ಕಲ್ಯಾಣ ಕರ್ನಾಟಕ ಉತ್ಸವ; ಕನ್ನಡ ಕಲಾವಿದರ ಕಡೆಗಣೆಗೆ ಸಚಿನ್ ಫರಹತಾಬಾದ ಆಕ್ರೋಶ

0
26

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಾಂಸ್ಕøತಿಕ ಗತವೈಭವ ಸಾರುವ “ಕಲ್ಯಾಣ ಕರ್ನಾಟಕ ಉತ್ಸವ” ದಲ್ಲಿ ಈ ಭಾಗದ ಕಲೆ, ಸಂಸ್ಕೃತಿ, ವೈಭವ ಬಿಂಬಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಈ ಭಾಗದ ಜನರಿಗೆ ಸಂತೋಷದ ವಿಷಯವಾಗಿದ್ದು, ಆದರೆ ಅತೀ ಖೇದಕ ಸಂಗತಿ ಏನೆಂದರೇ, ಸದರಿ ಕಲ್ಯಾಣ-ಕರ್ನಾಟಕ ಭಾಗದ / ಕನ್ನಡ ನಾಡಿನ ಕಲಾವಿದರನ್ನು ಕಡೆಗಣಿಸಿ, ಈ ಉತ್ಸವದಲ್ಲಿ ಬಾಲಿವುಡ್ ಗಾಯಕರು (ಮಹಾರಾಷ್ಟ್ರ) ಕಲಾವಿದರನ್ನು ಆಹ್ವಾನಿಸಿದಕ್ಕೆ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ಅವರು ಖಂಡಿಸಿದ್ದಾರೆ. ಎಂದು ತಿಳಿಸಿದ್ದಾರೆ.

ಇಲ್ಲಿನ ಗಾಯಕರು/ಕಲಾವಿದರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ಕಲಾವಿದರಿಗೆ ಅಗೌರವ ತೋರಿಸುತ್ತಿದ್ದು, ಅಲ್ಲದೇ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಯಾವುದೇ ಕಾರ್ಯಕ್ರಮವಿದ್ದರೂ ಸಹಿತ ಮಹಾರಾಷ್ಟ್ರದ ಕಲಾವಿದರನ್ನು ಬಿಟ್ಟು ಬೇರೆ ಕಲಾವಿದರಿಗೆ ಅವಕಾಶ ಕೊಡುವುದಿಲ್ಲಾ ವಿಶೇಷವಾಗಿ ಕರ್ನಾಟಕ (ಕನ್ನಡ) ಕಲಾವಿದರಿಗೆ ಆಹ್ವಾನ ನೀಡುವುದಿಲ್ಲ. ಹೀಗಿದ್ದು, ಈ ಭಾಗದ ಕಲಾವಿದರನ್ನು ಕಡೆಗಣಿಸಿ, ಮಹಾರಾಷ್ಟ್ರದ ಕಲಾವಿದರನ್ನು ಆಹ್ವಾನಿಸಿ ಕಲ್ಯಾಣ ಕರ್ನಾಟಕ ಉತ್ಸವ ಮಾಡುತ್ತಿರುವುದು ಈ ಭಾಗದ ಕಲಾವಿದರಿಗೆ ದೊಡ್ಡ ಮೋಸ ವಾಗಿದೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here