ಕಲಬುರಗಿ: ಯಡಿಯೂರಪ್ಪ ಬಿಜೆಪಿಯಲ್ಲಿ ಅನುಭವಿಸುತ್ತಿರುವ ಯಾತನೆಯನ್ನು ವಿವರಿಸಿ, ಈ ಚುನಾವಣೆ ಬಸವ ತತ್ವ ಹಾಗೂ ಕೇಶವ ಕೃಪಾ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಅವರು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿ, ಈ ಚುನಾವಣೆ ಬಸವ ತತ್ವ ಹಾಗೂ ಕೇಶವ ಕೃಪಾ ನಡುವೆ ನಡೆಯುತ್ತಿದೆ, 12 ನೆ ಶತಮಾನದಲ್ಲಿ ಬಸವಣ್ಣನವರಿಗೆ ಹೇಗೆ ಕಾಟ ಕೊಟ್ಟಿದ್ದರೋ ಅದೇ ತರ ಈಗ ಬಿಜೆಪಿಯವರು ಯಡಿಯೂರಪ್ಪನವರಿಗೆ ಕೊಡುತ್ತಿದ್ದಾರೆ. ಅದನ್ನು ಅವರು ಬಹಿರಂಗಪಡಿಸುವಂತಿಲ್ಲ ಎಂದು ಕನಿಕರ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಚಪ್ಪನ್ ಇಂಚಿನ ಎದೆಯ ಮೋದಿ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಭೀಮಣ್ಣ ಖಂಡ್ರೆ ಅವರು ಒಂದು ಸಮುದಾಯವನ್ನು ಮುನ್ನಡೆಸಿದ್ದಾರೆ. ಹಾಗಾಗಿ ಈಶ್ವರ ಖಂಡ್ರೆ ಅವರಿಗೆ ಟಿಕೇಟ್ ನೀಡುವಂತೆ ನಾನೂ ಕೂಡಾ ಒತ್ತಾಯಿಸಿ 5 ಲಕ್ಷ ಮುಸಲ್ಮಾನರು ಬೆಂಬಲ ನೀಡುತ್ತಾರೆ ಎಂದು ಹೇಳಿದ್ದೆ. ಇಬ್ರಾಹಿಂ ಅವರಿಗೆ ಅಧಿಕಾರ ಬೇಕಿಲ್ಲ ಶರಣರ ಹೃದಯದಲ್ಲಿ ಜಾಗ ಬೇಕು ಎಂದು ಹೇಳಿದರು.
ಉಮೇಶ್ ಜಾಧವ್ ಚಿಲ್ಲರೆ ಕಾಸಿನ ಆಸೆಗೆ ಬಿಜೆಪಿಗೆ ಹೋಗಿದ್ದಾನೆ ಎಂದು ಕಟು ಶಬ್ದಗಳಿಂದ ಟೀಕಿಸಿದ, ಅವನನ್ನು ಸೋಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.