮಲ್ಲಿಬಾವಿ,ಮಹ್ಮದ್ ಅನ್ವರ್,ರಾಘವೇಂದ್ರ ಸುರಪುರಕರ್,ಮಲ್ಲಿಕಾರ್ಜುನ ಹುಲ್ಪೇನವರ್,ನಾಗರಾಜ ನಾಯಕ,ವಿನೋದ ಬಲ್ಲಿದವ್,ಪರಶುರಾಮ ಪೂಜಾರಿ,ವೆಂಕಟೇಶ ಪೂಜಾರಿ,ಬಸವರಾಜ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here