ಕಲಬುರಗಿ/ ಜೇವರ್ಗಿ: ಜೇವರ್ಗಿ ಮತಕ್ಷೇತ್ರದ ಶಾಸಕರು ಹಾಗೂ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅÀವರು ಶುಕ್ರವಾರ ಇಡೀದಿನ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಸಂಚರಿಸುವ ಮೂಲಕ ಸರಣಿಯಾಗಿ ಅಭಿವೃದ್ಧಿ ಯೋಜನೆಗಳಿಗೆ ಅಡಗಲ್ಲಿಡುವ, ಗುದ್ದಲಿ ಪೂಜೆ ಮಾಡುವ ಮೂಲಕ ತಾಲೂಕಿನ ಪ್ರಗತಿಗೆ ತಮಗಿರುವ ಒಲವು- ನಿಲುವು ಮತ್ತೊಮ್ಮೆ ಪ್ರದರ್ಶಿಸಿದರು.
ಭೀಮಾ ತೀರದಲ್ಲಿರುವ ಸುಕ್ಷೇತ್ರ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಿರ್ಗುಣ ಪಾದುಕೆ ದರ್ಶನ ಪಡೆದು ಪೂಜಾ ಕಾರ್ಯಕ್ರಮ ನೇರವರಿಸಿದ ನಂತರ ಅಲ್ಲಿಂದಲೇ ಶುರುವಾಗುವ ಜೇವರ್ಗಿ ಮತಕ್ಷೇತ್ರದಡಿ ಬರುವ ಇಟಗಾ, ಬೋಸಗಾ (ಕೆ), ಬೋಸಗಾ (ಬಿ) ಗ್ರಾಮಗಳಲ್ಲಿ ಹಲವು ಹತ್ತು ಯೋಜನೆಗಳಿಗೆ ಅಜಿಗಲ್ಲಿಟ್ಟರು.
ಇಟಗಾ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಮುಂದುವರೆದ ಕಾಮಗಾರಿ, ಮರಾಠ ಸಮುದಾಯದ ಚಿತಾಗಾರ ನಿರ್ಮಾಣದ 5 ಲಕ್ಷ ರು ಕಾಮಗಾರ, 5 ಲಕ್ಷ ರು ಮೊತ್ತದ ಮರಿಗಮ್ಮ ದೇವಸ್ಥಾನ ಅಭಿವೃದ್ಧಿ ಯೋಜನೆ, ಮಲ್ಲಿಕ್ ಶಾಬ್ ದರ್ಗಾ ಅಭಿವೃದ್ಧಿಯ 3 ಲಕ್ಷ ರು ಕಾಮಗಾರಿ, ಈದ್ಗಾ (ಖಬರಸ್ತಾನ್ ಆವರಣ ಗೋಡೆ) 3 ಲಕ್ಷ ರು ಕಾಮಗಾರಿಗೆ ಅಡಿಗಲ್ಲಿಟ್ಟರು.
ಇದಲ್ಲದೆ ಇಟಗಾ ಗ್ರಾಮದಲ್ಲೇ ಡಾ. ಅಜಯ್ ಸಿಂಗ್ ಅವರು ಅಂತು ಹನುಮಂತಗೋಳ ಮನೆಯಿಂದ ಮೊನಪ್ಪ ಶಿಲವಂತ ಮನೆಯವರೆಗೆ, ನೂರಂದ ಖರ್ಚಿ ಮನೆಯಿಂದ ಶ್ರೀಶೈಲ ಶಿಲವಂತ ಮನೆಯವರೆಗೆ ಹಾಗೂ ಕಾಮಣ್ಣ ಪೂಜಾರಿ ಮನೆಯಿಂದ ಜೇಟಪ್ಪ ಬಜಂತ್ರಿ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಮತ್ತು 50 ಲಕ್ಷ ರು ವೆಚ್ಚದಲ್ಲಿ ಗ್ರಾಮದಲ್ಲಿ ಸಾಮಾನ್ಯ ವಾರ್ಡ್ ನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಬೋಸಗಾ (ಕೆ) ಗ್ರಾಮದಲ್ಲಿ 19. 05 ಲಕ್ಷ ರು ಮೊತ್ತದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಬೋಸಗಾ ಕೆ ಗ್ರಾಮದ 125 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಉದ್ಘಾಟಿಸಿದರು. 5 ಲಕ್ಷ ರು ವೆಚ್ಚದ ಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಹಾಗೂ 3 ಲಕ್ಷ ರು ವೆಚ್ಚದ ಮಸೀದಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದರು.
ಬೋಸಗಾ ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ, 4 ಲಕ್ಷ ರು ವೆಚ್ಚದ ಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ, 10 ಲಕ್ಷ ರು ವೆಚ್ಚದ ಸಿಸಿ ರಸ್ತೆ ನಿರ್ಮಾಣ ಹಾಗೂ 40 ಲಕ್ಷ ರು ವೆಚ್ಚದಲ್ಲಿ ಬೋಸಗಾ (ಬಿ) ಗ್ರಾಮದಿಂದ ಸಿರಸಗಿಗೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀರಾದ ಸಿದ್ದಲಿಂಗ ರೆಡ್ಡಿ ಇಟಗಾ ರುಕ್ಕುಮ್ ಪಟೇಲ್ ಇಜೇರಿ, ಶಿವಶರಣಪ್ಪ ಕೋಬಾಳ, ಬೈಲಪ್ಪ ನೆಲೋಗಿ, ಕಾಶಿರಾಯಗೌಡ ಯಲಗೌಡ,ಸಂಗಣ್ಣ ಇಟಗಾ, ಗುರಲಿಂಗಪ್ಪಗೌಡ ಆಂದೋಲಾ,ಅಪ್ಪಾಸಾಬ್ ಹೊಸಮನಿ, ಮಲ್ಲನಗೌಡ ಪಾಟೀಲ್ , ರಿಯಾಜ್ ಪಟೇಲ್,ಪ್ರತಾಪ ಕಟ್ಟಿ, ಚಂದ್ರಕಾಂತ ಟಕಲೆ, ಮಲ್ಲಿಕಾರ್ಜುನ ಬೂದಿಹಾಳ, ಗೌತಮ್ ಇಟಗಾ, ಶಿವಾಜಿ ಹನುಮಂತಗೋಳ, ಶಿವರಾಜಗೌಡ ಪಾಟೀಲ್, ಚಂದ್ರಕಾಂತಗೌಡ ಪಾಟೀಲ್ ,ಭಿಮರಾಯಗೌಡ ಬಿರಾದಾರ, ಬಸುಗೌಡ ಪಾಟೀಲ್, ರಾಜು ಕವಲಗಿ, ಮಲ್ಲು ಕೆಂಚಬಾ, ಧರ್ಮಣ್ಣ ಗೌಂಡಿ, ಕಲ್ಲಪ್ಪ ಹಿಪ್ಪರಗಿ, ದಾದಾಗೌಡ ಪಾಟೀಲ್ , ಉಮ್ಮನಗೌಡ ಪಾಟೀಲ್ , ಮಲ್ಲಿಕಾರ್ಜುನ ಕಿ¯್ಲÉದರ,ರಾಮಲಿಂಗಗೌಡ ಬಿರಾದಾರ, ಹನುಮಂತರಾಯ ಸೌಕಾರ, ಬಸಪ್ಪ ಕೆ¯್ಲÉದಾ, ರಸಿದ್ದರಾಮಪ್ಪಗೌಡ ಪಾಟೀಲ್, ಶಿವಶರಣಪ್ಪ ಪಾಟೀಲ್ ಉಪಸ್ಥಿತರಿದ್ದರು.