ಕಲಬುರಗಿ:ಸಿಎಂ ಬೊಮ್ಮಾಯಿ ಮಂಡಿಸಿರುವ ಇಂದಿನ ಬಜೆಟ್‍ನಲ್ಲಿ ತೊಗರಿ ಕಣಜ ಕಲಬುರಗಿಯ ರೈತರ ಮುಖ್ಯ ಬೆಳೆಯಾದ ತೊಗರಿಯನ್ನೇ ಕಡೆಗಣಿಸಲಾಗಿದೆ. ನೆಟೆಯಿಂದ ಹಾಳಾದ ತೊಗರಿಗೆ ಪರಿಹಾರ ನೀಡೋದಾಗಿ ಘೋಷಿಸಿದ್ದಾರೆ ಇದು ಸ್ವಾಗತಾರ್ಹವಾದರೂ ತೊಗರಿ ತಳಿ ಸಂಶೋಧನೆ, ಬೇಳೆಕಾಳು ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಹಣ ಆಯಾವುದನ್ನು ಬಜೆಟ್‍ನಲ್ಲಿ ಘೋಷಿಸಲಾಗಿಲ್ಲ. ಹೀಗಾಗಿ ಪರಿಹಾರ ಕೊಟ್ಟು ತೊಗರಿ ರೈತರ ಮೂಗಿಗೆ ತುಪ್ಪ ಸವರಲಾಗಿದೆ ಎಂದು ಪ್ರಗತಿಪರ ರೈತ ಹಣಮಂತರಾವ ಭೂಸನೂರ್ ಹೇಳಿದ್ದಾರೆ.
ತೊಗರಿ ಬೇಸಾಯದಲ್ಲಿ ದಶಕದ ಹಿಂದೆ ಕಂಡುಹಿಡಿಯಲಾದಂತಹ ಹಳೆ ತಳಿಗಳನ್ನೇ ಬಳಸೋದರಿಂದಲೇ ನೆಟೆ ರೋಗ ಕಾಡುತ್ತಿದೆ. ವಿಜ್ಞಾನಿಗಳು ಈ ವಿಚಾರ ಹೇಳಿದ್ದರೂ ಸರ್ಕಾರ ಕಲಬುರಗಿಯಲ್ಲಿರುವ ಬೇಳೆಕಾಳು ಮಂಡಳಿಗೆ ಹೆಚ್ಚಿನ ಹಣ ನೀಡದೆ, ತೊಗರಿ ತಳಿ ಸಂಶೋಧನೆಗೂ ಒತ್ತು ಕೊಡದೆ ಮೌನವಾಗಿರೋದು ಇಲ್ಲಿನ ತೊಗರಿ ರೈತರಿಗೆ ಮೋಸ ಮಾಡಿದಂತಾಗಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ತೊಗರಿ ಪಾರ್ಕ್‍ಗೆ ಬೇಡಿಕೆ ಇದ್ದರೂ ಅದನ್ನು ಕಡೆಗಣಿಸಿ ಇಲ್ಲಿ ಹಾಗೂ ಯಾದಗಿರಿಯಲ್ಲಿ ಸಿಗಡಿ ಮೀನು ಪಾರ್ಕ್‍ಗೆ ಮುಂದಾÁ್ದರೆ. ಇದು ವಿಚಿತ್ರ ಧೋರಣೆಯಾಗದೆ. ಮೀನು ಕೃಷಿಗೆ ಮುಂದಾಗಲಿ, ಆದರೆ ಇಲ್ಲಿರುವ ತೊಗರಿ ಪಾರ್ಕ್ ಕಡೆಗಣಿಸಿದ್ದು ಸರಿಯಲ್ಲ ಎಂದೂ ಭೂನಸೂರ್ ಹೇಳಿದ್ದಾರೆ.