ಬಸವಪ್ರಭು ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆ

0
17

ಸುರಪುರ: ನಗರದ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಸಮರ್ಥ ಹೊಲಿಗೆ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಜಯಲಲಿತಾ ಪಾಟೀಲ್ ಮಾತನಾಡಿ, ಮಹಿಳೆಂiುರು ಎಲ್ಲಾ ಕ್ಷೇತ್ರದಲ್ಲಿ ಇಂದು ಸ್ಪರ್ದೆಮಾಡುತ್ತಿದ್ದು, ಕುಟುಂಬದ ನಿರ್ವಾಹಣೆ ಜೊತೆಗೆ ಉದ್ಯೋಗದ ಜವಬ್ದಾರಿಕೂಡ ಅನೇಕರು ನಿರ್ವಹಿಸುತ್ತಿದ್ದಾರೆ, ಸರ್ವಕ್ಷೇತ್ರದಲ್ಲು ಪ್ರಗತಿ ಸಾಧಿಸುತ್ತಿರುವ ನಮ ಮಹಿಳೆಯರು ತ್ಯಾಗದ ಪ್ರತಿರೂಪ, ಕರುಣೆ, ಮಮತೆ, ಪ್ರೀತಿ, ವಾತ್ಸಲ್ಯಗಳ ತವನಿಧಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಮಹಿಳೆಯರು ಶಿಕ್ಷಣದ ಜೊತೆಗೆ ವಿಶೇಷ ತರಬೇತಿಗಳನ್ನು ಪಡೆಯುವ ಮೂಲಕ ಉದ್ಯೋಗ ನಿರ್ವಾಹಣೆಯ ಜೊತೆಗೆ ಆರ್ಥಿಕ ಪ್ರಗತಿ ಹೊಂದುತ್ತಾ ಸಬಲರಾಗಿ ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆ ಸದಸ್ಯರಾದ ಸುವರ್ಣ ಸಿದ್ರಾಮ ಎಲಿಗಾರ ಮಾತನಾಡಿ, ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ತರಬೇತಿ ಕೇಂದ್ರದ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಹೆಡಿಗಿನಾಳ, ಸಿದ್ದಣಗೌಡ ಹೆಬ್ಬಾಳ, ಮಲ್ಲು ಬಾದ್ಯಾಪುರ, ರೇಣುಕಾ ನಾಯಕ, ಸೌಭಾಗ್ಯ ಸುರಪುರ, ಅಖಿಲಾ ಜುಜಾರೆ, ನಜ್ಮಾ ಬೇಗಂ, ನಫಿಸಾ ಬೇಗಂ, ರೇಷ್ಮಾ ಬೇಗಂ ಸೇರಿದಂತೆ ಅನೇಕರಿದ್ದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಸಂಗೀತಾ ಪ್ರಾರ್ಥಿಸಿದರು, ಸಿದ್ದಪ್ರಸಾದ ಪಾಟೀಲ್ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here