MRM College ವಜ್ರಮಹೋತ್ಸವಕ್ಕೆ ರಾಷ್ಟ್ರ ಪತಿಗಳ ಆವ್ಹಾನಿಸಲು ನಿರ್ಧಾರ

0
13

ಕಲಬುರಗಿ: ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ (ಎಂಆರ್ ಎಂಸಿ)ನ ವಜ್ರಮಹೋತ್ಸವ ಹಾಗೂ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾವೇಶ ಬರುವ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದರು.

ಮಹಾವಿದ್ಯಾಲಯದಲ್ಲಿಂದು ನಡೆದ ಮಹಾವಿದ್ಯಾಲಯದ ಸಿ ಮತ್ತು ಡಿ ಬ್ಲಾಕ್ ಹೊಸ ಕಟ್ಟಡಗಳ ಅಡಿಗಲ್ಲು ಸಮಾರಂಭ ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಮೂರು ದಿನಗಳ ಕಾಲ ಮಹೋತ್ಸವ ಆಚರಿಸಲು ಉದ್ದೇಶಿಸಲಾಗಿದೆ. ಸಮಾರಂಭ ಉದ್ಘಾಟನೆಗೆ ರಾಷ್ಟ್ರ ಪತಿಗಳಾದ ದ್ರೌಪದಿ ಮುರ್ಮು ಅವರನ್ನು ಆವ್ಹಾನಿಸಲಾಗುವುದು. ಮುಂಬರುವ ದಿನಗಳಲ್ಲಿ ಸಂಸ್ಥೆಯಿಂದ ಆವ್ಹಾನ ಸಲ್ಲಿಸಲಾಗುವುದು ಎಂದು ಡಾ. ಬಿಲಗುಂದಿ ವಿವರಣೆ ನೀಡಿದರು.

ಮಹಾವಿದ್ಯಾಲಯದ ಈಗಿನ ಕಟ್ಟಡ 60 ವರ್ಷಗಳಷ್ಟು ಹಳೇಯದಾಗಿದ್ದು, ನವೀಕರಣ ಬದಲು ಹೊಸದಾಗಿ ನಿರ್ಮಾಣ ಸೂಕ್ತ ಎಂಬುದನ್ನು ಮನಗಂಡು ಈಗ ಸಿ ಮತ್ತು ಡಿ ಬ್ಲಾಕ್ ಹೊಸ ಕಟ್ಟಡಗಳನ್ನು ಸುಮಾರು 6 ಕೋ.ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ವಜ್ರ ಮಹೋತ್ಸವ ಹೊತ್ತಿಗೆ ಈ ಹೊಸ ಕಟ್ಟಡ ಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪೂಜ್ಯರಿಂದು ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ಬೇಗ ಮುಗಿಯುವ ದೃಢ ವಿಶ್ವಾಸ ಹೊಂದಲಾಗಿದೆ ಎಂದರು.

ತಾವು ಸಂಸ್ಥೆ ಅಧ್ಯಕ್ಷರಾದ ಮೇಲೆ ಆಡಳಿತದಲ್ಲಿ ಪಾರದರ್ಶಕತೆ ತಂದ ಪರಿಣಾಮ ಇಷ್ಟೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ಡಾ.ಬಿಲಗುಂದಿ ಹೇಳಿದರು.

ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಹಾಗೂ ಹಾರಕೂಡದ ಡಾ. ಚೆನ್ನವೀರ ಶಿವಾಚಾರ್ಯರು ಮಹಾವಿದ್ಯಾಲಯದ ಹೊಸ ಸಿ ಮತ್ತು ಡಿ ಬ್ಲಾಕ್ ಗಳ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಜಗನ್ನಾಥ ವಿಜಾಪುರ, ಜಂಟಿ ಕಾರ್ಯದರ್ಶಿ ಮಹಾದೇವಪ್ಪ ರಾಂಪೂರೆ, ಆಡಳಿತ ಮಂಡಳಿ ಸದಸ್ಯ ರಾದ ಡಾ.ಶರಣಬಸಪ್ಪ ಕಾಮರೆಡ್ಡಿ, ಡಾ. ಅನೀಲ ಪಟ್ಟಣ, ಬಸವರಾಜ ಖಂಡೇರಾವ್, ಸೋಮನಾಥ ನಿಗ್ಗುಡಗಿ, ಸಾಯಿನಾಥ್ ಪಾಟೀಲ್, ಎಂಆರ್ ಎಂಸಿ ವೈದ್ಯಕೀಯ ಕಾಲೇಜ್ ನ ಡೀನ್ ಡಾ. ಎಸ್.ಎಂ. ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ಬಸವರಾಜ ಪಾಟೀಲ್ ರಾಯಕೋಡ ಸೇರಿದಂತೆ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here