ಶ್ರೀಶೈಲ್ ದೇವಸ್ಥಾನದಲ್ಲಿ ಸ್ಪರ್ಶ ದರ್ಶನ ಇಲ್ಲ, ಅಲಂಕಾರ ದರ್ಶನ ಭಾಗ್ಯ ಮಾತ್ರ; ಯುಗಾದಿ ಹಿನ್ನೆಲೆ

0
72

ಕಲಬುರಗಿ: ಆಂಧ್ರಪ್ರದೇಶದ ನಂದ್ಯಾಳ ಜಿಲ್ಲೆಯ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾರ್ಚ್ 19 ರಿಂದ 23ರ ವರೆಗೆ ಯುಗಾದಿ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ವಾಮಿಗಳ ಸ್ಪರ್ಶ ದರ್ಶನ‌ ಬದಲಾಗಿ ಅಲಂಕಾರ‌ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಯುಗಾದಿ ಮಹೋತ್ಸವ ಸಂದರ್ಭದಲ್ಲಿ ಪ್ರತಿನಿತ್ಯ 60-70 ಸಾವಿರದಂತೆ ಸುಮಾರು 6 ಲಕ್ಷ ಭಕ್ತಾಧಿಗಳು ಈ ಮಹಾಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಕರ್ನಾಟಕ ಪ್ರಾಂತ್ಯದಿಂದ, ಮಹಾರಾಷ್ಟ್ರದ ಸೋಲಾಪೂರ,‌ ಸಾಂಗ್ಲಿಯಿಂದ ಬರುವರು. ಕೆಲವರು ಪಾದಯಾತ್ರೆ ಮೂಲಕ ಸಹ ಆಗಮಿಸುವರು. ಸರ್ವ ಭಕ್ತರಿಗೆ ಸ್ವಾಮಿಗಳ ದರ್ಶನ ಭಾಗ್ಯ ಸಿಗಲೆಂದು ಈ ವ್ಯವಸ್ಥೆ ಮಾಡಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್ ಎಸ್.ಲವನ್ನ ತಿಳಿಸಿದ್ದಾರೆ.

Contact Your\'s Advertisement; 9902492681

ಉತ್ಸವದ ಮುನ್ನ ಮಾರ್ಚ್ 9 ರಿಂದ‌ 18ರ ವರೆಗೆ ನಿರ್ದಿಷ್ಟ ಸಮಯದಲ್ಲಿ 1500 ಜನರಂತೆ 4 ಹಂತಗಳಲ್ಲಿ ಮಾತ್ರ ಭಕ್ತಾದಿಗಳಿಗೆ ಟಿಕೆಟ್ ವಿತರಿಸಲಾಗುವುದು. 500 ರೂ. ಟಿಕೆಟ್ ದರದ ಮೇಲೆ ಭಕ್ತಾದಿಗಳು ಸ್ವಾಮಿಗಳ ಸ್ಪರ್ಶ ದರ್ಶನ ಪಡೆಯಬಹುದಾಗಿದೆ.

ಇನ್ನೂ ಯುಗಾದಿ ಮಹೋತ್ಸವ ಸಂದರ್ಭದಲ್ಲಿನ ದರ್ಶನ ವ್ಯವಸ್ಥೆಯ ಬದಲಾವಣೆ ಕುರಿತಂತೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬ್ಕವಿಯಲ್ಲಿ ಕರ್ನಾಟಕ‌ ಮತ್ತು‌ ಮಹಾರಾಷ್ಟ್ರ ಭಕ್ತ ವೃಂದದ ‌ವಿವಿಧ‌ ವೃಂದ‌ ಸಂಘಗಳ ಸಮಾವೇಶ ಮಾಡಿ‌ ಮಾಹಿತಿ ನೀಡಲಾಗಿದೆ‌‌ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here